ಕಡಿಮೆ ಮಾರಾಟ ಕಾರಿಗೆ ಬ್ರೇಕ್; ಮಾರುತಿಯಿಂದ 2 ಹೊಸ ಕಾರು
ಬಲ್ಲ ಮೂಲಗಳ ಪ್ರಕಾರ ಮಾರ್ಕೆಟ್ ಶೇರು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾರುತಿಯು ಇಂತಹದೊಂದು ನಡೆಗೆ ಮುಂದಾಗುತ್ತಿದ್ದು, ಮುಂದಿನ ಒಂದು ವರ್ಷದೊಳಗೆ ಎರಡು ನೂತನ ಮಾಡೆಲ್‌ಗಳ ಪರಿಚಯವಾಗಲಿದೆ.
ಈ ಪೈಕಿ ಎಲ್‌ವೈ7 ಎಂಬ ಕೋಡ್ ಪಡೆದಿರುವ ನೂತನ ಮಾಡೆಲ್ 2014 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿದೆ. ಸಣ್ಣ ಕಾರು ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಈ ಮಾಡೆಲ್, ಕಡಿಮೆ ಮಾರಾಟವಾಗುತ್ತಿರುವ ಎ-ಸ್ಟಾರ್ ಹಾಗೂ ಎಸ್ಟಿಲೊ ಆವೃತ್ತಿಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ.
ಹಾಗೆಯೇ ಎಸ್‌ಎಕ್ಸ್4 ಬದಲಿಗೆ ಮಿಡ್ ಸೈಜ್ ಸೆಡಾನ್ ಕಾರೊಂದನ್ನು ನಿಕಟ ಭವಿಷ್ಯದಲ್ಲಿ ಪರಿಚಯಿಸುವ ಯೋಜನೆಯನ್ನು ಮಾರುತಿ ಹೊಂದಿದೆ. ಎಲ್‌ವೈ1 ಕೋಡ್ ಪಡೆದುಕೊಂಡಿರುವ ಈ ಹೊಸ ಮಾಡೆಲ್ ಮಿಡ್ ಸೈಜ್ ಸೆಡಾನ್ ಸೆಗ್ಮೆಂಟ್‌ನಲ್ಲಿ ಹೊಸ ಕ್ರಾಂತಿ ಸೃಷ್ಟಿ ಮಾಡುವ ನಿರೀಕ್ಷೆಯಿದೆ.
2012-13ರ ಆರ್ಥಿಕ ಸಾಲಿನಲ್ಲಿ ಭಾರತೀಯ ಪ್ರಾಯಾಣಿಕ ಮಾರುಕಟ್ಟೆಯಲ್ಲಿ ಮಾರುತಿ ಶೇಕಡಾ 39ರಷ್ಟು ಮಾರ್ಕೆಟ್ ಶೇರುಗಳನ್ನು ವಶಪಡಿಸಿಕೊಂಡಿತ್ತು. ಕಳೆದ ಆರ್ಥಿಕ ಸಾಲಿನಲ್ಲೂ ಇದಕ್ಕೆ ಸಮಾನವಾದ ಅಂಕಿಅಂಶ ಕಾಪಾಡಿಕೊಂಡು ಬಂದಿತ್ತು. ಇನ್ನು 2010-11ರಲ್ಲಿ ಶೇಕಡಾ 45ರಷ್ಟು ಮಾರುಕಟ್ಟೆ ಶೇರು ಹೊಂದಿತ್ತು.


Click it and Unblock the Notifications









