ಮುಂಬೈನಲ್ಲಿ 2014 ಮಾರುತಿ ಸುಜುಕಿ ಆಟೋಕ್ರಾಸ್

Written By:

ಮಾರುತಿ ಸುಜುಕಿ ಮೋಟಾರುಸ್ಪೋರ್ಟ್ ಸದ್ಯದಲ್ಲೇ 2014 ಆಟೋಕ್ರಾಸ್ ಚಾಲೆಂಜ್ ಆಯೋಜನೆ ಮಾಡಲಿದ್ದು, ವಾಣಿಜ್ಯ ನಗರಿ ಮುಂಬೈ ಇದಕ್ಕಾಗಿ ಸಕಲ ರೀತಿಯಲ್ಲಿ ಸಿದ್ಧಗೊಂಡಿದೆ.

ದೇಶದ ಬಹುನಿರೀಕ್ಷಿತ ಮೋಟಾರುಸ್ಪೋರ್ಟ್ ಕ್ರೀಡೆಗಳಲ್ಲಿ ಒಂದಾಗಿರುವ ಆಟೋಕ್ರಾಸ್ ಚಾಲೆಂಜ್ 2002ನೇ ಇಸವಿಯಲ್ಲಿ ಮೊದಲ ಬಾರಿಗೆ ಆಯೋಜನೆಯಾಗಿತ್ತು.

maruti suzuki autocross

ಮಾರುತಿ ಸುಜುಕಿ ಆಟೋಕ್ರಾಸ್ ಸ್ಪರ್ಧೆಯು ದೇಶದ ವಿವಿಧ ನಗರಗಳಲ್ಲಿ ಆಯೋಜನೆಯಾಗುತ್ತಿದೆ. ಅಂತೆಯೇ ಮುಂಬೈನಲ್ಲಿ ಡಿಸೆಂಬರ್ 13ಹಾಗೂ 14ರಂದು ಆಯೋಜನೆಯಾಗಲಿದೆ. ಇದರಲ್ಲಿ ಆಟೋಕಾರ್ ನಿರ್ವಹಣೆ ಶೋ, ಎಂಎಂಆರ್‌ಡಿಎ ಗ್ರೌಂಡ್, ಭಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಸ್ಪರ್ಧೆಗಳು ನಡೆಯಲಿದೆ.

ಸಾಹಸ ಚಾಲನೆ ಇಷ್ಟಪಡುವವರಿಗೆ ಮಾರುತಿ ಮೊಟೊಕ್ರಾಸ್ ಮೋಟಾರುಸ್ಪೋರ್ಟ್ ಅದ್ಭುತ ಅನುಭವ ನೀಡಲಿದೆ. ದಕ್ಷಿಣ್ ಡೇರ್, ಡೆಸರ್ಟ್ ಸ್ಟ್ರೋಮ್ ಮತ್ತು ರೈಡ್ ದಿ ಹಿಮಾಲಯ ಸ್ಪರ್ಧೆಗಳು ಇದಕ್ಕೆ ಸಮಾನವಾಗಿದೆ.

ಹೆಚ್ಚಿನ ಸಂಖ್ಯೆಯ ಯುವ ಗ್ರಾಹಕರನ್ನು ಮೋಟಾರು ಸ್ಪೋರ್ಟ್ಸ್‌ನತ್ತ ಸೆಳೆಯುವುದು ಸಂಸ್ಥೆಯ ಇರಾದೆಯಾಗಿದೆ. ಇಲ್ಲಿ ನುರಿತ ಚಾಲಕರೊಂದಿಗೆ ಅನುಭವ ಹಂಚಿಕೊಳ್ಳುವ ಅವಕಾಶವೂ ಯುವ ರೇಸರುಗಳಿಗೆ ಸಿಗಲಿದೆ.

English summary
Maruti Suzuki Motorsport will be organising their 2014 Autocross challenge. It is one of the most anticipated motorsport events currently. It began back in 2002 and over the years more than 350 individuals have taken part in several competitions.
Story first published: Thursday, December 11, 2014, 8:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark