2014 ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಲಾಂಚ್

Written By:

ಈ ಹಿಂದೆ ಚುನಾವಣಾ ಪ್ರಚಾರಕ್ಕಾಗಿ ಮಾಜಿ ಸಿಎಂ ಯಡಿಯೂರಪ್ಪ ದುಬಾರಿ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರನ್ನು ಬಳಕೆ ಮಾಡಿರುವುದು ಭಾರಿ ಸುದ್ದಿ ಮಾಡಿತ್ತು. ಈ ನಡುವೆ ಜಪಾನ್‌ನ ಈ ದೈತ್ಯ ಕಾರು ತಯಾರಕ ಸಂಸ್ಥೆಯಾಗಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರ್, 2014 ಲ್ಯಾಂಡ್ ಕ್ರೂಸರ್ ಐಷಾರಾಮಿ ಕಾರನ್ನು ಭಾರತದಲ್ಲಿ ಲಾಂಚ್ ಮಾಡಿದೆ.

ಪ್ರಾಡೊ ಕಾರಲ್ಲಿ ಬಿಎಸ್‌ವೈ ರೋಡ್ ಶೋ

ಅಂದ ಹಾಗೆ ಈ ಕಾರಿನ ದೆಹಲಿ ಎಕ್ಸ್ ಶೋ ರೂಂ ದರ ಎಷ್ಟು ಗೊತ್ತೇ? ಬರೋಬ್ಬರಿ 84.87 ಲಕ್ಷ ರು. ಅಂದರೆ ಇದರ ಆನ್ ರೋಡ್ ಬರ ಒಂದು ಕೋಟಿ ರು.ಗಳನ್ನು ಸಮೀಪಲಿದೆ. ಎಲ್ಲ ಹಂತದಲ್ಲಿಯೂ ದುಬಾರಿ ಕಾರುಗಳನ್ನು ಇಷ್ಟಪಡುವ ನಮ್ಮ ರಾಜಕಾರಣಿಗಳಿಗೆ ಇದು ಸೂಕ್ತ ಆಯ್ಕೆಯಾಗಲಿದೆ. ಅಷ್ಟಕ್ಕೂ 2014 ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ವೈಶಿಷ್ಟ್ಯಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

To Follow DriveSpark On Facebook, Click The Like Button
2014 ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಈ ಹಿಂದಿನ ಆವೃತ್ತಿಗೆ ಹೋಲಿಸಿದರೆ 2014 ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದರ ಮುಂಭಾಗದಲ್ಲಿ ಹೊಸ ಗ್ರಿಲ್, ಪರಿಷ್ಕೃತ ಬಂಪರ್, ಹೆಡ್‌ಲೈಟ್ ಜತೆ ಡೇ ಟೈಮ್ ರನ್ನಿಂಗ್ ಲೈಟ್ಸ್, ಫಾಂಗ್ ಲ್ಯಾಂಪ್ ಮತ್ತು ರಿಯರ್ ಬ್ರೇಕ್ ಲೈಟ್ ಕ್ಲಸ್ಟರ್ ಮತ್ತು ರಿಯರ್ ಲೈಸನ್ಸ್ ಪ್ಲೇಟ್ ಗಾರ್ನಿಶ್ ಅದ್ಧೂರಿಯಾಗಿರಲಿದೆ.

2014 ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಎಲ್ಲ ತರಹದ ಆಫ್ ರೋಡ್ ಫೀಚರ್ಸ್‌ಗಳು ನೂತನ ಪ್ರಾಡೊದಲ್ಲಿ ಲಭ್ಯವಾಗಲಿದೆ. ಅಂತದರಲ್ಲಿ ಕ್ರೌಲ್ ಕಂಟ್ರೋಲ್ ಪ್ರಮುಖವಾಗಿದೆ. ಇದು ಒರಟಾದ ಆಫ್ ರೋಡ್‌ಗಳಲ್ಲಿ ಬ್ರೇಕ್ ಬಳಕೆಯನ್ನು ಕಡಿಮೆ ಮಾಡುವುದಲ್ಲದೆ, ಜಾರುವ ರಸ್ತೆಯಲ್ಲಿ ನಯವಾದ ವೇಗವರ್ಧನೆಗೆ ಸಹಕಾರಿಯಾಗಲಿದೆ.

2014 ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಇನ್ನು ರಾಕ್, ರಾಕ್ ಆಂಡ್ ಡರ್ಟ್, ಲೂಸ್ ರಾಕ್ ಆಂಡ್ ಮಡ್ ಮತ್ತು ಸ್ಯಾಂಡ್‌ಗಳೆಂಬ ಮಲ್ಟಿ ಟರೈನ್ ಸೆಲೆಕ್ಟರ್ ಕೂಡಾ ಒಳಗೊಂಡಿರಲಿದೆ. ಇದು ವಾಹನದ ಸುತ್ತುಮುತ್ತಲಿನ ಪ್ರದೇಶದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಲಿದೆ. ಇದರ ಜತೆಗೆ ಏಳು ಇಂಚಿನ ಕಲರ್ ಪರದೆ, ಎರಡನೇ ಸಾಲಿನಲ್ಲಿ ಸೀಟ್ ಹೀಟರ್ ಮತ್ತು ಟೈರ್ ಪ್ರೆಶರ್ ಮೊನಿಟರಿಂಗ್ ಸಿಸ್ಟಂ ಇರಲಿದೆ.

2014 ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಅಂದ ಹಾಗೆ ನೂತನ 2014 ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಂಡೊ 3.0 ಲೀಟರ್ ಡಿ4ಡಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 179 ಅಶ್ವಶಕ್ತಿ (409 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಹಾಗೆಯೇ ವೈಟ್ ಪಿಯರ್ಲ್ ಕ್ರೈಸ್ಟಲ್ ಶೈನ್, ಸಿಲ್ವರ್ ಮೆಟ್ಯಾಲಿಕ್, ಗ್ರೇ ಮೆಟ್ಯಾಲಿಕ್, ಡಾರ್ಕ್ ಬ್ಲ್ಯೂ ಮೆಟ್ಯಾಲಿಕ್ ಮತ್ತು ಬ್ಲ್ಯಾಕ್ ಕಲರ್ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ.

2014 ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಈ ಬಗ್ಗೆ ಪ್ರತಿಕ್ರಿಸಿಯಿದ ಕಂಪನಿ, 2004ರಲ್ಲಿ ಪ್ರಾಡೊ ಲಾಂಚ್ ಬಳಿಕ ವಿಶ್ವದೆಲ್ಲೆಡೆಯ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದೆ. ಇದು ಗುಣಮಟ್ಟತೆ, ಬಾಳ್ವಿಕೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ ಎಂದಿದೆ.

2014 ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಪ್ರಾಡೊ ಕೇವಲ ಎಸ್‌ಯುವಿ ಪ್ರೇಮಿಗಳ ಮಾತ್ರ ನೆಚ್ಚಿನ ವಾಹನವಲ್ಲ. ಬದಲಾಗಿ ಐಷಾರಾಮಿ ಕಾರುಗಳನ್ನು ಇಷ್ಟಪಡುವವರಿಗೂ ನೆಚ್ಚಿನ ಕಾರೆನಿಸಿದೆ.

2014 ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ

ಅಷ್ಟಕ್ಕೂ ನೂತನ ಪ್ರಾಡೊ ಭಾರತೀಯ ಗ್ರಾಹಕರಿಗೆ ಅದ್ಭುತ ಅನುಭವ ನೀಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ರಾಜಕಾರಣಿಗಳಂತೂ ಫೇವರಿಟ್ ಎನಿಸಿಕೊಳ್ಳಲಿದೆ.

English summary
Toyota Kirloskar Motor has launched the 2014 Land Cruiser Prado in India, priced at INR 84.87 lakhs (Ex-showroom, Delhi). The new Land Cruiser Prado comes with extensive upgrades, ranging from visual to electronic features.
Story first published: Friday, December 6, 2013, 10:52 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark