ಬೆಂಗ್ಳೂರಿಗೂ ಬರುತ್ತೆ ಕೇರಳ 'ಶಿ ಟ್ಯಾಕ್ಸಿ' ಮಾದರಿಯ 'ಗುಲಾಬಿ ಆಟೋ'

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ಕೇರಳದ ಕೊಚ್ಚಿಯಲ್ಲಿ ಆರಂಭಿಸಿರುವ ಶಿ ಟ್ಯಾಕ್ಸಿ [ಕೇರಳದಲ್ಲಿ ಮಹಿಳೆಯರಿಗಾಗಿ ಶಿ ಟ್ಯಾಕ್ಸಿ] ಭಾರಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದೆ. ಇನ್ನೊಂದೆಡೆ ದೆಹಲಿಯಂತಹ ರಾಜಧಾನಿ ನಗರದಲ್ಲೇ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

ಇತ್ತೀಚೆಗಷ್ಟೇ ಉದ್ಯೋಗಸ್ಥ ಮಹಿಳೆಯೊಬ್ಬಾಕೆಯನ್ನು ಅಜ್ಞಾತ ಪ್ರದೇಶಕ್ಕೆ ಕೊಂಡೊಯ್ದಿದ್ದ ಖಾಸಗಿ ಟ್ಯಾಕ್ಸಿ ಚಾಲಕ ಅತ್ಯಾಚಾರಗೈದಿದ್ದನು. ಇದು ಮಹಿಳಾ ಪ್ರಯಾಣಿಕರ ಸುರಕ್ಷತೆ ಬಗ್ಗೆ ಪ್ರಶ್ನೆ ಎದ್ದೇಳುವಲ್ಲಿ ಕಾರಣವಾಗಿತ್ತು.

she taxi

ಇದರಿಂದಾಗಿ ದೇಶದೆಲ್ಲೆಡೆ ಕೇರಳ ಶಿ ಟ್ಯಾಕ್ಸಿ ಮಾದರಿಯ ಟ್ಯಾಕ್ಸಿ ಸೇವೆ ದೆಹಲಿ ಹಾಗೂ ಮುಂಬೈ ನಗರಗಳಿಗೂ ಸದ್ಯದಲ್ಲೇ ವ್ಯಾಪಿಸಲಿದೆ. ಜಿ ಕ್ಯಾಬ್ಸ್ ಮತ್ತು ಪ್ರಿಯದರ್ಶಿನಿ ಇಂತಹದೊಂದು ಯೋಜನೆಯೊಂದಿಗೆ ಮುಂದೆ ಬಂದಿದ್ದು, ಮಹಿಳಾ ಪ್ರಯಾಣಿಕರಿಗಾಗಿ ಮಹಿಳೆಯರೇ ಚಾಲಕಿಯರಾಗಲಿದ್ದಾರೆ.

ಈ ಎಲ್ಲ ಕ್ಯಾಬ್‌ಗಳಲ್ಲಿ ಜಿಪಿಎಸ್, ಜಿಪಿಆರ್‌ಎಸ್ ಸೇವೆ ಇರಲಿದೆ. ಇನ್ನೊಂದೆಡೆ ಶಿ ಟ್ಯಾಕ್ಸಿಯಲ್ಲಿ ಚಾಲಕ ಹಾಗೂ ಪ್ರಯಾಣಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗುವ ಕಾಲ್ ಸೆಂಟರ್‌ ಸಂಪರ್ಕಿತ ಅಲಾರಾಂ ವ್ಯವಸ್ಥೆಯೂ ಇದೆ.

ಬೆಂಗಳೂರಿಗೂ ಬರುತ್ತಾ?
ಹೌದು, ಬೆಂಗಳೂರು ಪಾಲಿಟಿಕಲ್ ಆಕ್ಷನ್ ಕಮಿತಿ (ಬಿಪಿಎಸಿ) ಸದ್ಯಸರಾಗಿರುವ ಕಿರಣ್ ಮಂಜ್ದದಾರ್ ಶಾ ಹಾಗೂ ಟಿವಿ ಮೋಹನ್ ದಾಸ್ ಪೈ ಸಹ 'ಗುಲಾಬಿ ಆಟೋ' ಎನ್ನುವ ನೂತನ ಆಟೋ ರಿಕ್ಷಾ ಸೇವೆಯ ಪರಿಕಲ್ಪನೆಯನ್ನು ರೂಪಿಸಿದ್ದು, ಕರ್ನಾಟಕ ರಾಜ್ಯ ಸರಕಾರದ ಅನುಮೋದನೆಗಾಗಿ ಕಾಯುತ್ತಿದ್ದಾರೆ.

ಒಟ್ಟಿನಲ್ಲಿ ಇದು ಮಹಿಳೆಯರಿಗೆ ಜೀವನೋಪಾಯದ ಮಾರ್ಗವೂ ಆಗಿರಲಿದೆ. ಅಂತೆಯೇ ನಗರದಲ್ಲಿ ಓಡಾಡುವ ಬಿಎಂಟಿಸಿ ಬಸ್ಸು ಹಾಗೂ ಆಟೋಗಳಲ್ಲಿ 'ದುರ್ಗಾ ಅಲರಾಂ' ಆಳವಡಿಸುವ ಬಗ್ಗೆಯೂ ಚಿಂತನೆಯಲ್ಲಿದೆ. ಯಾವುದೇ ಕ್ಷಣದಲ್ಲಾದರೂ ಅಸುರಕ್ಷಿತ ಎಂದು ತೋರಿದ್ದಲ್ಲಿ ಮಹಿಳಾ ಪ್ರಯಾಣಿಕರು ಇದರ ಪ್ರಯೋಜನ ಪಡೆಯಬಹುದಾಗಿದ್ದು, ಇದು 'ಅಂಬುಲನ್ಸ್ ಸೈರನ್' ರೀತಿಯಲ್ಲಿ ಕೆಲಸ ಮಾಡಲಿದೆ.

Most Read Articles

Kannada
English summary
Following the incident that happened in Delhi, where a young women was mistreated by a Uber Taxi driver, a company called She-Taxi could provide a solution regarding women safety.
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X