ಧೂಳೆಬ್ಬಿಸಲಿರುವ ಮಾರುತಿಯ ಪ್ರಪ್ರಥಮ 800ಸಿಸಿ ಡೀಸೆಲ್ ಕಾರು

Written By:

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, 800ಸಿಸಿ ಎಂಜಿನ್ ಹೊಂದಿರುವ ಡೀಸೆಲ್ ಕಾರು ಬಿಡುಗಡೆ ಮಾಡಲಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಪ್ರಮುಖವಾಗಿಯೂ ಸಣ್ಣ ಕಾರು ಖರೀದಿಗಾರರನ್ನು ಗುರಿಯಾಗಿರಿಸಿಕೊಂಡು ಮಾರುತಿ ನೂತನ ಕಾರು ಲಾಂಚ್ ಮಾಡಲಿದೆ.

ಇನ್ನೊಂದೆಡೆ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಸಹ, ಅತಿ ಚಿಕ್ಕ ಡೀಸೆಲ್ ಎಂಜಿನ್ ಕಾರು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದು ಮುಂದಿನ ದಿನಗಳಲ್ಲಿ ನಿಕಟ ಪೈಪೋಟಿಗೆ ಕಾರಣವಾಗಲಿದೆ.

To Follow DriveSpark On Facebook, Click The Like Button

ನ್ಯೂ ಆಲ್ಟೊ ಎನಿಸಿಕೊಳ್ಳಲಿರುವ ಮಾರುತಿಯ ಹೊಸ ಡೀಸೆಲ್ ಕಾರು ವೈಎಲ್7 ಕೋಡ್ ಪಡೆದುಕೊಂಡಿದೆ. ಇದು ಸಂಪೂರ್ಣವಾಗಿ ಹೊಸ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗುತ್ತಿದೆ.

ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಮಾರುತಿಯ ನೂತನ 800ಸಿಸಿ ಡೀಸೆಲ್ ಕಾರು ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದೆ. ಇದು ಖಂಡಿತವಾಗಿಯೂ ನೋಡುಗರ ಪಾಲಿಗೆ ರಸದೌತಣವಾಗಲಿದೆ. ಮೂಲಗಳ ಪ್ರಕಾರ ಮಾರುತಿಯ ನೂತನ ಕಾರು 30 ಕೀ.ಮೀ. ಗಳಷ್ಟು ಮೈಲೇಜ್ ನೀಡುವಲ್ಲಿ ಸಕ್ಷಮವಾಗಲಿದೆ. ಇದು ಕೂಡಾ ಗ್ರಾಹಕರ ನಿರೀಕ್ಷೆಯನ್ನು ಇಮ್ಮಡಿಗೊಳಿಸುವಂತಾಗಿದೆ.

English summary
Maruti Suzuki A Star and Zen Estillo replacement will come with 800cc diesel engine. Maruti Suzuki's 800cc diesel engine in development is to be displayed in next Delhi Auto Expo.
Story first published: Tuesday, November 12, 2013, 12:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark