ನಿಸ್ಸಾನ್ ಮೈಕ್ರಾ, ಸನ್ನಿ ದುಬಾರಿ! ಯಾಕಂತೆ? ಎಷ್ಟಂತೆ?

ನಿಸ್ಸಾನ್ ಮೈಕ್ರಾ ಮೂರು ಪೆಟ್ರೋಲ್ ಆವೃತ್ತಿಗಳ ದರ ಸುಮಾರು 3 ಸಾವಿರ ರುಪಾಯಿಯಷ್ಟು ದುಬಾರಿಯಾಗಿದೆ. ಇದರೊಂದಿಗೆ ಡೀಸೆಲ್ ಮೈಕ್ರಾ ಆವೃತ್ತಿಗಳ ದರ ಸುಮಾರು 12 ಸಾವಿರ ರುಪಾಯಿಯಷ್ಟು ದುಬಾರಿಯಾಗಿದೆ.
ಸನ್ನಿ ಮೂರು ಪೆಟ್ರೋಲ್ ಆವೃತ್ತಿಗಳ ದರ ಕೂಡ ಸುಮಾರು 5 ಸಾವಿರ ರುಪಾಯಿಯಷ್ಟು ಹೆಚ್ಚಾಗಿದೆ. ಸನ್ನಿ ಕಾರು ಕಳೆದ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ದೇಶದ ರಸ್ತೆಗಿಳಿದಿತ್ತು. ಆದರೆ ಇತ್ತೀಚೆಗೆ ರಸ್ತೆಗಿಳಿದ ಸನ್ನಿ ಡೀಸೆಲ್ ಆವೃತ್ತಿ ದರದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ.
"ಬಿಡಿಭಾಗ ದರ ಹೆಚ್ಚಳ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದರಿಂದ ಕಾರುಗಳ ದರ ಹೆಚ್ಚಿಸುವುದು ಕಂಪನಿಗೆ ಅನಿವಾರ್ಯವಾಗಿತ್ತು. ಆದರೆ ಗ್ರಾಹಕರಿಗೆ ಹೆಚ್ಚು ತೊಂದರೆಯಾಗದಂತೆ ದರ ಹೆಚ್ಚಿಸಿದ್ದೇವೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಕಿಮಿನೊಡು ಟೊಕುಯಮಾ ಹೇಳಿದ್ದಾರೆ.
ದರ ಹೆಚ್ಚಳದ ಪಟ್ಟಿ(ಇದು ಎಕ್ಸ್ ಶೋರೂಂ ದೆಹಲಿ)
| ಮಾಡೆಲ್ | ದರ | ಹೆಚ್ಚಳ |
| ಮೈಕ್ರಾ ಎಸ್ಇ(ಪೆಟ್ರೋಲ್) | 4,13,500 ರು. | 3,000 ರು. |
| ಮೈಕ್ರಾ ಎಕ್ಸ್ಎಲ್(ಪೆ) | 4,75,500 | 3 ಸಾವಿರ ರು. |
| ಮೈಕ್ರಾ ಎಕ್ಸ್ ವಿ(ಪೆ) | 5,41,300 ರು. | 3 ಸಾವಿರ ರು. |
| ಮೈಕ್ರಾ ಎಕ್ಸ್ ವಿ ಡೀಸೆಲ್ | 5,84,900 ರು. | 12 ಸಾವಿರ ರು. |
| ಮೈಕ್ರಾ ಎಕ್ಸ್ ಎಲ್ ಡೀಸೆಲ್ | 6,29,300 ರು. | 12 ಸಾವಿರ ರು. |
| ಸನ್ನಿ ಎಕ್ಸ್ಇ ಪೆಟ್ರೋಲ್ | 5,83,00 ರು. | 5 ಸಾವಿರ ರು. |
| ಸನ್ನಿ ಎಕ್ಸ್ಎಲ್ ಪೆಟ್ರೋಲ್ | 6,93,000 ರು. | 5 ಸಾವಿರ ರು. |
| ಸನ್ನಿ ಎಕ್ಸ್ ವಿ ಪೆಟ್ರೋಲ್ | 7,73,000 ರು. | 5 ಸಾವಿರ ರು. |


Click it and Unblock the Notifications








