ಮತ್ತೆ ಯಾವಾಗ ಬರ್ತಿಯಾ ಸ್ಕೋಡಾ ಒಕ್ಟೊವಿಯಾ

Posted By:
Skoda Octovia
ದೇಶದ ರಸ್ತೆಗೆ ಸ್ಕೋಡಾ ಒಕ್ಟೊವಿಯಾ ಆಗಮಿಸುವುದನ್ನು ಈ ಹಿಂದೆಯೇ ಕನ್ಫರ್ಮ್ ಮಾಡಿದ್ದೆವು. ಕಂಪನಿಯ ಮೂಲಗಳು ಇತ್ತೀಚಿಗೆ ನೀಡಿದ ಮಾಹಿತಿ ಪ್ರಕಾರ ಒಕ್ಟೊವಿಯ ಮತ್ತೆ ಆಗಮಿಸುವುದು ಮುಂದಿನ ವರ್ಷವಂತೆ.

ಸದ್ಯ ರಸ್ತೆಯಲ್ಲಿರುವ ಸ್ಕೋಡಾ ಲೌರಾ ಸ್ಥಾನಕ್ಕೆ ನೂತನ ಒಕ್ಟೊವಿಯಾ ಅಥವಾ ಎ7 ಬರಲಿದೆ. ಮುಂದಿನ ವರ್ಷ ನಡೆಯಲಿರುವ ಜಿನಿವಾ ವಾಹನ ಪ್ರದರ್ಶನದಲ್ಲಿ ನೂತನ ಒಕ್ಟೊವಿಯಾ ಪ್ರದರ್ಶನ ಕಾಣುವ ನಿರೀಕ್ಷೆಯಿದೆ.

"ಒಕ್ಟೊವಿಯಾ ಹೆಸರು ನನಗಿಷ್ಟ. ಇದು ಸ್ಕೋಡಾದ ಅತ್ಯಧಿಕ ಮಾರಾಟದ ಕಾರು. ಈ ಕಾರು ಖಂಡಿತವಾಗಿಯೂ ಭಾರತಕ್ಕೆ ಮರಳಿ ಬರಲಿದೆ" ಎಂದು ಸ್ಕೋಡಾ ಒಕ್ಟೊವಿಯಾ ಆಗಮಿಸುವುದನ್ನು ಕಂಪನಿಯ ಅಧಿಕಾರಿಯೊಬ್ಬರಾದ ವಿನ್ ಫ್ರಿಡ್ ವಿಲ್ನಾಡ್ ಹೇಳಿದ್ದಾರೆ.

ಸುಮಾರು ಒಂದು ದಶಕದ ಹಿಂದೆ ಸ್ಕೋಡಾ ಕಂಪನಿಯು ಒಕ್ಟೊವಿಯಾ ಕಾರುಗಳನ್ನು ಪರಿಚಯಿಸಿತ್ತು. ಇದು ಕಂಪನಿಯ ಐಷಾರಾಮಿ ಮತ್ತು ಅಪ್ ಮಾರ್ಕೆಟ್ ಬ್ರಾಂಡಾಗಿ ಹೊರಹೊಮ್ಮಿತ್ತು. ಬಿಎಸ್5 ಪರಿಸರ ಮಾಲಿನ್ಯ ಸಮಸ್ಯೆಗಳಿಂದ ಕಂಪನಿಯು 2010ರಲ್ಲಿ ಒಕ್ಟೊವಿಯಾ ಉತ್ಪಾದನೆ ಸ್ಥಗಿತಗೊಳಿಸಿತ್ತು. (ಕನ್ನಡ ಡ್ರೈವ್ ಸ್ಪಾರ್ಕ್)

English summary
Skoda planning bring back Octovia Brand car to India. Next year current Skoda Laura replaced by new Octovia.
Story first published: Wednesday, February 15, 2012, 11:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark