ಉಪ್ಪಿಗೆ ಮಡದಿ ಗಿಫ್ಟ್ ನೀಡಿದ ಜಾಗ್ವಾರ್ ಕಾರಿನ ವಿಮರ್ಶೆ

By Super

ಕನ್ನಡದ ಜನಪ್ರಿಯ ನಟ ಮತ್ತು ನಿರ್ದೇಶಕ ಉಪೇಂದ್ರ ಅವರ 43ನೇ ಹುಟ್ಟುಹಬ್ಬದ ಸಂಭ್ರಮವನ್ನು ಒಲವಿನ ಮಡದಿ ಪ್ರಿಯಾಂಕ ಹೆಚ್ಚಿಸಿದ್ದಾರೆ. ಉಪ್ಪಿಗೆ ಜಾಗ್ವಾರ್ ಕಂಪನಿಯ ಎಕ್ಸ್ಎಫ್ ಎಸ್ ಎಂಬ ಅದ್ದೂರಿ ಕಾರನ್ನು(ರಿಜಿಸ್ಟ್ರೇಷನ್ ನಂಬರ್ ಕೆಎ-51 ಟಿಆರ್ -1329-12/13) ಬರ್ತ್ ಡೇ ಗಿಫ್ಟ್ ಆಗಿ ನೀಡಿದ್ದಾರೆ.

ಹುಟ್ಟುಹಬ್ಬದಂದು ಕನ್ನಡ ಚಿತ್ರನಟ ದರ್ಶನಿಗೆ ಮಡದಿ ವಿಜಯಲಕ್ಷ್ಮಿ 1.38 ಕೋಟಿ ರುಪಾಯಿಯ ನೀಲಿ ಬಣ್ಣದ ಜಾಗ್ವಾರ್ ಎಕ್ಸ್ ಜೆ ಆರ್ ಕಾರು ನೀಡಿದ್ದರು. ಕತ್ರಿನಾ ಕೈಫ್ ಗೆ ಹಳೆ ಬಾಯ್ ಫ್ರೆಂಡ್ ಸಲ್ಲು ಆಡಿ ಕಾರೊಂದನ್ನು ಬರ್ತ್ ಡೇ ಗಿಫ್ಟಾಗಿ ನೀಡಿದ್ದರು. ನಲ್ಲನಿಗೆ ಕಿಮ್ ಎಂಬಾಕೆ ಲಂಬೊರ್ಗಿನಿ ಕಾರನ್ನೇ ನೀಡಿದ್ದರು. ಉಪ್ಪಿ ಗಿಫ್ಟ್ ಪಡೆದ ಕಾರಿನ ಸಂಪೂರ್ಣ ಡಿಟೈಲ್ಸ್ ಇಲ್ಲಿದೆ.

ಡಿ ಸೆಗ್ಮೆಂಟಿನ ಜಾಗ್ವಾರ್ ಎಕ್ಸ್ಎಫ್ ಎಸ್ ಕಾರನ್ನು ಉಪೇಂದ್ರ ಉಡುಗೊರೆಯಾಗಿ ಪಡೆದಿದ್ದಾರೆ. ಇದು 2,993ಸಿಸಿ ವಿ6 ಡೀಸೆಲ್ ಎಂಜಿನ್ ಹೊಂದಿದೆ. ಇದು 4 ಸಾವಿರ ಆವರ್ತನಕ್ಕೆ ಗರಿಷ್ಠ 275 ಹಾರ್ಸ್ ಪವರ್ ಮತ್ತು 2 ಸಾವಿರ ಆವರ್ತನಕ್ಕೆ ಗರಿಷ್ಠ 600ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಪ್ರಿಯಾಂಕ ನೀಡಿದ ಜಾಗ್ವಾರ್ ಕಾರಿನಲ್ಲಿ 5 ಜನರು ಕುಳಿತುಕೊಳ್ಳಬಹುದು. ಇದರ ಬೂಟ್ ಸ್ಥಳಾವಕಾಶ 510 ಲೀಟರ್ ಇದೆ. ಇದು ಟಿಲ್ಟ್ ಸ್ಟಿಯರಿಂಗ್, ಮುಂಭಾಗದಲ್ಲಿ ವೆಂಟಿಲೇಟೆಡ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಹೊಂದಿದೆ. ಇದು ಆರು ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ಸುಮಾರು 1,822 ಕೆ.ಜಿ ತೂಕದ ಜಾಗ್ವಾರ್ ಎಕ್ಸ್ಎಫ್ ಎಸ್ ಕಾರು ಬಾಡಿ ಬಣ್ಣದ ಬಂಪರ್, ಟೆಕ್ನೊ ಮೀಟರ್, ಅಲಾಯ್ ವೀಲ್, ಒಆರ್ ವಿಎಂ ಇಂಡಿಕೇಟರ್, ಟ್ರಿಪ್ ಮೀಟರ್, ಕ್ಷೆನನ್ ಹೆಡ್ ಲ್ಯಾಂಪ್, ಹೆಡ್ ಲ್ಯಾಂಪ್ ವಾಷರ್ ಇತ್ಯಾದಿ ಸ್ಟಾಂಡರ್ಡ್ ವಿಶೇಷತೆಗಳನ್ನು ಹೊಂದಿದೆ.

ಉಪೇಂದ್ರ ಗಿಫ್ಟ್ ಪಡೆದ ನೂತನ ಜಾಗ್ವಾರ್ ಕಾರಲ್ಲಿ ಸಾಕಷ್ಟು ಸುರಕ್ಷತೆಯ ಫೀಚರುಗಳೂ ಇವೆ. ಇದರಲ್ಲಿ 8 ಏರ್ ಬ್ಯಾಗುಗಳು, ಪಾರ್ಕಿಂಗ್ ಸೆನ್ಸಾರ್, ಫಾಗ್ ಲ್ಯಾಂಪ್, ಟ್ರಾಕ್ಷನ್ ಕಂಟ್ರೋಲ್, ಇಬಿಡಿ, ಎಬಿಎಸ್, ಇಎಸ್ ಪಿ, ಸೀಟ್ ಬೆಲ್ಟ್ ಸೇರಿದಂತೆ ಹತ್ತು ಹಲವು ಸೇಫ್ಟಿ ಫೀಚರುಗಳಿವೆ.

ಆರಾಮದಾಯಕ ಮತ್ತು ಅದ್ದೂರಿ ಪ್ರಯಾಣಕ್ಕೆ ಇದು ಸೂಕ್ತ ಕಾರು. ಇದರಲ್ಲಿ ತಂಪಾದ ಪ್ರಯಾಣಕ್ಕೆ ಡ್ಯೂಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಪವರ್ ವಿಂಡೋಸ್, ಸೆಂಟ್ರಲ್ ರಿಮೋಟ್ ಲಾಕಿಂಗ್, ರಿಮೋಟ್ ಬೂಟ್, ರಿಮೋಟರ್ ಫ್ಯೂಯಲ್ ಫಿಲ್ಟರ್, ಹಿಂಭಾಗದ ವೈಪರ್ ಮತ್ತು ಡಿಫಾಗರ್ ಸೇರಿದಂತೆ ಹತ್ತು ಹಲವು ಫೀಚರುಗಳಿವೆ.

ಉಪ್ಪಿಗೆ ಸಿಕ್ಕ ಜಾಗ್ವಾರ್ ಗಿಫ್ಟ್

ಉಪ್ಪಿಗೆ ಸಿಕ್ಕ ಜಾಗ್ವಾರ್ ಗಿಫ್ಟ್

ಒಲವಿನ ಮಡದಿಯಿಂದ ಡಿ ಸೆಗ್ಮೆಂಟಿನ ಜಾಗ್ವಾರ್ ಎಕ್ಸ್ಎಫ್ ಡೀಸೆಲ್ ಎಸ್ ಕಾರನ್ನು ಉಪೇಂದ್ರ ಉಡುಗೊರೆಯಾಗಿ ಪಡೆದಿದ್ದಾರೆ. ಆ ಕಾರಿನ ವಿಶೇಷತೆ ತಿಳಿಯಲು ಮುಂದಿನ ಚಿತ್ರಗಳನ್ನು ನೋಡಿರಿ.

ಸೂಪರ್ ಆಗಿರೋ ಅದ್ದೂರಿ ಕಾರು

ಸೂಪರ್ ಆಗಿರೋ ಅದ್ದೂರಿ ಕಾರು

ಜಾಗ್ವಾರ್ ಎಕ್ಸ್ಎಫ್ ಎಸ್ 2,993ಸಿಸಿ ವಿ6 ಡೀಸೆಲ್ ಎಂಜಿನ್ ಹೊಂದಿದೆ. ಇದು 4 ಸಾವಿರ ಆವರ್ತನಕ್ಕೆ ಗರಿಷ್ಠ 275 ಹಾರ್ಸ್ ಪವರ್ ಮತ್ತು 2 ಸಾವಿರ ಆವರ್ತನಕ್ಕೆ ಗರಿಷ್ಠ 600ಎನ್ಎಂ ಟಾರ್ಕ್ ಪವರ್ ನೀಡುತ್ತದೆ

ಕಾರ್ ಹೇಗಿದೆ?

ಕಾರ್ ಹೇಗಿದೆ?

ಸುಮಾರು 1,822 ಕೆ.ಜಿ ತೂಕದ ಜಾಗ್ವಾರ್ ಎಕ್ಸ್ಎಫ್ ಎಸ್ ಕಾರು ಬಾಡಿ ಬಣ್ಣದ ಬಂಪರ್, ಟೆಕ್ನೊ ಮೀಟರ್, ಅಲಾಯ್ ವೀಲ್, ಒಆರ್ ವಿಎಂ ಇಂಡಿಕೇಟರ್, ಟ್ರಿಪ್ ಮೀಟರ್, ಕ್ಷೆನನ್ ಹೆಡ್ ಲ್ಯಾಂಪ್, ಹೆಡ್ ಲ್ಯಾಂಪ್ ವಾಷರ್ ಇತ್ಯಾದಿ ಸ್ಟಾಂಡರ್ಡ್ ವಿಶೇಷತೆಗಳನ್ನು ಹೊಂದಿದೆ

ಸೇಫ್ಟಿ ವಿಷ್ಯ

ಸೇಫ್ಟಿ ವಿಷ್ಯ

ಇದರಲ್ಲಿ 8 ಏರ್ ಬ್ಯಾಗುಗಳು, ಪಾರ್ಕಿಂಗ್ ಸೆನ್ಸಾರ್, ಫಾಗ್ ಲ್ಯಾಂಪ್, ಟ್ರಾಕ್ಷನ್ ಕಂಟ್ರೋಲ್, ಇಬಿಡಿ, ಎಬಿಎಸ್, ಇಎಸ್ ಪಿ, ಸೀಟ್ ಬೆಲ್ಟ್ ಸೇರಿದಂತೆ ಹತ್ತು ಹಲವು ಸೇಫ್ಟಿ ಫೀಚರುಗಳಿವೆ

ಫೀಚರುಗಳು ಸಾರ್ ಫೀಚರುಗಳು

ಫೀಚರುಗಳು ಸಾರ್ ಫೀಚರುಗಳು

ಪವರ್ ವಿಂಡೋಸ್, ಸೆಂಟ್ರಲ್ ರಿಮೋಟ್ ಲಾಕಿಂಗ್, ರಿಮೋಟ್ ಬೂಟ್, ರಿಮೋಟರ್ ಫ್ಯೂಯಲ್ ಫಿಲ್ಟರ್, ಹಿಂಭಾಗದ ವೈಪರ್ ಮತ್ತು ಡಿಫಾಗರ್ ಮುಂತಾದ ಫೀಚರುಗಳಿವೆ.

ಲಗ್ಷುರಿ ಕಾರ್

ಲಗ್ಷುರಿ ಕಾರ್

ಪ್ರಿಯಾಂಕ ನೀಡಿದ ಜಾಗ್ವಾರ್ ಕಾರಿನಲ್ಲಿ 5 ಜನರು ಕುಳಿತುಕೊಳ್ಳಬಹುದು. ಆರು ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

ದರವೆಷ್ಟು?

ದರವೆಷ್ಟು?

ಜಾಗ್ವಾರ್ ಎಕ್ಸ್ ಎಫ್ ಎಸ್ ಮುಂಬೈ ಆನ್ ರೋಡ್ ದರ ಸುಮಾರು 1 ಕೋಟಿ ರು. ಆಸುಪಾಸಿನಲ್ಲಿದೆ.

ಹ್ಯಾಪಿ ಬರ್ತ್ ಡೇ ಉಪ್ಪಿ

ಹ್ಯಾಪಿ ಬರ್ತ್ ಡೇ ಉಪ್ಪಿ

ಉಪ್ಪಿಗೆ ಕನ್ನಡ ಡ್ರೈವ್ ಸ್ಪಾರ್ಕ್ ಕಡೆಯಿಂದ 43ನೇ ಹುಟ್ಟುಹಬ್ಬದ ಶುಭಾಶಯಗಳು.

More from DriveSpark

Article Published On: Monday, September 17, 2012, 15:20 [IST]
English summary
Real Star Upendra has been gifted a Jaguar XF S by his wife Priyanka Upendra on the occasion of his 43rd birthday. The Jaguar XF S is a luxury sedan powered by a 3-litre diesel engine. Its sporty design and aggressive performance must suit Upendra. Here is a detailed review of the XF S.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+