ಬ್ರೇಕ್ ಡೌನ್: ಚಿಂತೆ ಬೇಡ; 'ಟಾಟಾ ಅಲರ್ಟ್' ನೆರವು

Written By:
ನಿಮ್ಮ ಟಾಟಾ ಟ್ರಕ್ ಬ್ರೇಕ್ ಡೌನ್ ಆಗಿದೆಯೇ? ಚಿಂತೆ ಬೇಡ, ನಿಮ್ಮ ನೆರವಿಗೆ ಧಾವಿಸಲಿದೆ 'ಟಾಟಾ ಅಲರ್ಟ್'. ಹೌದು, ಟಾಟಾ ಮೋಟಾರ್ಸ್ ನೂತನ ಮಾದರಿಯಲ್ಲಿ ದಿನದ 24 ಗಂಟೆಯೂ ಲಭ್ಯವಿರುವ 'ಟಾಟಾ ಅಲರ್ಟ್' ಸರ್ವಿಸ್ ಬಿಡುಗಡೆ ಮಾಡಿದೆ.

ಇದರಂತೆ 1800-209-7979 ಎಂಬ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಲ್ಲಿ ದೇಶದ್ಯಾಂತ ರಾಷ್ಟ್ರೀಯ ಹೈವೇ ಜಾಲದಲ್ಲಿ 'ಟಾಟಾ ಅಲರ್ಟ್' 24X7 ನೆರವು ಲಭಿಸಲಿದೆ. ನೀವು ಕರೆ ಮಾಡಿದ ನಾಲ್ಕು ತಾಸಿನೊಳಗೆ ನಿಮ್ಮ ನೆರವಿಗೆ ಟಾಟಾ ಮೋಟಾರ್ಸ್ ಆಗಮಿಸಲಿದೆ.

ಅಂದ ಹಾಗೆ ಟಾಟಾ ಮೋಟಾರ್ಸ್‌ನ ಮೀಡಿಯಂ ಹೆವಿ ಕಾಮರ್ಷಿಯಲ್ ವೆಹಿಕಲ್ (ಎಂಎಚ್‌ಸಿವಿ) ಹಾಗೂ ಹೆವಿ ಕಾಮರ್ಷಿಯಲ್ ವೆಹಿಕಲ್‌ಗೆ (ಎಚ್‌ಸಿವಿ) ಮಾತ್ರ ಈ ಸೇವೆ ಲಭ್ಯವಿದೆ. ಒಂದು ವೇಳೆ ಪ್ರಮುಖವಾದ ರಿಪೇರ್ ಅಗತ್ಯವಿದ್ದಲ್ಲಿ 48 ಗಂಟೆಯೊಳಗೆ ಟ್ರಕ್ ಸರಿಪಡಿಸಿ ರಸ್ತೆಗಿಳಿಸಲಾಗುವುದು ಎಂದು ಸಹ ಟಾಟಾ ಆಶ್ವಾಸನೆ ನೀಡಿದೆ. ಹಾಗೆಯೇ ತರಕಾರಿಗಳಂತಹ ಬೇಗನೇ ಕೊಳೆತು ಹೋಗುವ ಸಾಮಾಗ್ರಿಗಳನ್ನು ಕೊಂಡೊಯ್ಯುವಾಗ ಸಮಸ್ಯೆ ಸೃಷ್ಟಿಯಾದ್ದಲ್ಲಿ ವರ್ಗಾವಣೆ ನೆರವು ಕೂಡಾ ನೀಡಲಾಗುವುದು ಎಂದು ಕಂಪನಿ ಸ್ಪಷ್ಟಪಡಿಸಿದೆ.

ಹಾಗಿದ್ದರೂ ಈಗಷ್ಟೇ ಟಾಟಾ ಟ್ರಕ್ ಖರೀದಿಸಿದ ಹಾಗೂ ವಾರಂಟಿ ಚಾಲ್ತಿಯಲ್ಲಿರುವ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದೇ ಅಥವಾ ಹೊಸದಾಗಿ ಟ್ರಕ್ ಖರೀದಿ ಮಾಡುವ ಗ್ರಾಹಕರಿಗಾಗಿ ಮಾತ್ರವಾಗಿ ಈ ಸೇವೆ ಜಾರಿಗೊಳಿಸಲಾಗಿದೆಯೇ ಎಂಬುದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಮಾಹಿತಿ ನೀಡಲು ಟಾಟಾದಿಂದ ಸಾಧ್ಯವಾಗಿಲ್ಲ.

English summary
Tata Motors come up with a 24X7 breakdown assistance service called “Tata Alert”. The “Tata Alert” breakdown service will be available for Tata Motors’ Medium Heavy Commercial Vehicles(MHCV) and Heavy Commercial Vehicles(HCV).
Story first published: Saturday, October 27, 2012, 15:34 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark