ಜಾಗ್ವಾರ್‌ನಿಂದ ಬರಲಿದೆ ಎರಡು ನೂತನ ಕಾನ್ಸೆಪ್ಟ್ ಕಾರುಗಳು

Written By:

2014 ಆಟೋ ಎಕ್ಸ್ ಪೋದಲ್ಲಿ ಜಾಗ್ವಾರ್ ಎರಡು ನೂತನ ಕಾನ್ಸೆಪ್ಟ್ ಕಾರುಗಳನ್ನು ಅನಾವರಣಗೊಳಿಸಲಿದೆ. ಹೌದು, ಸಿ-ಎಕ್ಸ್17 ಹಾಗೂ ಪ್ರೊಜೆಕ್ಟ್ 7 ಕಾರು ಜಾಗ್ವಾರ್‌ನಿಂದ ಪ್ರದರ್ಶನವಾಗಲಿದೆ.

ಈ ಪೈಕಿ ಸಿ-ಎಕ್ಸ್17 ಸ್ಪೋರ್ಟ್ಸ್ ಲಗ್ಷುರಿ ಕ್ರಾಸೋವರ್ ಆಗಿರಲಿದೆ. ಇದರಲ್ಲಿ ಐದು ಮಂದಿ ಮಂದಿಗೆ ಕುಳಿತುಕೊಳ್ಳಬಹುದಾಗಿದೆ. ಪ್ರಸ್ತುತ ಕಾನ್ಸೆಪ್ಟ್ ಮೊದಲ ಬಾರಿಗೆ 2013 ಫ್ರಾಂಕ್‌ಫರ್ಟ್ ಮೋಟಾರು ಶೋ ಅನಾವರಣಗೊಳ್ಳಲಿದೆ.

ಭವಿಷ್ಯದ ಜಾಗ್ವಾರ್ ಕಾರುಗಳ ಆಧಾರದಲ್ಲಿ ವಿನ್ಯಾಸ ರೂಪಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ಭಾರತ ಮಾರುಕಟ್ಟೆ ಪ್ರವೇಶ ಕೂಡಾ ಪಡೆಯಲಿದೆ.

ಇನ್ನೊಂದೆಡೆ ಸಿಂಗಲ್ ಸೀಟ್ ಕಾನ್ಸೆಪ್ಟ್ ಕಾರಾಗಿರುವ ಜಾಗ್ವಾರ್ ಪ್ರೊಜೆಕ್ಟ್ 7, 5.0 ಲೀಟರ್ ವಿ8 ಸೂಪರ್ ಚಾರ್ಜ್ಡ್ ಎಂಜಿನ್ ಹೊಂದಿರಲಿದೆ. ಇದು 550 ಪಿಎಸ್ ಪವರ್ ಉತ್ಪಾದಿಸುವ (680 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಇದು ಗಂಟೆಗೆ ಗರಿಷ್ಠ 300 ಕೀ.ಮೀ. ವೇಗದಲ್ಲಿ ಸಂಚರಿಸುವ ಹಾಗೂ ಕೇವಲ 4.2 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

jaguar
English summary
Jaguar will be unveiling two concept cars at the upcoming Auto Expo 2014. The cars to be featured at the Expo will be a C-X17 and the Project 7.
Story first published: Wednesday, February 5, 2014, 8:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark