"ದಿ ಥಿಂಗ್" ಕ್ಯೂಬಿವ್ಯಾಗನ್ ಎಂಬ ಬಕೆಟ್ ಕಾರು

ಫೋಕ್ಸ್ ವ್ಯಾಗನ್ ಕಂಪನಿಯ ದಿ ಥಿಂಗ್ ವಿಶೇಷ ವಿನ್ಯಾಸದ ಬಂಡಿ. ಇಂಗ್ಲೆಂಡಿನಲ್ಲಿ ಈ ವಾಹನದ ಹೆಸರು 181 ಕ್ಯೂರಿವ್ಯಾಗನ್. ಅಮೆರಿಕದಲ್ಲಿ ದಿ ಥಿಂಗ್ ಎಂದು ಹೆಸರು. ಮೆಕ್ಸಿಕೊದಲ್ಲಿ ಸಫಾರಿ ಹೆಸರಿನಿಂದ ಇದು ಜನಪ್ರಿಯ. ಈ ಸಣ್ಣ ಮಿಲಿಟರಿ ಜೀಪನ್ನು ಫೋಕ್ಸ್ ವ್ಯಾಗನ್ 1969ರಲ್ಲಿ ಉತ್ಪಾದಿಸಿದ್ದು, 1983ರವರೆಗೆ ಮಾರಾಟ ಮಾಡಿತ್ತು.

ಇದು ಫೋಕ್ಸ್ ವ್ಯಾಗನ್ ಬೀಟಲ್ ಮುಂದುವರೆದ ಆವೃತ್ತಿ. ಇದನ್ನು ಎರಡನೇ ವಿಶ್ವ ಯುದ್ಧದಲ್ಲಿ ಜರ್ಮನಿಯಲ್ಲಿ ಬಳಸಲಾಗಿತ್ತು. ಕ್ಯೂಬಿವ್ಯಾಗನ್ ಹೆಸರಿನ ಇಂಗ್ಲಿಷ್ ಅರ್ಥ "ಬಕೆಟ್ ಕಾರ್. ಕನ್ನಡದಲ್ಲೂ ಇದನ್ನು ಬಕೆಟ್ ಕಾರು ಎಂದು ಕರೀಬಹುದು!

ಫೋಕ್ಸ್ ವ್ಯಾಗನಿನಂತಹ ಕಂಪನಿಯೊಂದು ಬಕೆಟ್ ಆಕಾರದ ಈ ಡಬ್ಬಾ ಕಾರನ್ನು ಏಕೆ ಉತ್ಪಾದಿಸುತ್ತು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಇರಬಹುದು. ನಿಜ ಹೇಳಬೇಕೆಂದರೆ ಕಂಪನಿಯು ಸರಕಾರದ ಬೇಡಿಕೆಯ ಮೇರೆಗೆ ಇಂತಹ ವಿಲಕ್ಷಣ ಬಂಡಿಯನ್ನು ಉತ್ಪಾದನೆ ಮಾಡಿತ್ತು.

1960ರಲ್ಲಿ ಹಲವು ಐರೋಪ್ಯ ಸರಕಾರಗಳು ಯುರೋಪ ಜೀಪ್ ಹೆಸರಿನಲ್ಲಿ ಇಂತಹ ವಾಹನಗಳಿಗೆ ಬೇಡಿಕೆಯಿಟ್ಟಿತ್ತು. ಇದು ಹಗುರ, ಫೋರ್ ವೀಲ್ ಡ್ರೈವ್ ವಾಹನವಾಗಿದ್ದು ಮಿಲಿಟರಿ ಮತ್ತು ಸರಕಾರಿ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು.

ಆದರೆ ಸರಕಾರಗಳಿಗೆ ಇಂತಹ ವಾಹನಗಳು ಹಲವು ಸಂಖ್ಯೆಯಲ್ಲಿ ಬೇಕಾಗಿದ್ದವು. ಹಾಗಂತ ಅವು ಸರಕಾರದ ಖಜಾನೆಗೆ ಭಾರವಾಗಬಾರದು. ಹೀಗಾಗಿ ಕಡಿಮೆ ದರಕ್ಕೆ ಉತ್ಪಾದಿಸಿ ಕೊಡಿ ಎಂದು ಐರೋಪ್ಯ ಸರಕಾರುಗಳು ಕೇಳಿದ್ದವು. ಪರಿಣಾಮವಾಗಿ ಫೋಕ್ಸ್ ವ್ಯಾಗನ್ ಬಕೆಟ್ ಕಾರನ್ನು ಉತ್ಪಾದಿಸಿ ನೀಡಿತ್ತು. ಇದನ್ನು ಕೆಲವು ದೇಶಗಳು ಜೀಪು ಎಂದವು. ಇನ್ನು ಕೆಲವು ದೇಶಗಳು ಕಾರು ಎಂದಿವೆ.

ಯುವತಿಯರಿಗೆ ಇಷ್ಟವಾದ ವಿಶೇಷ ಕಾರು ಯಾವುದು? ಮುಂದಿನ ಪುಟದಲ್ಲಿ ಇನ್ನೊಂದು ವಿಲಕ್ಷಣ ಕಾರಿದೆ...

Most Read Articles

Kannada
English summary
Most unusual cars in the world. in UK Volkswagen The thing named Kurierwagen. This car popularly known in US the Thing, and in Mexico this car named Safari.The name Kubelwagen Meaning "bucket car".
Story first published: Monday, March 5, 2012, 16:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X