ಭಾರತೀಯ ಸೇನೆಯಿಂದ ಮಾರುತಿ ಜಿಪ್ಸಿ ಮೂಲೆಗುಂಪು?

Written By:

ದೇಶದ ಸರ್ವಕಾಲಿಕ ಆಫ್ ರೋಡ್ ವಾಹನಗಳಲ್ಲಿ ಒಂದಾಗಿರುವ ಮಾರುತಿ ಜಿಪ್ಸಿ ಮೂಲೆಗುಂಪಾಗುತ್ತಿದೆಯೇ? ಹೌದು, ಇಂತಹದೊಂದು ಪ್ರಶ್ನೆ ಮೂಡುತ್ತಿರುವುದು ಸಹಜವೇ ಸರಿ. ಒಂದು ಕಾಲದಲ್ಲಿ ಭಾರತೀಯ ಸೇನೆಯ ಅವಿಭಾಜ್ಯ ಅಂಗವಾಗಿರುವ ಜಿಪ್ಸಿಗೆ ಬೆಳೆದು ಬರುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಅಪವಾದ ಕೇಳಿಬರುತ್ತಿದೆ.

1983ನೇ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದ ಮಾರುತಿ ಜಿಪ್ಸಿ ಎಸ್‌ಯುವಿ ಭಾರತೀಯ ಭೂ ಸೇನೆ ಹಾಗೂ ಜಾರಿ ನಿರ್ದೇಶನಾಲಯದ ಫೇವರಿಟ್ ವಾಹನ ಎಂದೆನಿಸಿಕೊಂಡಿತ್ತು. ಇದರ ಮುಂದುವರಿದ ಭಾಗವೆಂಬಂತೆ ದೊಡ್ಡ ಪ್ರಮಾಣದ ವಾಹನಗಳನ್ನು ಸೇನೆಗೆ ಪೂರೈಸಲಾಗಿತ್ತು.

ಸಮಕಾಲೀನ ಪರಿಸ್ಥಿತಿಯಲ್ಲಿ ಭಾರತೀಯ ಸೇನೆಯು ತನ್ನ ಅಗತ್ಯಗಳಿಗನುಸಾರವಾಗಿ ವಾಹನಗಳನ್ನು ಅಪ್‌ಗ್ರೇಡ್ ಮಾಡುತ್ತಿವೆ. ಸೇನೆಗೆ ಇದೀಗ ತನ್ನ ಸಾಮಾನ್ಯ ಸೇನಾ ವಾಹನಗಳಿಗೆ ಕನಿಷ್ಠ 120 ಹಾರ್ಸ್ ಪವರ್ ಉತ್ಪಾದಿಸುವ ಟರ್ಬೊ ಡೀಸೆಲ್ ಎಂಜಿನ್ ವಾಹನಗಳ ಅಗತ್ಯವಿದೆ. ಮತ್ತೊಂದೆಡೆ ಜಿಪ್ಸಿ 1.3 ಲೀಟರ್ ಎಂಪಿಎಫ್‌ಜಿ ಜಿಬಿ13 ಪೆಟ್ರೋಲ್ ಮೋಟಾರನ್ನು ಮಾತ್ರ ಹೊಂದಿದೆ.

ಸಹಜವಾಗಿಯೇ ಔಟ್‌ಡೇಟಡ್ ವಾಹನ ಬದಲು ಡ್ಯುಯಲ್ ಏರ್‌ಬ್ಯಾಗ್, ಪವರ್ ವಿಂಡೋ, ಎಬಿಎಸ್‌ಗಳಂತಹ ಆಧುನಿಕ ಸೌಲಭ್ಯವಿರುವ ವಾಹನಗಳನ್ನು ಖರೀದಿಸಲು ಬಯಸುತ್ತಿದೆ. ಈ ಎಲ್ಲ ಬೇಡಿಕೆಗಳನ್ನು ಪೂರೈಸಲು ಮಾರುತಿಯು ಸಂಪೂರ್ಣವಾಗಿ ಹೊಸತಾದ ಪ್ಲಾಟ್‌ಫಾರ್ಮ್‌ನಲ್ಲಿ ವಾಹನಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ.

ಇದರಿಂದಾಗಿಯೇ ಕೋಟಿ ಕೋಟಿ ಬಿಡ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಮತ್ತೊಂದೆಡೆ ಇಷ್ಟೊಂದು ದೊಡ್ಡ ಮಟ್ಟದ ಯೋಜನೆ ಕೈಗೆತ್ತಿಕೊಳ್ಳಲು ಟಾಟಾ ಮೋಟಾರ್ಸ್, ಮಹೀಂದ್ರ ಆಂಡ್ ಮಹೀಂದ್ರ ಹಾಗೂ ನಿಸ್ಸಾನ್ ಕಂಪನಿಗಳು ಮುಂದೆ ಬಂದಿದೆ. ಮೂಲಗಳ ಪ್ರಕಾರ ವಿಜೇತ ಕಂಪನಿಯು 3000 ಕೋಟಿ ಯೋಜನೆಯಡಿಯಲ್ಲಿ 30,000ಕ್ಕೂ ಹೆಚ್ಚು ವಾಹನಗಳನ್ನು ಸೇನೆಗೆ ಹಸ್ತಾಂತರಿಸಲಿದೆ.

ಇವನ್ನೂ ಓದಿ: ನೀರಲ್ಲಿ ಚಲಿಸುವ ಎರಡು ಕೋಟಿ ರು.ಗಳ ದುಬಾರಿ ಬಸ್

English summary
We could be witnessing the end of life of one of the most popular off-roader models ever, the Maruti Gypsy. The Gypsy, introduced back in 1983, has been a favourite of adventures and enthusiasts, but the largest buyer of the SUV has always been the Indian Army and other Indian law enforcement agencies. The Indian Army has now decided to upgrade the minimum specifications required for its general service vehicles and the Gypsy, which has remained virtually unchanged for a long time, no longer meets the army's minimum requirements.
Story first published: Friday, April 5, 2013, 16:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark