ಇಸುಝು ಡಿಮ್ಯಾಕ್ಸ್ ಪಿಕಪ್ ಟ್ರಕ್ ಭಾರತದಲ್ಲಿ ಲಾಂಚ್

By Nagaraja

ಜಪಾನ್‌ನ ಪ್ರಖ್ಯಾತ ಎಸ್‌ಯುವಿ ಹಾಗೂ ಪಿಕಪ್ ಟ್ರಕ್ ತಯಾರಿಕ ಸಂಸ್ಥೆಯಾಗಿರುವ ಇಸುಝು, ಭಾರತದಲ್ಲಿ ತನ್ನ ಎರಡನೇ ಉತ್ಪನ್ನವನ್ನು ಲಾಂಚ್ ಮಾಡಿದೆ. ಇದೀಗ ಮಾರುಕಟ್ಟೆ ಪ್ರವೇಶಿಸಿರುವ ಡಿ ಮ್ಯಾಕ್ಸ್ ಪಿಕಪ್ ಟ್ರಕ್ ಪ್ರಾರಂಭಿಕ ದರ 5.99 ಲಕ್ಷ ರು.ಗಳಾಗಿರಲಿದೆ.

ತನ್ನದೇ ಆದ ಡೀಲರ್‌ಶಿಪ್ ಹೊಂದಿರುವ ಮುಂಬೈನಲ್ಲಿ ಡಿ-ಮ್ಯಾಕ್ಸ್ ಪಿಕಪ್ ಟ್ರಕ್ ಲಾಂಚ್ ಮಾಡಲಾಗಿದೆ. ಇದು ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಅವುಗಳೆಂದರೆ

Isuzu

ವೆರಿಯಂಟ್...
  • ಸಿಂಗಲ್ ಕ್ಯಾಬ್ ಪ್ಲ್ಯಾಟ್ ಡೆಕ್,
  • ಸ್ಪೇಸ್ ಕ್ಯಾಬ್ ಫ್ಲ್ಯಾಟ್ ಡೆಕ್,
  • ಸ್ಪೇಸ್ ಕ್ಯಾಬ್ ಆರ್ಚ್ಡ್ ಡೆಕ್

ಈ ಪೈಕಿ ಬೇಸ್ ವೆರಿಯಂಟ್ 2415 X 1705 X 450 (ಎಂಎಂ) ಆಯಾಮವನ್ನು ಹೊಂದಿರಲಿದ್ದು, 1.2 ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅದೇ ಹೊತ್ತಿಗೆ ಸ್ಪೇಸ್ ಕ್ಯಾಬ್ ಫ್ಲ್ಯಾಟ್ ಡೆಕ್ ವೆರಿಯಂಟ್‌ನಲ್ಲಿ ಸೀಟು ಹಿಂದುಗಡೆ ಹೆಚ್ಚುವರಿ 1.5 ಫೀಟ್ ಜಾಗ ಹೊಂದಿರಲಿದೆ.

ಇಸುಝು ಡಿಮ್ಯಾಕ್ಸ್ ಸ್ಪೇಸ್ ಕ್ಯಾಬ್ ಆರ್ಚ್ಡ್ ಡೆಕ್
ಇನ್ನೊಂದೆಡೆ ತನ್ನದೇ ಆದ ಪ್ರತ್ಯೇಕ ವಾಹನಗಳನ್ನು ಹೊಂದಲು ಬಯಸುತ್ತಿರುವ ಮಾಲಿಕರನ್ನು ಗುರಿಯಾಗಿರಿಸಿಕೊಂಡಿರುವ ಇಸುಝು ಡಿಮ್ಯಾಕ್ಸ್ ಸ್ಪೇಸ್ ಕ್ಯಾಬ್ ಆರ್ಚ್ಡ್ ಡೆಕ್, ಪ್ರೀಮಿಯಂ ಪಿಕಪ್ ಟ್ರಕ್ ಆಗಿರಲಿದೆ. ಇದು (1920mm X 1720mm X 480mm) ಆಯಾಮ ಪಡೆದುಕೊಳ್ಳಲಿದೆ.

ವೈಶಿಷ್ಟ್ಯಗಳೇನು?
ಡೇ ನೈಟ್ ರಿಯರ್ ವ್ಯೂ ಮಿರರ್, ರಿಮೋಟ್ ಫ್ಯೂಯಲ್ ಲಿಡ್ ಓಪನರ್, ದೇಹ ಬಣ್ಣದ ಬಂಪರ್, ಕ್ರೋಮ್ ಫಿನಿಶ್ ರೇಡಿಯೇಟರ್ ಗ್ರಿಲ್, ಎಂಜಿನ್ ಟ್ಯಾಕೋಮೀಟರ್, ಫ್ರಂಟ್ ಸೀಟ್ ಸ್ಲೈಡ್ ಆಂಡ್ ರಿಕ್ಲೈನ್, ಗ್ರೀನ್ ಟಿಂಟಡ್ ಗ್ಲಾಸ್, ಪವರ್ ವಿಂಡೋ ಹಾಗೂ ಇನ್ನಿತರ.

ಎಂಜಿನ್, ಮೈಲೇಜ್ ...
ಅಂದ ಹಾಗೆ ಡಿ ಮ್ಯಾಕ್ಸ್ ಪಿಕಪ್, 2.5 ಲೀಟರ್ 4 ಸಿಲಿಂಡರ್ ಕಾಮನ್ ರೈಲ್ ಟರ್ಬೊಚಾರ್ಜ್ಡ್ ಇಂಟರ್‌ಕೂಲ್ಡ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 136 ಅಶ್ವಶಕ್ತಿ (294 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಫುಲ್ ಟ್ಯಾಂಕ್ ಭರ್ತಿ ಮಾಡಿದ್ದಲ್ಲಿ 1000 ಕೀ.ಮೀ. ರೇಂಜ್ ವರೆಗೂ ಪಯಣ ಮಾಡಬಹುದಾಗಿದೆ. ಹಾಗೆಯೇ ಪ್ರತಿ ಲೀಟರ್‌ಗೆ 13.15 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ನಿರ್ಮಾಣ...
ಪ್ರಸ್ತುತ ಚೆನ್ನೈನಲ್ಲಿರುವ ಹಿಂದೂಸ್ತಾನ್ ಮೋಟಾರ್ಸ್‌ ಘಟಕದಲ್ಲಿ ಪಿಕಪ್ ಟ್ರಕ್ ಜೋಡಣೆ ಮಾಡಲಿರುವ ಸಂಸ್ಥೆಯು ಭವಿಷ್ಯದಲ್ಲಿ (2016) ಆಂಧ್ರಪ್ರದೇಶದ ಶ್ರಿಸಿಟಿಯಲ್ಲಿ ತನ್ನದೇ ಆದ ಘಟಕ ತೆರೆದುಕೊಳ್ಳಲಿದೆ. ಹಾಗೆಯೇ ಮುಂಬೈನಲ್ಲಿ ಮೊದಲ ಶೋ ರೂಂ ತೆರೆದುಕೊಂಡಿರುವ ಇಸುಝು ಮುಂಬರುವ ದಿನಗಳಲ್ಲಿ ದೆಹಲಿ ಹಾಗೂ ಶಿಶಾಖಪಟ್ಟದಲ್ಲೂ ಶೋ ರೂಂ ತೆರೆದುಕೊಳ್ಳುವ ಇರಾದೆ ಹೊಂದಿದೆ.

ದರ ಮಾಹಿತಿ
ಇಸುಝು ಡಿ-ಮ್ಯಾಕ್ಸ್ ಸಿಂಗಲ್ ಕ್ಯಾಬ್ - 5.99 ಲಕ್ಷ ರು.
ಇಸುಝು ಡಿ-ಮ್ಯಾಕ್ಸ್ ಸ್ಪೇಸ್ ಕ್ಯಾಬ್ ಫ್ಲ್ಯಾಟ್ ಡೆಕ್ - 6.19 ಲಕ್ಷ ರು.
ಇಸುಝು ಡಿ-ಮ್ಯಾಕ್ಸ್ ಸ್ಪೇಸ್ ಕ್ಯಾಬ್ ಆರ್ಚ್ಡ್ ಡೆಕ್ - 7.09 ಲಕ್ಷ ರು.

Most Read Articles

Kannada
English summary
Isuzu, the Japanese SUV and pick-up truck manufacturer has launched its second product in India, the D-Max pick-up, at a starting price of INR 5.99 lakhs.
Story first published: Wednesday, May 14, 2014, 11:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X