2015ರಲ್ಲಿ ಮಾರುತಿ ಸುಜುಕಿ ಮಿನಿ ಟ್ರಕ್ ಲಾಂಚ್

Written By:

ಮುಂದಿನ ಸಾಲಿನಲ್ಲಿ ಭಾರತದ ವಾಣಿಜ್ಯ ವಾಹನ ವಿಭಾಗಕ್ಕೆ ಪ್ರವೇಶಿಸಲಿರುವ ಮಾರುತಿ ಸುಜುಕಿ, ನೂತನ ಮಿನಿ ಟ್ರಕ್ ಲಾಂಚ್ ಮಾಡಲಿದೆ. ಎರಡು ಟನ್ ಭಾರ ಮಿತಿಯೊಳಗಿನ ಈ ಟ್ರಕ್, ಸುಜುಕಿಯ ಕ್ಯಾರಿ ತಲಹದಿಯಲ್ಲಿ ನಿರ್ಮಾಣವಾಗಲಿದೆ.

ಮಾರುತಿಯ ನೂತನ ಮಿನಿ ಟ್ರಕ್, 'ವೈ9ಟಿ' ಕೋಡ್ ಪಡೆದುಕೊಂಡಿದೆ. ಅಂದರೆ ಟ್ರಕ್ ನಾಮಕರಣ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಮಾರುತಿಯ ಹಗುರ ವಾಣಿಜ್ಯ ವಾಹನವು (ಎಲ್‌ಸವಿ), ಟಾಟಾ ಏಸ್‌, ಮಹೀಂದ್ರ ಗಿಯೊ, ಪಿಯೊಜಿಯೊ ಅಪ್ ಟ್ರಕ್ ಮತ್ತು ಫೋರ್ಸ್ ಮೋಟಾರ್ಸ್ ಟ್ರಂಪ್‌‍ಗಳಂತಹ ಮಿನಿ ಟ್ರಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

To Follow DriveSpark On Facebook, Click The Like Button
Maruti Suzuki Carry

ಎಲ್ಲ ಹಂತದಲ್ಲಿಯೂ ಮಾರುತಿಯ ನೂತನ ಟ್ರಕ್ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಯಾಕೆಂದರೆ ಒಂದೆಡೆ ಮಾರುತಿಯ ಬ್ರಾಂಡ್ ಹೆಸರು ಸಾಥ್ ನೀಡುತ್ತಿದ್ದರೆ ಇನ್ನೊಂದೆಡೆ ಈ ಮಿನಿ ಟ್ರಕ್ ಮೂಲಕ ಹೊಚ್ಚ ಹೊಸ ಎಂಜಿನ್ ಪರಿಚಯಿಸಲಾಗುತ್ತಿದೆ.

ನೂತನ ವೈ9ಟಿ ಟ್ರಕ್‌ನಲ್ಲಿ 0.8 ಲೀಟರ್ ಟ್ವಿನ್ ಸಿಲಿಂಡರ್ ಡೀಸೆಲ್ ಎಂಜಿನ್ ಆಳವಡಿಕೆಯಾಗಲಿದೆ. ಇನ್ನೊಂದೆಡೆ 1.2 ಲೀಟರ್ ಎಂಜಿನ್‌ ಜತೆ ಸಿಎನ್‌ಜಿ ವೆರಿಯಂಟ್‌ನಲ್ಲೂ ಆಗಮನವಾಗಲಿದೆ.

ದೇಶದ ರಸ್ತೆ ಪರಿಸ್ಥಿತಿ ಹಾಗೂ ಗ್ರಾಹಕರ ಅಗತ್ಯಗಳಾನುಸಾರವಾಗಿ ಸುಜುಕಿ ಕ್ಯಾರಿಯಲ್ಲಿ ಬದಲಾವಣೆ ತರಲಾಗುತ್ತಿದೆ. ಇದು ಗುರ್ಗಾಂವ್‌ನ ಘಟಕದಲ್ಲಿ ಉತ್ಪಾದನೆಯಾಗಲಿದೆ. ಅದೇ ರೀತಿ ಡೀಸೆಲ್ ವೆರಿಯಂಟ್ 4 ಲಕ್ಷ ಹಾಗೂ ಪೆಟ್ರೋಲ್ ವೆರಿಯಂಟ್ 5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

English summary
Maruti Suzuki will enter commercial vehicle segment in India next year with a new sub-2 tonne truck that will be based on the Suzuki Carry. The said mini truck is known only by its codename ‘Y9T' as of now since Maruti Suzuki is yet to decide on a commercial name.
Story first published: Tuesday, March 18, 2014, 15:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark