ಮಹೀಂದ್ರ ಮಾನ್ಸೂನ್ ಚಾಲೆಂಜ್‌ಗೆ ನೀವು ರೆಡಿನಾ?

Written By:
To Follow DriveSpark On Facebook, Click The Like Button
ಅಪೊಲೊ ಟೈರ್ ಜತೆ ಸಹಭಾಗಿತ್ವ ಹೊಂದಿರುವ ಮಹೀಂದ್ರ ಅಡ್ವೆಂಚರ್ ಮಾನ್ಸೂನ್ ಚಾಲೆಂಜ್ ಮೂರನೇ ಆವೃತ್ತಿಯನ್ನು ಆರಂಭಿಸಿದೆ. ಸಮಯ, ವೇಗ ಹಾಗೂ ಅಂತರ (ಟಿಎಸ್‌ಡಿ) ಈ ಸಿರೀಸ್‌ನ ಪ್ರಮುಖ ಸವಾಲಾಗಿರಲಿದೆ.

ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಆಯೋಜಿಸುತ್ತಿರುವುದರಿಂದ ಸಹಜವಾಗಿಯೇ ಆಫ್ ರೋಡ್ ಉತ್ಸಾಹಿಗಳಲ್ಲಿ ಅತೀವ ಕ್ರೇಜ್ ಹುಟ್ಟಿಕೊಂಡಿದೆ. ನಮ್ಮ ಬೆಂಗಳೂರಿನಲ್ಲಿ ಆರಂಭಿಸಿರುವ ರಾಲಿಯು ಮಂಗಳೂರು, ಶಿಮೊಗ್ಗ, ಗೋವಾ ಹಾದಿಯಾಗಿ ಮೂರು ದಿನಗಳಲ್ಲಿ 1000 ಕೀ.ಮೀ. ದೂರವನ್ನು ಕ್ರಮಿಕರಿಸಲಿದೆ.

ಒಟ್ಟು 30ಕ್ಕೂ ಹೆಚ್ಚು ವಾಹನಗಳು ಭಾಗವಹಿಸುವ ರೇಸ್‌ನಲ್ಲಿ ವಿಜೇತ ತಂಡಗಳಿಗೆ 13 ಲಕ್ಷ ರು. ನಗದು ಬಹುಮಾನ ದೊರಕಲಿದೆ.

ಇತ್ತೀಚಿನ ಕಾಲಘಟ್ಟದಲ್ಲಿ ದೇಶದಲ್ಲಿ ಮೊಟೊಸ್ಪೋರ್ಟ್ ಈವೆಂಟ್‌ಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಇದರಂತೆ ಆಟೋ ತಯಾರಕ ಕಂಪನಿಗಳು ಸಹ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಿದೆ.

English summary
Mahindra Adventure has started the 3rd edition of Mahindra ‘Monsoon Challenge in association with Apollo Tyres. The TSD (time, speed, distance) rally is one of the Challenge series of motorsport events held by the leading Indian SUV manufacturer.
Story first published: Friday, July 26, 2013, 14:51 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark