ದೇಶದ ಮೊಟ್ಟ ಮೊದಲ ಟ್ರಕ್ ರೇಸ್

Posted By:

ದೇಶದ ಘನ ವಾಹನ ವಿಭಾಗದಲ್ಲಿ ಪ್ರಾಬಲ್ಯ ಸ್ಥಾಪಿಸಿರುವ ಟಾಟಾ ಮೋಟಾರ್ಸ್, ಇದೇ ಮೊದಲ ಬಾರಿಗೆ ದೇಶದ ಚೊಚ್ಚಲ ಟ್ರಕ್ ರೇಸ್ ಆಯೋಜನೆ ಮಾಡಿದೆ. ಭಾನುವಾರ ಸಂಜೆ ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ರೇಸ್ ಆಯೋಜನೆಯಾಗಿತ್ತು.

ಪ್ರಸ್ತುತ ರೇಸ್‌ನಲ್ಲಿ ಕಸ್ಟಮೈಸ್ಡ್ ಮಾಡಲಾದ 12 ಟಾಟಾ ಪ್ರೈಮಾ 4038.ಎಸ್ ಘನ ಟ್ರಕ್ ವಾಹನಗಳು ಭಾಗವಹಿಸಿದ್ದವು. ಇದು 370 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಗಂಟೆಗೆ 110 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

ಟಾಟಾ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‌ಶಿಪ್

ಅಂತಿಮ ಕ್ಯಾಸ್ಟ್ರಲ್ ವೆಕ್ಟಾನ್ ತಂಡದ ಚಾಲಕರಾಗಿರುವ ಸ್ಟುವರ್ಟ್ ಒಲಿವೆರ್ ಜಯಭೇರಿ ಬಾರಿಸಿದರು. ಬಳಿಕ ಮಾತನಾಡಿದ ಅವರು, ಇದೊಂದು ಅದ್ಭುತ ಅನುಭವವಾಗಿತ್ತು. ಟ್ರಕ್‌ಗಳು ಅದ್ಭುತ ನಿರ್ವಹಣೆ ನೀಡುತ್ತಿದ್ದು, ಭಾರತದಲ್ಲಿ ಆಯೋಜನೆಯಾದ ಚೊಚ್ಚಲ ಟ್ರಕ್ ರೇಸ್ ಗೆದ್ದಿರುವುದರಲ್ಲಿ ಅತೀವ ಸಂತೋಷವಿದೆ ಎಂದಿದ್ದಾರೆ.

ಟಾಟಾ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‌ಶಿಪ್

ಒಟ್ಟು ಎರಡು ರೇಸ್ ಹಮ್ಮಿಕೊಳ್ಳಲಾಗಿತ್ತು. ಅವುಗಳೆಂದರೆ 5 ಲ್ಯಾಪ್ ಸ್ಪ್ರಿಂಟ್ ಮತ್ತು 15 ಲ್ಯಾಪ್ ಮೇನ್ ರೇಸ್.

ಟಾಟಾ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‌ಶಿಪ್

ಎರಡು ರೇಸ್‌ಗಳಲ್ಲಿ ಗೆಲುವು ಸಾಧಿಸಿದ ಆಧಾರದಲ್ಲಿ ಒಟ್ಟು ಸೇರಿಸಿ ಅಂತಿಮ ಅಂಕಗಳನ್ನು ವಿತರಿಸಲಾಗಿತ್ತು.

ಟಾಟಾ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‌ಶಿಪ್

ದೇಶದಲ್ಲಿ ಆಯೋಜನೆಯಾಗಿರುವ ಮೊತ್ತ ಮೊದಲ ಟ್ರಕ್ ರೇಸ್ ವೀಕ್ಷಿಸಲು ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ 25,000ದಷ್ಟು ಜನರು ಜಮಾಯಿಸಿದ್ದರು. ಈ ಮೂಲಕ 45 ನಿಮಿಷಗಳಷ್ಟು ಕಾಲ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.

ಟಾಟಾ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‌ಶಿಪ್

ಟಿ ಪ್ರೈಮಾ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನುರಿತ ಚಾಲಕರು ತಮ್ಮ ತಂಡಗಳ ಟ್ರಕ್‌ಗಳನ್ನು ಚಲಾಯಿಸಿದ್ದರು. ಇದರಲ್ಲಿ ಯುರೋಪ್‌ನಲ್ಲಿ ಚಾಲಕರು ಪ್ರಮುಖರಾಗಿದ್ದರು.

ಟಾಟಾ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‌ಶಿಪ್

ಟ್ರಕ್ ರೇಸ್ ವಿಜೇತ ಚಾಲಕರು (ಚಿತ್ರದಲ್ಲಿ, ಎಡದಿಂದ ಬಲಕ್ಕೆ)

ಮ್ಯಾಟ್ ಸಮ್ಮರ್‌ಫೀಲ್ಡ್, ತಂಡ - ಕಮ್ಮಿನ್ಸ್ (ತೃತೀಯ)

ಸ್ಟುವರ್ಟ್ ಒಳಿವರ್, ತಂಡ- ಕ್ಯಾಸ್ಟ್ರಲ್ ವೆಕ್ಟಾನ್ (ಪ್ರಥಮ)

ಡೇವಿಡ್ ಜೆಂಕಿನ್ಸ್, ತಂಡ - ಟೀಮ್ ಟಾಟಾ ಟೆಕ್ನಾಲಜೀಸ್ ಮೋಟಾರ್‌ಸ್ಪೋರ್ಟ್ (ದ್ವಿತೀಯ)

ಟಾಟಾ ಟಿ1 ಪ್ರೈಮಾ ಟ್ರಕ್ ರೇಸಿಂಗ್ ಚಾಂಪಿಯನ್‌ಶಿಪ್

ಅಂತಿಮ ಪಟ್ಟಿ ಇಂತಿದೆ...

English summary
Tata Motors T1 Prima Championship, India's first ever truck racing, was held at the Buddh International Circuit in Greater Noida on Sunday, March 24th.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark