ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಆರ್‌ಎಕ್ಸ್6 ತೆರೆಮರೆಯಲ್ಲಿ ಸಜ್ಜು

Written By:

ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ವಾಹನ ತಯಾರಕ ಸಂಸ್ಥೆಯು ತೆರೆಮರೆಯಲ್ಲಿ ನೂತನ ಮಾದರಿಯೊಂದನ್ನು ಸಿದ್ಧಗೊಳಿಸುತ್ತಿದೆ. ಹೌದು, ಸ್ಯಾಂಗ್ಯೊಂಗ್ ಮಾಲಿಕತ್ವದ ಮಹೀಂದ್ರ, ನೂತನ ರೆಕ್ಸ್ಟಾನ್ ಆರ್‌ಎಕ್ಸ್6 ಮಾದರಿಯನ್ನು ದೇಶಕ್ಕೆ ಪರಿಚಯಿಸಲಿದೆ.

ನೂತನ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಆರ್‌ಎಕ್ಸ್6 ಎಸ್‌ಯುವಿ ಮಾದರಿಯು 162 ಅಶ್ವಶಕ್ತಿ ಉತ್ಪಾದಿಸುವ 2.7 ಲೀಟರ್ ಫೈವ್ ಸಿಲಿಂಡರ್ ಟರ್ಬೊ ಡೀಸೆಲ್ ಮೋಟಾರ್ ಪಡೆದುಕೊಳ್ಳಲಿದೆ. ಇದು ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕೂಡಾ ಇರಲಿದೆ.

SsangYong Rexton RX6

ಟಾಪ್ ಎಂಡ್ ಆಟೋಮ್ಯಾಟಿಕ್ ಆರ್‌ಎಕ್ಸ್7 ವೆರಿಯಂಟ್‌ನಲ್ಲಿರುವ ಎಲ್ಲ ವೈಶಿಷ್ಟ್ಯಗಳು ಆರ್‌ಎಕ್ಸ್6 ಮಾದರಿಯಲ್ಲಿ ದೊರಕಲಿದೆ. ಈ ಪೈಕಿ ಮೆಮರಿ ಫಂಕ್ಷನ್, ವಿಂಗ್ ಮಿರರ್, ಎಲೆಕ್ಟ್ರಾನಿಕ್ ಸನ್ ರೂಫ್ ಜತೆ ಸನ್ ಬ್ಲೈಂಡ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ರೈನ್ ಸೆನ್ಸಿಂಗ್ ಸ್ಟೀರಿಂಗ್ ವೀಲ್ ಹಾಗೂ ಎಂಟು ವಿಧದಲ್ಲಿ ವಿದ್ಯುನ್ಮಾನವಾಗಿ ಹೊಂದಣಿಸಬಹುದಾದ ಚಾಲಕ ಸೀಟು ದೊರಕಲಿದೆ. ಇನ್ನುಳಿದಂತೆ ಎಲ್‌ಇಂಡಿ ಡೈ ಲೈಟ್ ರನ್ನಿಂಗ್ ಲ್ಯಾಂಪ್ ಹಾಗೂ ಎಲ್‌ಇಡಿ ಟೈಲ್ ಲ್ಯಾಂಪ್ ಕೂಡಾ ಇರಲಿದೆ.

ಸ್ಯಾಗ್ಯೊಂಗ್ ರೆಕ್ಸ್ಟಾನ್ ಲಾಂಚ್ ಆದ ಬಳಿಕ ಇದುವರೆಗೆ 3600 ಯುನಿಟ್ ಮಾರಾಟವಾಗಿದೆ. ಇದೀಗ ಆಗಮನವಾಗಲಿರುವ ನೂತನ ವೆರಿಯಂಟ್ ಹಿಂದಿನ ಮಾದರಿಯ ಎಲ್ಲ ಕೊರತೆಯನ್ನು ನೀಗಿಸುವ ಭರವಸೆಯನ್ನು ಮಹೀಂದ್ರ ಹೊಂದಿದೆ.

English summary
Mahindra-owned SsangYong is readying a new variant of its Rexton SUV called the Rexton RX6. The new Rexton RX6, like its other variants, is powered by a 162bhp, 2.7-litre, five cylinder, turbo-diesel motor, sourced from Mercedes and will be offered with a five-speed manual transmission.
Story first published: Monday, April 14, 2014, 11:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark