ಬೇಡಿಕೆ ಕಾಯ್ದುಕೊಂಡ ಮಹೀಂದ್ರ ಟ್ರಾಕ್ಟರ್

By Nagaraja

ಮಾನ್ಸೂನ್ ಕಾಲಘಟ್ಟದಲ್ಲಿ ರೈತರು ತಮ್ಮ ತಮ್ಮ ಹೊಲ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಇದರಂತೆ ಈ ಮುಂಗಾರು ಸಮಯದಲ್ಲಿ ಬೇಡಿಕೆ ಕಾಯ್ದುಕೊಂಡಿರುವ ಮಹೀಂದ್ರ ಟ್ರಾಕ್ಟರ್ ಮಾರಾಟ ಅಂಕಿಅಂಶಗಳಲ್ಲೂ ಪ್ರಗತಿಯನ್ನು ಸಾಧಿಸಿದೆ.

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದಾಗ ಶೇಕಡಾ 9ರಷ್ಟು ಮಾರಾಟ ವರ್ಧನೆ ದಾಖಲಿಸಿಕೊಂಡಿರುವ ಮಹೀಂದ್ರ ಟ್ರಾಕ್ಟರ್ 2013 ಆಗಸ್ಟ್ ತಿಂಗಳಲ್ಲಿ ಒಟ್ಟು 13,543 ಯುನಿಟ್‌ಗಳ ಮಾರಾಟ ಕಂಡಿವೆ. ಕಳೆದ ವರ್ಷ ಈ ಸಂಖ್ಯೆ 12,394ರಷ್ಟಿತ್ತು.


ಮಹೀಂದ್ರ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಫಾರ್ಮ್ ಎಕ್ಯೂಪ್‌ಮೆಂಟ್ ವಿಭಾಗವು ಕಳೆದ 29 ವರ್ಷಗಳಲ್ಲಿ ರೈತರಿಗೆ ಅಗತ್ಯವಾದ ಟ್ರಾಕ್ಟರ್‌ಗಳನ್ನು ಪೂರೈಸುತ್ತಿದ್ದು, ದೇಶದಲ್ಲಿ ಹೆಚ್ಚಿನ ಜನಪ್ರಿಯತೆ ಸಾಧಿಸಿದೆ.

ಈ ಮೂಲಕ ವಿಶ್ವದ್ಯಾಂತ 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟ ಜಾಲವನ್ನು ಹೊಂದಿರುವ ಮಹೀಂದ್ರ ಜಗತ್ತಿನ ಅತಿದೊಡ್ಡ ಟ್ರಾಕ್ಟರ್ ಸಂಸ್ಥೆಯೆಂಬ ಗೌರವಕ್ಕೆ ಪಾತ್ರವಾಗಿದೆ.

Most Read Articles

Kannada
English summary
Mahindra Farm Equipment Sector has announced that sales of tractors during the month of August 2013 stood at 13,543 units, up 9% as compared to 12,394 units sold in August 2012.
Story first published: Saturday, September 7, 2013, 12:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X