ಮಾರುತಿಯ ಯುರೋಪ್ ಪಯಣ ಸ್ಥಗಿತ

Written By:

ಮಾರುತಿ ಸುಜುಕಿ ದೇಶದ ನಂ. 1 ಕಾರು ಸಂಸ್ಥೆ ಆಗಿರಬಹುದು. ಆದರೆ ಈ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗೆ ವಿದೇಶದಲ್ಲೂ ಉತ್ತಮ ವ್ಯಾಪಾರವಿದೆ. ವಿದೇಶ ಮಾರುಕಟ್ಟೆಯ ಪೈಕಿ ಯುರೋಪ್‌ನಲ್ಲಿ ಅತಿ ಹೆಚ್ಚು ರಫ್ತು ಹೊಂದಿರುವ ಮಾರುತಿ ಒಟ್ಟಾರೆ ರಫ್ತು ವಹಿವಾಟಿನಲ್ಲಿ ಶೇಕಡಾ 30ರಷ್ಟನ್ನು ಆ ಶ್ರೀಮಂತ ಖಂಡದಿಂದಲೇ ಹೊಂದಿದೆ.

ಅಷ್ಟೇ ಅಲ್ಲದೆ ಮಾರುತಿಯ ಯುರೋಪ್‌ನತ್ತ ರಫ್ತು ಕಾರ್ಯವು 24,000 ಯುನಿಟ್‌ಗಳಿಂದ 30,000 ಯುನಿಟ್‌ಗಳಿಗೆ ವರ್ಧಿಸಿತ್ತು. ಉತ್ತಮ ವ್ಯಾಪಾರ ಹೊಂದಿರುವ ಹೊರತಾಗಿಯೂ ಮಾರುತಿ ತನ್ನ ಯುರೋಪ್ ವಹಿವಾಟನ್ನು ಕೊನೆಗೊಳಿಸಲು ಪ್ರೇರಿತವಾಗಿದೆ.

Maruti Suzuki

ಇದುವರೆಗೆ ಮಾರುತಿ ಸುಜುಕಿಯಿಂದ ಯುರೋಪ್‌‍ಗೆ ಎಸ್ಟಾರ್ ಮಾತ್ರ ರಫ್ತಾಗುತ್ತಿತ್ತು. ಆದರೆ ಎಸ್ಟಾರ್ ಉತ್ಪಾದನೆಯನ್ನು ಭಾರತ ಸೇರಿದಂತೆ ಯುರೋಪ್‌ನಲ್ಲೂ ಸ್ಥಗಿತಗೊಳಿಸಲಾಗಿದೆ. ಇದೀಗ ಮಾರುತಿ ಬಳಿ ಶೇಖರಣೆಯಿರುವ 15,000 ಯುನಿಟ್‌ ರಫ್ತು ಆದ ಬಳಿಕ ಎಸ್ಟಾರ್ ರಫ್ತಿಗೆ ಬ್ರೇಕ್ ಬೀಳಲಿದೆ.

ಇನ್ನು ಇದೀಗಷ್ಟೇ ಲಾಂಚ್ ಕಂಡಿರುವ ಸೆಲೆರಿಯೊ (ಎಸ್ಟಾರ್ ಬದಲಿ ಕಾರು) ವಿಚಾರಕ್ಕೆ ಬರುವುದಾದ್ದಲ್ಲಿ, ಯುರೋಪ್ ಮಾರುಕಟ್ಟೆ ಬೇಡಿಕೆಯನ್ನು ಥಾಯ್ಲೆಂಡ್ ಘಟಕ ಪೊರೈಸಲಿದೆ. ಯಾಕೆಂದರೆ ಭಾರತದಲ್ಲಿ ನಿರ್ಮಾಣವಾಗಿರುವ ಮಾರುತಿ ಸೆಲೆರಿಯೊ ಯುರೋ 4 ರೇಟಿಂಗಷ್ಟೇ ಪಡೆದುಕೊಂಡಿದೆ. ಇನ್ನೊಂದೆಡೆ ಥಾಯ್ಲೆಂಡ್‌ನಲ್ಲಿ ಉತ್ಪಾದನೆಯಾದ ಸೆಲೆರಿಯೊ ಯುರೋ 5 ರೇಟಿಂಗ್ ಕಾಯ್ದುಕೊಂಡಿತ್ತು.

ಒಟ್ಟಿನಲ್ಲಿ ಯುರೋಪ್‌ನತ್ತ ಮಾರುತಿ ತನ್ನ ರಫ್ತು ವಹಿವಾಟನ್ನು 2015 ಸೆಪ್ಟೆಂಬರ್‌ನಲ್ಲಷ್ಟೇ ಪುನರಾರಂಭಿಸಲಿದೆ. ಅಂದರೆ ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ವೈಆರ್‌ಎ ಕೋಡ್ ಪಡೆದುಕೊಂಡಿರುವ ನೂತನ ಕಾರನ್ನು ಯುರೋಪ್‌ನತ್ತ ರವಾನೆಯಾಗಲಿದೆ.

ಈ ಎಲ್ಲ ಬೆಳವಣಿಗೆಯು ಮಾರುತಿಗೆ ನಷ್ಟವನ್ನುಂಟುಮಾಡಲಿದ್ದು, 15 ತಿಂಗಳ ಬಿಡುವು ಶೇಕಡಾ 10ರಷ್ಟು ಕುಸಿತಕ್ಕೆ ಎಡೆಮಾಡಿಕೊಡುವ ಸಾಧ್ಯತೆಯಿದೆ. ಪ್ರಸ್ತುತ ನಷ್ಟಗಳನ್ನು ಭರಿಸಲು ಮುಂದಾಗಿರುವ ಮಾರುತಿ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣಪೂರ್ವ ಏಷ್ಯಾ ಹಾಗೂ ಇತರ ನೆರೆ ರಾಷ್ಟ್ರಗಳ ಸೇರಿದಂತೆ 100ರಷ್ಟು ರಾಷ್ಟ್ರಗಳಿಗೆ ತನ್ನ ರಫ್ತು ವಹಿವಾಟನ್ನು ಇನ್ನಷ್ಟು ಹೆಚ್ಚಿಸಲಿದೆ.

English summary
Maruti Suzuki might be India's largest car manufacturer, but a significant part of its income comes from selling cars outside India.
Story first published: Thursday, March 20, 2014, 12:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark