ಏರ್‌ಬ್ಯಾಗ್ ಸಮಸ್ಯೆ; ಹ್ಯುಂಡೈ ರಿಕಾಲ್ ಪರ್ವ
ಏರ್‌ಬ್ಯಾಗ್‌ನಲ್ಲಿ ಸಮಸ್ಯೆ ತಲೆದೋರಿರುವ ಹಿನ್ನಲೆಯಲ್ಲಿ 1,40,000 ವಾಹನಗಳನ್ನು ಹಿಂಪಡೆಯಲು ಹ್ಯುಂಡೈ ಸಂಸ್ಥೆ ನಿರ್ಧರಿಸಿದೆ. ಪ್ರಸ್ತುತ ರಿಕಾಲ್ ಅಮೆರಿಕ ಹಾಗೂ ಪೋರ್ಟೊ ರಿಕೊಗಳಿಗೆ ಮಾತ್ರ ಸೀಮಿತವಾಗಿದೆ. ಈ ಪಟ್ಟಿಯಲ್ಲಿ ಭಾರತ ಕೂಡಾ ಕಾಣಿಸಿಕೊಂಡಿದೆಯೇ ಎಂಬುದು ತಿಳಿದು ಬಂದಿಲ್ಲ.
ಏರ್‌ಬ್ಯಾಗ್ ತೊಂದರೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಆದರೆ ಮುನ್ನೆಚ್ಚೆರಿಕೆಯ ಕ್ರಮವಾಗಿ ದಕ್ಷಿಣ ಕೊರಿಯಾದ ಈ ವಾಹನ ತಯಾರಕ ಸಂಸ್ಥೆಯು ನಿರ್ದಿಷ್ಠ ಮಾದರಿಗಳನ್ನು ವಾಪಾಸ್ ಕರೆಯಿಸಿಕೊಳ್ಳಲು ನಿರ್ಧರಿಸಿದೆ.

ತನ್ನ ಕಾಂಪಾಕ್ಟ್ ಎಸ್‌ಯುವಿನಲ್ಲಿ ಮಾತ್ರ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹ್ಯುಂಡೈ ತಿಳಿಸಿದೆ. ಈ ಪೈಕಿ ಅಮೆರಿಕದಲ್ಲಿ 137500 ಹಾಗೂ ಪೋರ್ಟೊ ರಿಕೊದಲ್ಲಿ 3500 ವಾಹನಗಳನ್ನು ಹಿಂಪಡೆಯಲಾಗಿದೆ.
2011ರಿಂದ 2014ರ ವರೆಗೆ ನಿರ್ಮಾಣವಾಗಿರುವ ಮಾದರಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇದೀಗ ಸಮಸ್ಯೆ ಬಗೆಹರಿಸಿ ಕೊಡಲಾಗುವುದು.


Click it and Unblock the Notifications








