60,000 ಯುನಿಟ್ ದಾಟಿದ ಇಕೊಸ್ಪೋರ್ಟ್ ಬುಕ್ಕಿಂಗ್

Written By:

ಕಳೆದ ಜೂನ್ ತಿಂಗಳಲ್ಲಿ ಭಾರತದಲ್ಲಿ ಲಾಂಚ್ ಆಗಿದ್ದ ಕಾಂಪಾಕ್ಟ್ ಎಸ್‌ಯುವಿ ಬೇಡಿಕೆ ಇನ್ನೂ ಕುಂದಿಲ್ಲ. ವರದಿಗಳ ಪ್ರಕಾರ ಈ ಕಾಂಪಾಕ್ಟ್ ಎಸ್‌ಯುವಿ ಈಗಾಗಲೇ 60,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಂಡಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಈ ನಡುವೆ ಭಾರಿ ಸಂಖ್ಯೆಯಲ್ಲಿ ಬುಕ್ಕಿಂಗ್ ಕಂಡುಬಂದಿರುವುದರಿಂದ 1 ಲೀಟರ್ ಇಕೊಸ್ಪೋರ್ಟ್ ಸೇರಿದಂತೆ ಕೆಲವೊಂದು ಪ್ರಮುಖ ವೆರಿಯಂಟ್‌ಗಳ ಬುಕ್ಕಿಂಗ್ ಸ್ಥಗಿತಗೊಳಿಸಿರುವುದರ ಬಗ್ಗೆಯೂ ಮಾಹಿತಿಯಿದೆ. ಉತ್ಪಾದನಾ ಸಾಮರ್ಥ್ಯಕ್ಕಿಂತಲೂ ಗ್ರಾಹಕರ ಬೇಡಿಕೆ ಗಣನೀಯವಾಗಿ ವರ್ಧಿಸುತ್ತಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ.

Ford EcoSport

ಅಂದ ಹಾಗೆ ಇದುವರೆಗೆ 25,000ದಷ್ಟು ಯುನಿಟ್‌ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಅಲ್ಲದೆ ಈಗಾಗಲೇ ಕಾಯುವಿಕೆ ಅವಧಿ ಮೂರರಿಂದ ಐದು ತಿಂಗಳ ವರೆಗೆ ಏರಿಕೆಯಾಗಿದೆ. ಇದು ನಿರ್ದಿಷ್ಟ ವೆರಿಯಂಟ್‌ಗಳನ್ನು ಅವಲಂಬಿಸಿರಲಿದೆ.

ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದ ಬೆನ್ನಲ್ಲೇ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಹೋಂಡುರಸ್‌‍ಗಳಂತಹ ರಾಷ್ಟ್ರಗಳಿಗೂ ಇಕೊಸ್ಪೋರ್ಟ್ ರಫ್ತು ಕಾರ್ಯವನ್ನು ಆಕ್ಟೋಬರ್‌ನಲ್ಲಿ ಆರಂಭಿಸಲಾಗಿತ್ತು.

ಈ ಮೂಲಕ ಅಕ್ಟೋಬರ್‌ನಲ್ಲಿ ಒಟ್ಟಾರೆಯಾಗಿ 14,935 ಯುನಿಟ್‌ಗಳ ಮಾರಾಟ ಗಿಟ್ಟಿಸಿಕೊಂಡಿತ್ತು. ಆಂಬಿಯಟ್, ಟ್ರೆಂಡ್, ಟೈಟಾನಿಯಂ ಮತ್ತು ಟೈಟಾನಿಯಂ (ಒ) ವೆರಿಯಂಟ್‌ಗಳಲ್ಲಿ ಲಭ್ಯವಿರುವ ಇಕೊಸ್ಪೋರ್ಟ್ ದೆಹಲಿ ಎಕ್ಸ್ ಶೋ ರೂಂ ದರ 5.82 ಲಕ್ಷ ರು.ಗಳಿಂದ ಆರಂಭವಾಗಿ 9.37 ಲಕ್ಷ ರು.ಗಳ ವರೆಗಿದೆ.

English summary
Ford India’s Managing Director Joginder Singh told business newspapers last week that bookings for the Ford EcoSport have topped 60,000 orders.
Story first published: Tuesday, November 26, 2013, 15:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark