ಇಂತಹ ವಿಚಿತ್ರ ಕಾರನ್ನು ನೀವು ನೋಡಿರುವಿರಾ?

ವಿಲಕ್ಷಣ ಕಾರುಲೋಕದಲ್ಲಿ ಗಮನ ಸೆಳೆಯುವ ಕಾರಿನ ಹೆಸರು ಮೊಹಾಸ್ ಒಸ್ಟ್ರೈನ್ ಒಪೆರಾ. ಈ ಕಾರು ನೋಡಲು ಹಡಗಿನಂತೆ ಇದೆ. ಇದನ್ನು ವಿನ್ಯಾಸ ಮಾಡಿದವನ ಹೆಸರು ಬ್ರೂಸ್ ಬಾಲ್ಡ್ವಿನ್ ಮೊಹಾಸ್.

ಸುರಕ್ಷತೆಯ ದೃಷ್ಟಿಯಿಂದ ಈ ಕಾರಿನ ಎರಡು ಬದಿ ಕೂಡ ಸದೃಢ ಸ್ಟೀಲ್ ಬಾಡಿ ಹೊಂದಿದೆ. ಈ ಸ್ಟೀಲ್ ಬಾಡಿ ವಿನ್ಯಾಸದಿಂದಾಗಿ ಸಾಂಪ್ರಾದಾಯಿಕ ಕಾರುಗಳಂತೆ ಈ ಕಾರಿಗೆ ಸೈಡ್ ಡೋರ್ ಇಲ್ಲ.

ಈ ಕಾರಿನ ಹಿಂಭಾಗದ ಡಿಕ್ಕಿ ಸ್ಥಳದಲ್ಲಿ ಡೋರ್ ಇದ್ದು, ಹಿಂದಿನಿಂದ ಕಾರಿನೊಳಗೆ ಪ್ರವೇಶಿಸಬೇಕು. ವಿಶೇಷವೆಂದರೆ ಡ್ರೈವರ್ ಕೂಡ ಹಿಂದಿನ ಡಿಕ್ಕಿ ಮೂಲಕ ಪ್ರವೇಶಿಸಿ ಬಂಡಿ ಚಾಲು ಮಾಡಬೇಕು. ಇದು ಮಿನಿ ವ್ಯಾನ್ ನಂತೆ ಎರಡು ಬದಿ ಸೀಟುಗಳನ್ನು ಹೊಂದಿದ್ದು, ನಡುವೆ ಕಾಲುದಾರಿಯನ್ನು ಹೊಂದಿದೆ.

ಮೊಹಾಸ್ ಇಂತಹ ಎರಡು ಮಾಡೆಲ್ ಗಳನ್ನು ಪರಿಚಯಿಸಿದ್ದ. ಇದರಲ್ಲಿ ಒಂದು ಕಾರು 304 ಸಿಐಡಿ ವಿ 8ಎಂಜಿನ್ ಹೊಂದಿದೆ. ಮತ್ತೊಂದು 549 ಸಿಐಡಿ ವಿ8 ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಈ ಕಾರು ವಿಶೇಷ ಸುರಕ್ಷತಾ ಬಕೆಟ್ ಸೀಟುಗಳನ್ನು ಹೊಂದಿದೆ. ವಿಚಿತ್ರ ವಿನ್ಯಾಸದಿಂದಾಗಿ 1967ರಲ್ಲೇ ಈ ಕಾರು ಖರೀದಿಯ ಯೋಚನೆಯನ್ನು ಗ್ರಾಹಕರು ಕೈಬಿಟ್ಟಿದ್ದರು.

Most Read Articles

Kannada
English summary
Most unusual cars in the world. The Mohs Ostentatienne Opera Sedan. Bruce Baldwin Mohs designed this unusal car.
Story first published: Wednesday, March 7, 2012, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X