ಲವ್ಯೂ ಅನ್ನೋಕೆ ಟೊಯೊಟಾ ವಿಲ್ ವಿ ಕಾರು ಸಾಕು!
ಎಸೆಂಟಿಕ್ ಅಥವಾ ಅಸಾಧಾರಣ ಕಾರುಗಳೆಂದಾಕ್ಷಣ ಟೊಯೊಟಾ ಕಂಪನಿಯ ವಿಲ್ ವಿ ಕಾರು ಹೆಚ್ಚಿನವರಿಗೆ ನೆನಪಾದೀತು. ಯುವತಿಯರನ್ನು ಗಮನದಲ್ಲಿಟ್ಟುಕೊಂಡು ಟೊಯೊಟಾ ಕಂಪನಿ ಈ ವಿಶೇಷ ವಿನ್ಯಾಸದ ಕಾರನ್ನು ಹೊರತಂದಿತ್ತು. ಸಿಂಪ್ಲಿಸಿಟಿ ದಿ ಬ್ಯೂಟಿ ಕಾನ್ಸೆಪ್ಟ್ ಮೂಲಕ ಈ ಕಾರನ್ನು ವಿನ್ಯಾಸ ಮಾಡಲಾಗಿತ್ತು.
ಸರಳ ಮತ್ತು ಹಳೆಯ ತಂತ್ರಜ್ಞಾನದ ಮೂಲಕ ಈ ಕಾರಿನ ಕ್ಯಾನ್ವಸ್ ರೂಫ್ ವಿನ್ಯಾಸ ಮಾಡಲಾಗಿದೆ. ಹುಣ್ಣಿಮೆ ರಾತ್ರಿಯಲ್ಲಿ ಈ ಕಾರಿನ ಮೇಲ್ಚಾವಣಿ ತೆರೆದು ನಕ್ಷತ್ರಗಳನ್ನು ಎಣಿಸಬಹುದು. ಯಾಕೆಂದರೆ ಇದರ ಮೇಲ್ಚಾವಣಿ ವಿನ್ಯಾಸವೇ ಹಾಗಿದೆ. ಇದು ಹಗುರ ಕಾರು ಕೂಡ ಹೌದು. ಈ ಕಾರು ಪ್ರೇಮಿಗಳಿಗೆ ಕೂಡ ಇಷ್ಟ. ಈ ಕಾಂಪ್ಯಾಕ್ಟ್ ಕಾರು 2000ನೇ ಇಸವಿಯಿಂದ 2001ನೇ ಇಸವಿರೆಗೆ ಮಾತ್ರ ಮಾರುಕಟ್ಟೆಯಲ್ಲಿತ್ತು.
ಇದಕ್ಕಿಂತಲೂ ವಿಚಿತ್ರ ವಿನ್ಯಾಸದ ಕಾರೊಂದು ಮುಂದಿನ ಪುಟದಲ್ಲಿದೆ. ಆ ಚಪ್ಪಟೆ ಕಾರಿನ ಹೆಸರು ಕೌಂಟಕ್!!


Click it and Unblock the Notifications








