ಟೊಯೊಟಾ ಕಾರುಗಳಿನ್ನು ದುಬಾರಿ, ಎಷ್ಟಂತೆ?

Posted By:
ಎಲ್ಲಾ ಶ್ರೇಣಿಯ ಕಾರುಗಳ ದರವನ್ನು ಶೇಕಡ 1.5ರಷ್ಟು ಹೆಚ್ಚಿಸಲು ಟೊಯೊಟಾ ಕಿರ್ಲೊಸ್ಕರ್ ಮೋಟರ್ಸ್ ನಿರ್ಧರಿಸಿದೆ. ಸೆಪ್ಟಂಬರ್ ಒಂದರ ನಂತರ ಕಂಪನಿಯ ಕಾರುಗಳ ದರ ಹೆಚ್ಚಳವಾಗಲಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದರಿಂದ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಟೊಯೊಟಾ ಕಂಪನಿಯು ದೇಶಕ್ಕೆ ಮಲೇಷ್ಯಾ, ಜಪಾನಿನಿಂದ ಹೆಚ್ಚಿನ ವಾಹನ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಕಂಡಿರುವುದರಿಂದ ಉತ್ಪಾದನಾ ವೆಚ್ಚ ದುಬಾರಿಯಾಗಿದೆ.

ಟೊಯೊಟಾ ಮೋಟರ್ಸ್ ಕಂಪನಿಯು ಬೆಂಗಳೂರಿನಲ್ಲಿ ಘಟಕ ಹೊಂದಿದ್ದು, ಕೆಲವು ಬಿಡಿಭಾಗಗಳನ್ನು ಇಲ್ಲಿ ಉತ್ಪಾದಿಸುತ್ತಿದೆ. ಕಳೆದ ಜೂನ್ ನಂತರ ಟೊಯೊಟಾ ಕಂಪನಿಯು ಕಾರುಗಳ ದರ ಹೆಚ್ಚಿಸುವುದು ಇದು ಎರಡನೇ ಬಾರಿ. ಈ ಹಿಂದೆ ಕಂಪನಿಯು ಶೇಕಡ 1ರಷ್ಟು ದರ ಹೆಚ್ಚಿಸಿತ್ತು.

"ರೂಪಾಯಿ ಮೌಲ್ಯ ಇಳಿಕೆಯಾಗಿರುವುದು ಕಂಪನಿಗೆ ಪ್ರಬಲ ಹೊಡೆತ ನೀಡುತ್ತಿದೆ. ಈ ಹೊರೆಯನ್ನು ಗ್ರಾಹಕರತ್ತ ವರ್ಗಾಯಿಸುವುದು ಅನಿವಾರ್ಯವಾಗಿದೆ" ಎಂದು ಟೊಯೊಟಾ ಕಿರ್ಲೊಸ್ಕರ್ ಮೋಟರ್ ಕಂಪನಿಯ ಡೆಪ್ಯೂಟಿ ಎಂಡಿ ಸಂದೀಪ್ ಸಿಂಗ್ ಹೇಳಿದ್ದಾರೆ.

ಕಂಪನಿಯು ಎಟಿಯೋಸ್ ಲಿವಾ, ಎಟಿಯೋಸ್, ಕರೊಲ್ಲಾ ಆಲ್ಟಿಸ್, ಇನ್ನೋವಾ, ಕ್ಯಾಮ್ರಿ, ಫಾರ್ಚ್ಯುನರ್, ಲಾಂಡ್ ಕ್ರೂಷರ್ ಇತ್ಯಾದಿ ಕಾರುಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ. ಕಂಪನಿಯು ಯಾವ ಕಾರಿಗೆ ಎಷ್ಟು ದರ ಹೆಚ್ಚಿಸಲಾಗುವುದು ಎನ್ನುವ ಮಾಹಿತಿ ನೀಡಿಲ್ಲ.

English summary
Toyota Kirloskar Motors, the Indian division of the Japanese carmaker has announced a price hike of 1.5 per cent of its entire range of cars. The company has stated that the price hike was necessary to placate the losses resulting from the low value of the Indian Rupee.
Story first published: Saturday, August 18, 2012, 10:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark