'ಮೇಕ್ ಇನ್ ಇಂಡಿಯಾ' ಅಭಿಯಾನ ಸ್ವಾಗತಿಸಿದ ವಾಹನ ಜಗತ್ತು

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಹುನಿರೀಕ್ಷಿತ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ಮೂಲಕ ದೇಶದಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಕರೆ ನೀಡಿದ್ದರು. ಇದೀಗ ಮೋದಿ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ವಿದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಗಳು ಸ್ವಾಗತಿಸಿದೆ.

ಹೀರೊನೊರಿ ಕನಯಮ ಹೋಂಡಾ ಸಿಇಒ
ಭಾರತದ ಮೇಲೆ ನಮಗೆ ನಂಬಿಕೆಯಿದ್ದು ಇದರಿಂದಾಗಿ ಭಾರತದಲ್ಲಿ ಹೆಚ್ಚೆಚ್ಚು ವಾಹನಗಳನ್ನು ನಿರ್ಮಿಸಲಿದ್ದೇವೆ ಎಂದಿದ್ದಾರೆ. ನಮ್ಮ ನಂಬಿಕೆಗೆ ಹಲವಾರು ಕಾರಣಗಳಿದ್ದು, ಭಾರತೀಯ ಕಾರು ಮಾರುಕಟ್ಟೆ ಅತಿ ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.


ಬಿಎಸ್ ಸಿಯೋ (ಹ್ಯುಂಡೈ ಸಿಇಒ)
ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ಅಭಿಯಾನವನ್ನು ದೇಶದ ಅತಿ ದೊಡ್ಡ ಕಾರು ರಫ್ತು ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ ಸ್ವಾಗತಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭಾರತದಿಂದಲೇ ತನ್ನ ಕಾರನ್ನು ರಫ್ತು ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಸುಮಿತ್ ಸಾನಿ (ರೆನೊ ಸಿಇಒ)
ಮೇಕ್ ಇನ್ ಇಂಡಿಯಾ ಉತ್ತಮ ಅಭಿಯಾನವಾಗಿದ್ದು, ಭಾರತೀಯ ವಾಹನ ಕೈಗಾರಿಕೋದ್ಯಮಕ್ಕೆ ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದಿದ್ದಾರೆ. ದೇಶದ ಜಿಡಿಪಿ ವರ್ಧನೆಯಲ್ಲಿ ವಾಹನೋದ್ಯಮ ಪಾತ್ರ ಬಹಳಷ್ಟಿದ್ದು, ಮಾರಾಟವನ್ನು ಉತ್ತೇಜಿಸಲಿದೆ ಎಂದಿದ್ದಾರೆ.

narendra modi

ಅನೂಪ್ ಪ್ರಕಾಶ್ (ಹರ್ಲಿ ಡೇವಿಡ್ಸನ್)
2009ನೇ ಇಸವಿಯಲ್ಲಿ ಭಾರತದಲ್ಲಿ ನಮ್ಮ ಕಾರ್ಯಾಚರಣೆಯನ್ನು ಆರಂಭಿಸಿದ್ದೆವು. ಅಲ್ಲದೆ ಇತ್ತೀಚೆಗಷ್ಟೇ ಯುರೋಪ್ ಹಾಗೂ ಏಷ್ಯಾ ರಾಷ್ಟ್ರಗಳಿಗೆ ನಮ್ಮ ರಫ್ತು ಕಾರ್ಯವನ್ನು ಆರಂಭಿಸಿದ್ದೆವೆ. ಇದು ಭಾರತದಲ್ಲಿ ವಿಶ್ವ ದರ್ಜೆಯ ವಾಹನಗಳನ್ನು ನಿರ್ಮಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.
Most Read Articles

Kannada
English summary
Foreign Car and Bike Makers Welcomes Make in India Campaign
Story first published: Saturday, September 27, 2014, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X