2347 ಸಾಂಟಾಫೆ ಹಿಂಪಡೆಯಲು ಹ್ಯುಂಡೈ ನಿರ್ಧಾರ

Written By:

ಸಮಕಾಲೀನ ಮಾರುಕಟ್ಟೆಯಲ್ಲಿ ರಿಕಾಲ್ ಪರ್ವ ಸ್ವಲ್ಪ ಜಾಸ್ತಿಯಾಗಿಯೇ ಕಂಡುಬರುತ್ತಿದೆ. ಇದೀಗ ದೇಶದ ಎರಡನೇ ಅತಿದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ, 2347 ಯುನಿಟ್‌ಗಳಷ್ಟು ಸಾಂಟಾಫೆ ಮಾದರಿಗಳನ್ನು ಹಿಂಪಡೆಯಲು ನಿರ್ಧರಿಸಿದೆ.

2011ನೇ ಇಸವಿಯಲ್ಲಿ ಜೋಡಣೆಯಾಗಿರುವ ಸಾಂಟಾಫೆ ಮಾದರಿಗಳನ್ನು ವಾಪಾಸ್ ಪಡೆಯಲಾಗುತ್ತಿದೆ. ಇವೆಲ್ಲವೂ ಕಂಪ್ಲೀಟ್ ನಾಕ್ಡ್ ಡೌನ್ (ಸಿಕೆಡಿ) ಸಿದ್ಧಾಂತ ಮುಖಾಂತರ ಭಾರತ ಪ್ರವೇಶಿಸಿತ್ತು.

To Follow DriveSpark On Facebook, Click The Like Button
Hyundai India

ಬ್ರೇಕ್ ಲ್ಯಾಂಪ್ ಸ್ವಿಚ್‌ನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ವಾಪಾಸ್ ಪಡೆಯಲಾಗುತ್ತಿದೆ. ಇದೀಗ ಯಾವುದೇ ಹೆಚ್ಚಿನ ಹೊರೆಯಿಲ್ಲದೆ ಸಮಸ್ಯೆ ಬಗೆಹರಿಸಿ ಕೊಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಪ್ರತಿ ಬಾರಿಯೂ ಕಾರಿನಲ್ಲಿ ಕಾಣಿಸಿಕೊಳ್ಳುವ ತೊಂದರೆಗಳಿಗೆ ತಯಾರಕರನ್ನು ದೂರುವಂತಿಲ್ಲ. ಯಾಕೆಂದರೆ ಕೆಲವೊಂದು ಬಾರಿ ಸ್ಮರ್ಧಾತ್ಮಕ ದರಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಬಿಡಿಭಾಗಗಳನ್ನು ಕಡಿಮೆ ವೆಚ್ಚಕ್ಕೆ ಆಮದು ಮಾಡಿಕೊಳ್ಳಬೇಕಾಗುತ್ತದೆ. ಆದರೆ ಬಳಿಕ ಇಂತಹ ವಸ್ತುಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಇದು ಕಾರು ಬ್ರಾಂಡ್ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.

English summary
Now Hyundai India will be recalling the Santa Fe which, was assembled during the year 2011. The South-Korean manufacturer brought the vehicle to India as a Completely Knocked Down(CKD) unit.
Story first published: Monday, May 26, 2014, 12:01 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark