ಹ್ಯುಂಡೈ 2014 ಎಪ್ರಿಲ್ ತಿಂಗಳ ಮಾರಾಟ ವೃದ್ಧಿ

Written By:

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್), 2014 ಎಪ್ರಿಲ್ ತಿಂಗಳ ಮಾರಾಟದಲ್ಲಿ ಶೇಕಡಾ 8ರಷ್ಟು ವೃದ್ಧಿ ದಾಖಲಿಸಿದೆ.

ದೇಶದ ಪ್ರಯಾಣಿಕ ಮಾರುಕಟ್ಟೆಯಲ್ಲಿ ನಂ. 2 ಸ್ಥಾನದಲ್ಲಿರುವ ಹ್ಯುಂಡೈ, ಎಪ್ರಿಲ್ ಅವಧಿಯಲ್ಲಿ ದೇಶಿಯವಾಗಿ 35,248 ವಾಹನಗಳನ್ನು ಮಾರಾಟ ಮಾಡಿದ್ದು, 14,974 ಯುನಿಟ್‌ಗಳನ್ನು ರಫ್ತು ಮಾಡಿವೆ.

To Follow DriveSpark On Facebook, Click The Like Button
Hyundai Motor India

ಈ ಮೂಲಕ ಒಟ್ಟು 50,222 ಯುನಿಟ್‌ಗಳ ವಹಿವಾಟು ಕಂಡಿದೆ. ನಿಮ್ಮ ಮಾಹಿತಿಗಾಗಿ ಹ್ಯುಂಡೈ, ದೇಶದ ಅತಿದೊಡ್ಡ ಪ್ರಯಾಣಿಕ ಕಾರು ರಫ್ತು ಸಂಸ್ಥೆಯಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಅಂದರೆ ಎಪ್ರಿಲ್ 2013ರಲ್ಲಿ 32,403 ಯುನಿಟ್ ಮಾರಾಟ ಹಾಗೂ 24,550 ಯುನಿಟ್ ರಫ್ತು ಮಾಡಿತ್ತು. ಈ ಮೂಲಕ ಒಟ್ಟು 56,953 ಯುನಿಟ್‌ಗಳ ಮಾರಾಟ ಕಂಡುಕೊಂಡಿತ್ತು.

ಪ್ರಸ್ತುತ ರಫ್ತು ವಹಿವಾಟಿನಲ್ಲಿ ಇಳಿಕೆ ಕಂಡಿದ್ದರೂ ದೇಶಿಯ ಮಾರಾಟದಲ್ಲಿ ಶೇಕಡಾ 8ರಷ್ಟು ಏರಿಕೆ ದಾಖಲಿಸಿಕೊಂಡಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಹ್ಯುಂಡೈ ಎಕ್ಸ್‌ಸೆಂಟ್, ಗ್ರಾಂಡ್ ಐ10 ಮತ್ತು ಸಾಂಟಾಫೆ ಆವೃತ್ತಿಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

English summary
Hyundai Motor India Limited or HMIL, has recorded an increase in sales for the month of April 2014. The South-Korean automobile manufacturer is among the leading car sellers in India.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark