ಜೈ ಕನ್ನಡ: ಕಾರಿನ ಲೊಗೊದಲ್ಲೂ ಕನ್ನಡ ಪ್ರೇಮ

Posted By:
ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಿಸಾಕಿದ್ರೂನೆ, ಮೂಗ್ನಲ್ ಕನ್ನಡ್ ಪದವಾಡ್ತೀನಿ ಅಂತ ಜೆಪಿ ರಾಜರತ್ನಂ ಹೇಳಿದ್ದು ಅವರ ಕನ್ನಡ ಪ್ರೇಮಕ್ಕೆ ಒಂದು ಉದಾಹರಣೆ. ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಕವಿವಾಣಿ ಎಲ್ಲರಿಗೂ ಸ್ಪೂರ್ತಿದಾಯಕ.

ಕನ್ನಡ ಪ್ರೇಮವನ್ನು ವ್ಯಕ್ತಪಡಿಸಲು ರಿಕ್ಷಾಗಳಲ್ಲಿ, ಬಸ್ಸುಗಳಲ್ಲಿ, ಶಾಲೆಯಲ್ಲಿ, ಗೋಡೆಗೋಡೆಗಳಲ್ಲಿ ಸಂದೇಶಗಳು ಕಾಣಸಿಗುತ್ತವೆ. ಪುಟ್ಟ ಸೈಕಲಿನಲ್ಲೂ ಜೈ ಭುವನೇಶ್ವರಿ ಎನ್ನುವ ಸಂದೇಶ ಬರೆದಿರುತ್ತದೆ. ಬೆಂಗಳೂರಿನ ಬಹುಪಾಲು ರಿಕ್ಷಾಗಳಲ್ಲಿ ಕನ್ನಡದ ಬಗ್ಗೆ ಮುತ್ತಿನಂತ ಮಾತುಗಳು ಕಾಣಸಿಗುತ್ತವೆ.

ಕೆಲವರು ಕನ್ನಡ ಪ್ರೇಮ ಸಾರಲು ಕನ್ನಡ ಭಾಷೆಯಲ್ಲಿ ವಾಹನ ನಂಬರ್ ಪ್ಲೇಟ್ ಹಾಕಿಸಿಕೊಳ್ಳುತ್ತಾರೆ. ಆದರೆ ಫೇಸ್ ಬುಕ್ ನಲ್ಲಿ ಕನ್ನಡ ಹಾಸ್ಯವೆಂಬ ಪುಟದಲ್ಲಿ ಸಿಕ್ಕ ಟೊಯೊಟೊ ಇನ್ನೋವಾ ಕಾರಿನ ಫೋಟೊ ಆಸಕ್ತಿದಾಯಕವಾಗಿದೆ. ಅದರಲ್ಲಿ ಟೊಯೊಟಾ ಕಂಪನಿಯ ಲೊಗೊ, ಅಲ್ಲಲ್ಲ ಲಾಂಛನ ಕೂಡ ಕನ್ನಡ ಭಾಷೆಯಲ್ಲಿದೆ. ಆ ಕಾರಿನ ಮಾಲೀಕನ ಕನ್ನಡ ಪ್ರೇಮಕ್ಕೆ ಕನ್ನಡ ಡ್ರೈವ್ ಸ್ಪಾರ್ಕ್ ಕಡೆಯಿಂದ ಒಂದು ಅಭಿನಂದನೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Toyota Innova Car Logo in kannada language. Most of the Kannadigas love their language Kannada. This kannada language car logo found in Facebook Wall.
Story first published: Thursday, March 8, 2012, 12:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark