ದೀಪಾವಳಿ ಧಮಾಕಾ: ಟೊಯೊಟಾ ಲಿಮಿಟೆಡ್ ಅಡಿಷನ್ ಕರೊಲ್ಲಾ ಆಲ್ಟಿಸ್ ಬಿಡುಗಡೆ

Posted By:

ಈ ಹಿಂದಿನಂತೆ ಲಿಮಿಟೆಡ್ ಅಡಿಷನ್ ಕಾರುಗಳನ್ನು ಬಿಡುಗಡೆ ಮಾಡುವುದರಲ್ಲೇ ಟೊಯೊಟಾ ಗಮನ ಕೇಂದ್ರಿತವಾಗಿದೆ. ಈ ಬಾರಿಯ ದೀಪಾವಳಿ ಹಬ್ಬದ ಸೀಸನ್‌ನಲ್ಲೂ ಟೊಯೊಟಾದಿಂದ ಈ ಪ್ರಕ್ರಿಯೆ ಮುಂದುವರಿದಿದೆ.

ಗ್ರಾಹಕರಿಗೆ ರಿಯಾಯಿತ ದರದ ಆಫರ್ ನೀಡುವ ಬದಲು ಹಬ್ಬದ ಸೀಸನ್‌ನಲ್ಲಿ ಲಿಮೆಟೆಡ್ ಅಡಿಷನ್ ಕಾರುಗಳನ್ನು ಟೊಯೊಟಾ ಬಿಡುಗಡೆ ಮಾಡುತ್ತಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಏರೊ ಅಡಿಷನ್ ಬಿಡುಗಡೆ ಮಾಡಿದ್ದ ಟೊಯೊಟಾ ಇದೀಗ ಕಾಸ್ಮೆಟಿಕ್ಸ್ ಬದಲಾವಣೆಯ ನೂತನ ಕರೊಲ್ಲ ಆಲ್ಟಿಸ್ ಲಿಮಿಟೆಡ್ ಅಡಿಷನ್ ರಸ್ತೆಗಿಳಿಸಿವೆ.

ಈ ಬಾರಿಯ ಟೊಯೊಟಾ ಸಂಭ್ರಮಕ್ಕೆ ಪ್ರಮುಖವಾಗಿಯೂ ಎರಡು ಕಾರಣಗಳಿವೆ. ಒಂದೆಡೆ ದೀಪಾವಳಿ ಹಬ್ಬದ ಸಂಭ್ರಮವಾಗಿದ್ದರೆ ಮತ್ತೊಂದೆಡೆ ಹತ್ತನೇ ವರ್ಷಾಚರಣೆಯನ್ನು ಸಹ ಕಂಪನಿ ಆಚರಿಸುತ್ತಿದೆ. ಇದರಂತೆ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಆಲ್ಟಿಸ್ ಮಾರಾಟದಲ್ಲಿ ಕುಸಿತ ಕಂಡಿತ್ತು. ಆದರೆ ನೂತನ ಆವೃತ್ತಿ ಮೂಲಕ ಟ್ರ್ಯಾಕ್‌ಗೆ ಮರಳುವ ಭರವಸೆಯನ್ನು ಕಂಪೆನಿ ಹೊಂದಿದೆ.

To Follow DriveSpark On Facebook, Click The Like Button
ಆಲ್ಟಿಸ್ ಲಿಮಿಟೆಡ್ ಅಡಿಷನ್ ಬಾಹ್ಯ ವೈಶಿಷ್ಟ್ಯಗಳು

ಆಲ್ಟಿಸ್ ಲಿಮಿಟೆಡ್ ಅಡಿಷನ್ ಬಾಹ್ಯ ವೈಶಿಷ್ಟ್ಯಗಳು

ನೂತನ ಗ್ರಿಲ್

ರಿಸ್ಟೈಲ್ಡ್ ರಿಯರ್ ಕಾಂಬಿನೆಷನ್ ಲ್ಯಾಂಪ್ಸ್

ಲಘುವಾಗಿ ಮಾರ್ಪಡಿಸಿದ ಹಿಂಭಾಗದ ಬಂಪರ್

ಹಿಂಭಾಗದಲ್ಲಿ ಸೀಮಿತ ಆವೃತ್ತಿಯ ಬ್ಯಾಡ್ಜ್

ಆಲ್ಟಿಸ್ ಲಿಮಿಟೆಡ್ ಅಡಿಷನ್ ಇಂಟಿರಿಯಲ್ ಫೀಚರ್ಸ್

ಆಲ್ಟಿಸ್ ಲಿಮಿಟೆಡ್ ಅಡಿಷನ್ ಇಂಟಿರಿಯಲ್ ಫೀಚರ್ಸ್

5.8 ಇಂಚಿನ ಟಚ್‌ಸ್ಕ್ರೀನ್ ಆಡಿಯೋ ಸಿಸ್ಟಮ್ ಜತೆ ಬ್ಲೂಟೂತ್ ಕನೆಕ್ಟಿವಿಟಿ

ನ್ಯೂ ಫೋರ್-ಸ್ಪೋಕ್ ಸ್ಟೀರಿಂಗ್ ಟಯರ್

ಕೀಲೆಸ್ ಎಂಟ್ರಿ

ಟೊಯೊಟಾ ಕರೊಲ್ಲಾ ಆಲ್ಟಿಸ್ ಲಿಮಿಟೆಡ್ ಅಡಿಷನ್

ಟೊಯೊಟಾ ಕರೊಲ್ಲಾ ಆಲ್ಟಿಸ್ ಲಿಮಿಟೆಡ್ ಅಡಿಷನ್

ಈ ಎಲ್ಲ ಫೀಚರ್‌ಗಳು ಕರೊಲ್ಲಾ ಜೆ ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಕರೊಲ್ಲ ಆಲ್ಟಿಸ್ ಲಿಮಿಟೆಡ್ ಅಡಿಷನ್ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಲ್ಲೂ ಲಭ್ಯ.

ಟೊಯೊಟಾ ಕರೊಲ್ಲಾ ಆಲ್ಟಿಸ್ ಅಡಿಷನ್ ಕಲರ್

ಟೊಯೊಟಾ ಕರೊಲ್ಲಾ ಆಲ್ಟಿಸ್ ಅಡಿಷನ್ ಕಲರ್

ಶಾಂಪೇನ್ ಮೈಕಾ

ಸಿಲ್ವರ್ ಮೆಟಾಲಿಕ್

ಸೂಪರ್ ವೈಟ್

ಟೊಯೊಟಾ ಕರೊಲ್ಲಾ ಆಲ್ಟಿಸ್ ಲಿಮಿಟೆಡ್ ಅಡಿಷನ್ ದರ

ಟೊಯೊಟಾ ಕರೊಲ್ಲಾ ಆಲ್ಟಿಸ್ ಲಿಮಿಟೆಡ್ ಅಡಿಷನ್ ದರ

ಪೆಟ್ರೋಲ್ ಎಂಜಿನ್ ಟೊಯೊಟಾ ಕರೊಲ್ಲಾ ಆಲ್ಟಿಸ್ ಲಿಮಿಟೆಡ್ ಅಡಿಷನ್ ದರ: 11.45 ಲಕ್ಷ

ಡೀಸೆಲ್ ಎಂಜಿನ್ ಟೊಯೊಟಾ ಕರೊಲ್ಲಾ ಆಲ್ಟಿಸ್ ಲಿಮಿಟೆಡ್ ಅಡಿಷನ್ ದರ: 12.84 ಲಕ್ಷ

English summary
Toyota Kirloskar Motor (TKM) has launched another limited edition in Corolla Altis. Dubbed as 'Toyota Corolla Altis Limited' gets number of cosmetic changes. This is the second limited edition model of the Corolla Altis as a few months back the company had launched the Corolla Altis Aero edition. Have a look at here.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark