ಮಹೀಂದ್ರ ಇ2ಒ ಎಲೆಕ್ಟ್ರಿಕ್ ಕಾರು ನೇಪಾಳದಲ್ಲಿ ಲಾಂಚ್

ದೇಶದ ಪ್ರಮುಖ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಮಹೀಂದ್ರ ಸಂಸ್ಥೆಯ ರೇವಾ ಎಲೆಕ್ಟ್ರಿಕಲ್ ವೆಹಿಕಲ್ಸ್, ಸಂಪೂರ್ಣ ವಿದ್ಯುತ್ ಚಾಲಿತ ಇ2ಒ ಜಿರೋ ಎಮಿಷನ್ ಕಾರನ್ನು ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ಲಾಂಚ್ ಮಾಡಿದೆ.

ಭಾರತದಂತೆ ನೇಪಾಳ ಕೂಡಾ ಇಂಧನ ಪೂರೈಕೆಗೆ ಇತರ ದೇಶಗಳನ್ನು ಅವಲಂಬಿಸಿದೆ. ಇದು ಬೆಳೆದು ಬರುತ್ತಿರುವ ಏಷ್ಯಾ ರಾಷ್ಟ್ರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಗಣನೀಯ ವರ್ಧನೆಗೆ ಕಾರಣವಾಗಿದೆ.

ಇದರಂತೆ ಮಹೀಂದ್ರ ಎಲೆಕ್ಟ್ರಿಕ್ ಕಾರುಗಳು ಸಂಪೂರ್ಣ ಪರಿಸರ ಸ್ನೇಹಿ ಮಾತ್ರವಲ್ಲದೆ ಭವಿಷ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಿಗೆ ಬದಲಿ ವ್ಯವಸ್ಥೆ ಎನಿಸಿಕೊಳ್ಳಲಿದೆ. ಸದ್ಯ ಎಲೆಕ್ಟ್ರಿಕ್ ಕಾರುಗಳು ನೇಪಾಳದಲ್ಲಿ ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದು ಕುತೂಹಲವೆನಿಸಿದೆ. ನೇಪಾಳದಲ್ಲಿ ನೂತನ ಮಹೀಂದ್ರ ರೇವಾ ಇ2ಒ ದರ 22 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.


ಇವನ್ನೂ ಓದಿರಿ: ಬೆಂಗಳೂರಿನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಹೀಂದ್ರ 'ಇ2ಒ'

ವೈಶಿಷ್ಟ್ಯ

  • ಪೂರ್ಣ ಸ್ವಯಂಚಾಲಿತ ವ್ಯವಸ್ಥೆ, 100 ಕೀ.ಮೀ. ವ್ಯಾಪ್ತಿಯಲ್ಲಿ ಸಂಚರಿಸಲು ಅನುಕೂಲ.
  • ಎಲ್ಲ ಮನೆಗಳಲ್ಲಿ ಲಭ್ಯವಿರುವ 15ಎ ಸಾಕೆಟ್ ಮೂಲಕವು ಚಾರ್ಜ್ ಮಾಡಬಹುದು.
  • ವಿಶೇಷವಾದ ಕಾರು ತಂತ್ರಜ್ಞಾನವು ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಮೂಲಕವು (ಎಸಿ ಚಾಲನೆ, ಲಾಕ್ ಮಾಡುವುದು, ಅನ್‌ಲಾಕ್ ಮಾಡುವುದು ಇತ್ಯಾದಿ) ನಿರ್ವಹಣೆ ಮಾಡಬಹುದು.
  • ರೇವಾ REVive ಪ್ರಥಮ ದೂರ ನಿಯಂತ್ರಿತ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಅನ್ನು ಹೊಂದಿದೆ.
  • ಲಿಥಿಯಂ ಇಯಾನ್ ಬ್ಯಾಟರಿ ಆಳವಡಿಕೆ

More from DriveSpark

Article Published On: Friday, August 16, 2013, 14:13 [IST]
English summary
Mahindra Reva Electric Vehicles, part of the business conglomerate Mahindra Group, has launched Mahindra e2o, a zero—emission and fully automatic electric car, in Nepal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+