ಕೋಟಿ ದುಬಾರಿಯ ಪೋರ್ಷೆ ಕೆಯಾನ್ ಫೇಸ್‌ಲಿಫ್ಟ್ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಪೋರ್ಷೆ ಮಗದೊಂದು ಆಕರ್ಷಕ ಮಾದರಿಯನ್ನು ದೇಶಕ್ಕೆ ಪರಿಚಯಿಸಿದೆ. ಹೌದು, ಪೋರ್ಷೆ ಕೆಯಾನ್ ಕ್ರೀಡಾ ಬಳಕೆಯ ವಾಹನ ಹೊಸ ರೂಪದಲ್ಲಿ ಭಾರತ ಪ್ರವೇಶಗೊಂಡಿದೆ.

ಬೆಲೆ ಮಾಹಿತಿ (ಕೋಟಿ ರು.ಗಳಲ್ಲಿ)

  • ಕೆಯಾನ್ ಡೀಸೆಲ್ - 1.04
  • ಕೆಯಾನ್ ಎಸ್ - 1.18
  • ಕೆಯಾನ್ ಎಸ್ ಡೀಸೆಲ್ - 1.21
  • ಕೆಯಾನ್ ಟರ್ಬೊ - 1.78

(ಎಲ್ಲ ಬೆಲೆಗಳು ಎಕ್ಸ್ ಶೋ ರೂಂ ದೆಹಲಿ)


ತಾಂತ್ರಿಕತೆ
ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಹೊಸ ಪೋರ್ಷೆ ಲಭ್ಯವಾಗಲಿದೆ. ಕೆಯಾನ್ ಎಸ್ ಪೆಟ್ರೋಲ್ ಮಾದರಿಯು 3.6 ಲೀಟರ್ ವಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 414 ಅಶ್ವಶಕ್ತಿ ಉತ್ಪಾದಿಸಲಿದೆ. ಅಂತೆಯೇ ಕೆಯಾನ್ ಟರ್ಬೊ ಮಾದರಿಯು 4.8 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 513 ಅಶ್ವಶಕ್ತಿ ಉತ್ಪಾದಿಸಲಿದೆ.

ಇನ್ನು ಡೀಸೆಲ್ ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಇದರ 3.0 ಲೀಟರ್ ವಿ6 ಎಂಜಿನ್ 241 ಅಶ್ವಶಕ್ತಿ ಅಂತೆಯೇ ಕೆಯಾನ್ ಎಸ್ ಡೀಸೆಲ್ 4.2 ಲೀಟರ್ ವಿ8 ಎಂಜಿನ್ 380 ಅಶ್ವಶಕ್ತಿ ಉತ್ಪಾದಿಸಲಿದೆ.

ವೈಶಿಷ್ಟ್ಯಗಳು
  • ಬೈ-ಕ್ಸೆನಾನ್ ಹೆಡ್ ಲ್ಯಾಂಪ್,
  • ಆಟೋಮ್ಯಾಟಿಕ್ ಬೂಟ್ ಲಿಡ್,
  • ಫೋರ್ ಜೋನ್ ಕ್ಲೈಮೇಟ್ ಕಂಟ್ರೋಲ್,
  • ಪ್ಯಾನರೋಮಿಕ್ ಸನ್ ರೂಫ್,
  • ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ವೆರಿಯಂಟ್‌ನಲ್ಲಿ ಪೆಡಲ್ ಶಿಫ್ಟರ್,
  • ಪೋರ್ಷೆ ಏರ್ ಸಸ್ಪೆಷನ್,
  • ಸ್ಪೋರ್ಟ್ ಪ್ಲಸ್ ಡ್ರೈವಿಂಗ್ ಮೋಡ್,
  • ಬೋಸ್ ಸೌರಂಡ್ ಸೌಂಡ್ ಸಿಸ್ಟಂ,
  • ಪಾರ್ಕ್ ಅಸಿಸ್ಟ್,
  • ಸೀಟ್ ಹೀಟಿಂಗ್

ಸುರಕ್ಷತೆ
  • ಪೋರ್ಷೆ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (ಪಿಎಸ್‌ಎಂ),
  • ಪೋರ್ಷೆ ಡೈನಾಮಿಕ್ ಲೈಟ್ ಸಿಸ್ಟಂ (ಪಿಡಿಎಲ್‌ಎಸ್),
  • ಡೇಟೈಮ್ ರನ್ನಿಂಗ್ ಲೈಟ್ಸ್,
  • ಲೇನ್ ಡಿಪಾರ್ಚರ್ ವಾರ್ನಿಂಗ್,
  • ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಜೊತೆ ಪೋರ್ಷೆ ಆಕ್ಟಿವ್ ಸೇಫ್ (ಪಿಎಎಸ್),
  • ಪೋರ್ಷೆ ಡೈನಾಮಿಕ್ ಚಾಸೀ ಕಂಟ್ರೋಲ್ (ಪಿಡಿಸಿಸಿ),
  • ವೀಲ್ಸ್ ಆಂಡ್ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (ಟಿಪಿಎಂಎಸ್),
  • ಪೋರ್ಷೆ ಟ್ರಾಕ್ಷನ್ ಮ್ಯಾನೇಜ್‌ಮೆಂಟ್ (ಪಿಟಿಎಂ)
Porsche Cayenne
Most Read Articles

Kannada
English summary
Porsche, the German luxury carmaker has launched the latest facelifted version of the Cayenne SUV. The facelift version gets a few changes mechanically and for the exterior.
Story first published: Tuesday, December 2, 2014, 17:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X