ದೀಪಾವಳಿ ಕೊಡುಗೆ; ಪೆಟ್ರೋಲ್ ಬೆಲೆ ರು. 1 ಇಳಿಕೆ

Written By:

ನಿರೀಕ್ಷೆಯಂತೆಯೇ ಅಂತರಾಷ್ಟ್ರೀಯ ಕಚ್ಚಾ ತೈಲ ದರಗಳಲ್ಲಿ ಭಾರಿ ಇಳಿಕೆ ಕಂಡುಬಂದಿರುವ ಹಿನ್ನಲೆಯಲ್ಲಿ ದೇಶದಲ್ಲೂ ಪೆಟ್ರೋಲ್ ಬೆಲೆಯನ್ನು ರು. 1ರಷ್ಟು ಇಳಿಕೆಗೊಳಿಸಲಾಗಿದೆ.

ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಇದರೊಂದಿಗೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ದೇಶದ ನಿವಾಸಿಗಳಿಗೆ ಕೊಡುಗೆ ಲಭಿಸಿದಂತಾಗಿದೆ.

To Follow DriveSpark On Facebook, Click The Like Button
Petrol price

ಜಾಗತಿಕ ಕಚ್ಚಾ ತೈಲ ಬೆಲೆ ಕಳೆದ ಎರಡು ವರ್ಷಗಳಲ್ಲೇ ಅತ್ಯಂತ ಕಡಿಮೆ ಬ್ಯಾರೆಲ್‌ಗೆ 80 ಅಮೆರಿಕನ್ ಡಾಲರ್‌ಗೆ ಇಳಿಕೆಯಾಗಿತ್ತು. ಇದರ ಬೆನ್ನಲ್ಲೇ ತೈಲ ಬೆಲೆ ಇಳಿಕೆಗೊಳಿಸುವುದಾಗಿ ತೈಲದ್ಯೋಮ ಕಂಪನಿಗಳು ಸೂಚನೆ ನೀಡಿದ್ದವು.

ಇನ್ನು ಮುಂದಿನ ವಾರದಲ್ಲಿ ಡೀಸೆಲ್ ಬೆಲೆಯಲ್ಲೂ 2.50 ರು.ಗಳಷ್ಟು ಇಳಿಕೆ ಕಂಡುಬರುವ ಸಾಧ್ಯತೆಯಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಿಕಟ ಮೂಲಗಳು ತಿಳಿಸಿವೆ. ಈ ಮೂಲಕ ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಡೀಸೆಲ್ ಬೆಲೆಯಲ್ಲೂ ಇಳಿಕೆ ಕಂಡುಬರಲಿದೆ.

2014 ಅಕ್ಟೋಬರ್ 19, ಭಾನುವಾರ ಮಹಾರಾಷ್ಟ್ರ ಮತ್ತು ಹಿರಿಯಾಣ ವಿಧಾನಸಭ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಡೀಸೆಲ್ ಬೆಲೆ ಇಳಿಕೆಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಯಿದೆ.

ಮಹಾನಗರಗಳ ಪರಿಷ್ಕೃತ ಬೆಲೆ ಇಂತಿದೆ (ರು.ಗಳಲ್ಲಿ)

ದೆಹಲಿ

ಪರಿಷ್ಕತ ಬೆಲೆ - 66.65

ಹಿಂದಿನ ಬೆಲೆ - 67.86

ಇಳಿಕೆ - 1.21

ಕೋಲ್ಕತ್ತಾ 

ಪರಿಷ್ಕತ ಬೆಲೆ - 74.21

ಹಿಂದಿನ ಬೆಲೆ - 75.46

ಇಳಿಕೆ - 1.25

ಮುಂಬೈ 

ಪರಿಷ್ಕತ ಬೆಲೆ - 74.46

ಹಿಂದಿನ ಬೆಲೆ - 75.73

ಇಳಿಕೆ - 1.27

ಚೆನ್ನೈ

ಪರಿಷ್ಕತ ಬೆಲೆ - 69.59

ಹಿಂದಿನ ಬೆಲೆ - 70.87

ಇಳಿಕೆ - 1.28

English summary
Petrol price cut by Rs. 1, diesel likely to cut Rs 2.50
Story first published: Wednesday, October 15, 2014, 9:29 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark