ಮಾರುತಿ ಸೆಲೆರಿಯೊ ವಿಎಕ್ಸ್‌ಐ ಪ್ಲಸ್ ಸೀಮಿತ ಆವೃತ್ತಿ ಬಿಡುಗಡೆ

By Nagaraja

ದೇಶದ ನಂ.1 ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಇದೀಗಷ್ಟೇ ಆರಂಭವಾಗಲಿರುವ ಹಬ್ಬದ ಆವೃತ್ತಿಯ ಹಿನ್ನಲೆಯಲ್ಲಿ ಮಾರಾಟ ಇನ್ನಷ್ಟು ಹೆಚ್ಚಿಸುವ ಗುರಿಯೊಂದಿಗೆ ತನ್ನ ಜನಪ್ರಿಯ ಸೆಲೆರಿಯೊ ಆವೃತ್ತಿಯ ವಿಎಕ್ಸ್‌ಐ ಪ್ಲಸ್ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಮಾರುತಿ ಸೆಲೆರಿಯೊ ಮಾರುಕಟ್ಟೆಯಲ್ಲಿ ಭಾರಿ ಅಲೆಯನ್ನೆಬ್ಬಿಸಿತ್ತು. ಅಲ್ಲದೆ ಸಮಕಾಲೀನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಕಾರುಗಳಲ್ಲಿ ಗುರುತಿಸಿಕೊಂಡಿದೆ.


ಸೆಲೆರಿಯೊದಲ್ಲಿ ಆಳವಡಿಸಲಾಗಿರುವ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಮಾರುತಿಗೆ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಸಹಕಾರಿಯಾಗಿತ್ತು. ಸದ್ಯ ಈ ಹಬ್ಬದ ಆವೃತ್ತಿಯಲ್ಲಿ ಇನ್ನಷ್ಟು ಮಾರಾಟ ಕುದುರಿಸಿಕೊಳ್ಳುವ ಇರಾದೆಯಲ್ಲಿರುವ ಸಂಸ್ಥೆಯು ಸೆಲೆರಿಯೊ ವಿಎಕ್ಸ್‌ಐ ಪ್ಲಸ್ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ವಿಎಕ್ಸ್‌ಐ ವೆರಿಯಂಟ್ ತಲಹದಿಯಲ್ಲಿ ನಿರ್ಮಾಣವಾಗಿರುವ 20,000 ರು.ಗಳ ಆಕ್ಸೆಸರಿಗಳನ್ನು ರಿಯಾಯಿತಿ ದರಗಳಲ್ಲಿ ಮುಂದಿಡುತ್ತಿದ್ದು, 13,990 ರು.ಗಳಿಗೆ ನಿಮಗೆ ಲಭ್ಯವಾಗಲಿದೆ. ಇಷ್ಟೇ ಅಲ್ಲದೆ ದೇಹ ಬಣ್ಣದ ಡೋರ್ ಹ್ಯಾಂಡಲ್, ಒಆರ್‌ವಿಎಂ ಜೊತೆ ಬ್ಲಿಂಕರ್, ಡಬಲ್ ಡಿನ್ ಜೆವಿಸಿ ಆಡಿಯೋ ಸಿಸ್ಟಂ, ಸ್ಪೀಕರ್, ಸೆಂಟ್ರಾಲ್ ಲಾಕಿಂಗ್ ಮತ್ತು ರಿಮೋಟ್ ಕಂಟ್ರೋಲ್ ಸೌಲಭ್ಯ ಲಭ್ಯವಿರಲಿದೆ.


ಉಳಿದಂತೆ ವಿಎಕ್ಸ್‌ಐ ಮಾದರಿಗೆ ಸಮಾನವಾದ ವೈಶಿಷ್ಟ್ಯ ಪಡೆಯಲಿದೆ. ಹಾಗಿದ್ದರೂ ತಾಂತ್ರಿಕ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 1.0 ಲೀಟರ್ ತ್ರಿ ಸಿಲಿಂಡರ್ ಕೆ ಸಿರೀಸ್ ಪೆಟ್ರೋಲ್ ಮೋಟಾರ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 68 ಅಶ್ವಶಕ್ತಿ (90 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಅಂದ ಹಾಗೆ ಮಾರುತಿ ಸೆಲೆರಿಯೊ ವಿಎಕ್ಸ್‌ಐ ಮ್ಯಾನುವಲ್ ಟ್ರಾನ್ಸ್‌ಮಿಷನ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ಬೆಲೆ 4.05 ಲಕ್ಷ ರು.ಗಳಾಗಿವೆ. ಅಂದರೆ ಹೊಸತಾದ ವಿಎಕ್ಸ್‌ಐ ಎಂಟಿ ವೆರಿಯಂಟ್ 4.19 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

Celerio VXi+ limited edition

ಸ್ಪರ್ಧಿಗಳು: ಹೋಂಡಾ ಬ್ರಿಯೊ, ಷೆವರ್ಲೆ ಬೀಟ್, ಹ್ಯುಂಡೈ ಗ್ರಾಂಡ್ ಐ10 ಮತ್ತು ಫೋರ್ಡ್ ಫಿಗೊ
Most Read Articles

Kannada
English summary
Maruti Suzuki Launced Celerio VXi+ limited edition variant. Company expects It will boost fesitve season sales. 
Story first published: Friday, September 26, 2014, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X