ಇಗೋ ಬಂದಿದೆ ಆಲ್ಟೊ ಹೊಚ್ಚ ಹೊಸ ವೆರಿಯಂಟ್!

By Nagaraja

ದೇಶದ ಮಧ್ಯಮ ವರ್ಗದ ಜನರಿಗೆ ಕೈಗೆಟುವ ರೀತಿಯಲ್ಲಿ ತಯಾರಿಸಲಾಗಿರುವ ಮಾರುತಿ ಸುಜುಕಿ ಆಲ್ಟೊ 800 ಕಳೆದ ಕೆಲವು ವರ್ಷಗಳಲ್ಲಿ ಮಾರಾಟದಲ್ಲಿ ಭಾರಿ ಯಶಸ್ಸನ್ನು ಕಂಡಿದೆ.

ಇದೀಗ ಆಲ್ಟೊಗೆ ಮತ್ತಷ್ಟು ಮೆರಗು ನೀಡಲು ಮುಂದಾಗಿರುವ ದೇಶದ ನಂ.1 ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ, ಆಲ್ಟೊದ ಹೊಸ ವಿಎಕ್ಸ್‌ಐ (VXi) ವೆರಿಯಂಟ್ ಲಾಂಚ್ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 3.36 ಲಕ್ಷ ರು.ಗಳಾಗಿವೆ.


ಪ್ರಮುಖ ವೈಶಿಷ್ಟ್ಯಗಳೇನು?
ಅಷ್ಟಕ್ಕೂ ಈಗಿರುವ ಆಲ್ಟೊ ಹಾಗೂ ಹೊಸದಾಗಿ ಆಗಮಿಸಲಿರುವ ವೆರಿಯಂಟ್‌ನ ವೈಶಿಷ್ಟಗಳೇನು ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿರಬಹುದು. ಇದಕ್ಕುತ್ತರ ಇಲ್ಲಿದೆ ನೋಡಿರಿ...

ನೂತ ಟಾಪ್ ಎಂಡ್ ವಿಎಕ್ಸ್‌ಐ ವೆರಿಯಂಟ್ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಆಗಮಿಸಲಿದ್ದು, ಹೆಚ್ಚಿನ ಸ್ಟೈಲಿಷ್ ವಿನ್ಯಾಸ ಪಡೆದುಕೊಳ್ಳಲಿದೆ. ಇದರಲ್ಲಿ ಸೆಂಟ್ರಲ್ ಲಾಕಿಂಗ್, ಯುಎಸ್‌ಬಿ ಸ್ಟೀರಿಯೋ, ಫೋರ್ ಸ್ಪೀಕರ್, ಎಡಬದಿಯಲ್ಲಿ ರಿಯರ್ ವ್ಯೂ ಕ್ಯಾಮೆರಾ, ಡ್ರೈವರ್ ಸೈಡ್ ಏರ್ ಬ್ಯಾಗ್ ಸೌಲಭ್ಯ ಹೊಂದಿರಲಿದೆ. ಇನ್ನು ರಿಯರ್ ಸ್ಪಾಯ್ಲರ್ ಹಾಗೂ ಡೋರ್ ಸೈಡ್ ಮೌಲ್ಡಿಂಗ್ ಕಾರಿನ ಅಂದತೆಯನ್ನು ಹೆಚ್ಚಿಸಲಿದೆ.

ಹಾಗೆಯೇ ಎಸಿ, ಪವರ್ ಸ್ಟೀರಿಂಗ್, ಪ್ರಂಟ್ ಪವ್ ವಿಂಡೋ, ಡ್ಯುಯಲ್ ಟೋನ್ ಅಪ್‌ಹೋಲ್‌ಸ್ಟೆರಿ, ಡ್ಯುಯಲ್ ಟ್ರಿಪ್ ಮೀಟರ್, ಗಡಿಯಾರ, ರಿಮೋಟ್ ಫ್ಯೂಯಲ್ ಲಿಡ್, ಟ್ಯೂಬೆಲೆಸ್ ಟೈರ್ ಹಾಗೂ ಡೋರ್ ಹ್ಯಾಂಡಲ್‌ಗಳಂತಹ ಫೀಚರ್ಸ್ ಇರಲಿದೆ. ಅಂದ ಹಾಗೆ ಆಲ್ಟೊ 800 ವಿಎಕ್ಸ್‌ಐ ಮಾಡೆಲ್‌ಗಿಂತಲೂ ನೂತನ ಆಲ್ಟೊ ವಿಎಕ್ಸ್‌ಐ ವೆರಿಯಂಟ್ 13,581 ರು.ಗಳಷ್ಟು ದುಬಾರಿಯಾಗಲಿದೆ.

800 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಆಲ್ಟೊ 48 ಪಿಎಸ್ ಪವರ್ ಉತ್ಪಾದಿಸುತ್ತಿದ್ದು, ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. ಇದು ಸಿಎನ್‌ಜಿ ಕಿಟ್ ಜತೆ ಆರು ಕಲರ್ ಆಪ್ಷನ್‌ಗಳಲ್ಲಿ ಲಭ್ಯವಿದೆ.

Most Read Articles

Kannada
English summary
Maruti Suzuki has added a new top end variant to the Alto hatchback. The new VXi variant adds several standard features over the LXi trim and is being offered for INR 3.36 lakhs.
Story first published: Tuesday, June 18, 2013, 11:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X