ಫೋರ್ಡ್ ಇಕೊಸ್ಪೋರ್ಟ್ ದಾಖಲೆಯ ಬುಕ್ಕಿಂಗ್?

Written By:
ಕಳೆದ ತಿಂಗಳಷ್ಟೇ ಭಾರತ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದ ಬಹುನಿರೀಕ್ಷಿತ ಎಸ್‌ಯುವಿ ಫೋರ್ಡ್ ಇಕೊಸ್ಪೋರ್ಟ್, ದಾಖಲೆ ಸಂಖ್ಯೆ ಬುಕ್ಕಿಂಗ್ ದಾಖಲಿಸಿಕೊಂಡಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.

ಈ ಬಗ್ಗೆ ಫೋರ್ಡ್ ಕಂಪನಿಯಿಂದ ಯಾವುದೇ ಅಧಿಕೃತ ಸ್ಪಷ್ಟನೆಗಳು ಬಂದಿಲ್ಲ. ಆದರೆ ಮೂಲಗಳ ಪ್ರಕಾರ ಜೂನ್ ತಿಂಗಳಲ್ಲಿ ಬಿಡುಗಡೆಗೊಂಡಿದ್ದ ಫೋರ್ಡ್ ಇಕೊಸ್ಪೋರ್ಟ್ ಈಗಾಗಲೇ 25,000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಂಡಿದೆ. ಒಂದು ವೇಳೆ ಮೇಲೆ ಕೊಡಲಾಗಿರುವ ಮಾಹಿತಿಯು ನಿಜವಾದ್ಧಲ್ಲಿ ಇದು ಆಟೋ ಇತಿಹಾಸದಲ್ಲೇ ನೂತನ ದಾಖಲೆಯಾಗಿರಲಿದೆ.

ಜೂನ್ ತಿಂಗಳಲ್ಲಿ ಶೇಕಡಾ 20ರಷ್ಟು ಪ್ರಗತಿ ಸಾಧಿಸಿದ್ದ ಫೋರ್ಡ್ 7,145 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಇಲ್ಲೂ ಇಕೊಸ್ಪೋರ್ಟ್ ಮಾರಾಟ ಸಂಖ್ಯೆ ಬಹಿರಂಗವಾಗದಿದ್ದರೂ ಫೋರ್ಡ್ ಏರಿಕೆಯಲ್ಲಿ ಈ ಎಸ್‌ಯುವಿ ಪಾತ್ರ ಬಹಳಷ್ಟಿತ್ತು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು.

ಇನ್ನು ಇತಿಹಾಸದ ದಾಖಲೆ ಪುಟಗಳನ್ನು ಒಂದೊಂದಾಗಿ ತೆರೆಯುತ್ತಾ ಸಾಗಿದ್ದಲ್ಲಿ, ಮಾರುತಿ ಸ್ವಿಫ್ಟ್ 40 ದಿನಗಳಲ್ಲಿ 108,000 ಬುಕ್ಕಿಂಗ್ ದಾಖಲಿಸಿರುವುದು ದೊಡ್ಡ ಸಾಧನೆಯಾಗಿತ್ತು. ಅದೇ ರೀತಿ ಮಾರುತಿ ಆಲ್ಟೊ ಒಂದೇ ವಾರದಲ್ಲಿ 21,000, ಹೋಂಡಾ ಅಮೇಜ್ ಎರಡು ವಾರಗಳಲ್ಲಿ 22,000, ಮಹೀಂದ್ರ ಎಕ್ಸ್‌ಯುವಿ500 ಹಾಗೂ ರೆನೊ ಡಸ್ಟರ್ 2.5 ತಿಂಗಳಲ್ಲಿ 18,000 ಬುಕ್ಕಿಂಗ್ ದಾಖಲಿಸಿಕೊಂಡಿತ್ತು.

English summary
It’s been a little over 17 days since the launch of Ford EcoSport. DNA has now revealed that the total bookings have crossed 25,000 units. But, Ford is yet to confirm this number.
Story first published: Saturday, July 13, 2013, 13:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark