ಪ್ರತಿ ಕಾರು ಕನಿಷ್ಠ ಸುರಕ್ಷತೆಯನ್ನು ಹೊಂದಿರಬೇಕು: ಗಡ್ಕರಿ

Written By:

ಎಂಟ್ರಿ ಲೆವೆಲ್ ಸೇರಿದಂತೆ ದೇಶದೆಲ್ಲ ವಾಹನಗಳು ಕನಿಷ್ಠ ಸುರಕ್ಷಾ ಮಾನದಂಡಗಳನ್ನು ಹೊಂದಿರಬೇಕು ಎಂದು ಕೇಂದ್ರ ಸಾರಿಗೆ ಸಚಿವರಾಗಿರುವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಭವಿಷ್ಯದಲ್ಲಿ ಎಲ್ಲ ವಾಹನಗಳಿಗೂ ಕ್ರಾಶ್ ಟೆಸ್ಟ್ ಕಡ್ಡಾಯಗೊಳಿಸಲಾಗುವುದು ಎಂಬುದನ್ನು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಆಟೋಮೊಬೈಲ್ ಸುರಕ್ಷತೆಗೆ ಸ್ಟ್ಯಾಂಡರ್ಡ್ ಮಾನದಂಡಗಳನ್ನು ರೂಪಿಸಲಾಗುವುದು. ಇದು ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಬಿಎನ್‌ವಿಎಸ್‌ಎಪಿ) ಅಡಿಯಲ್ಲಿ ಗುರುತಿಸಿಕೊಳ್ಳಲಾಗುವುದು.

crash test

ಅಂದ ಹಾಗೆ 2017ನೇ ಇಸವಿಯಲ್ಲಿ ಭಾರತದಲ್ಲಿ ಕ್ರಾಶ್ ಟೆಸ್ಟ್ ಕಡ್ಡಾಯಗೊಳಿಸಲಾಗುವುದು. ಅಲ್ಲದೆ ವಿದೇಶದಲ್ಲಿರುವಂತೆ ಅಪಘಾತ ವೇಗ (ಗಂಟೆಗೆ 56 ಕೀ.ಮೀ.) ಹಾಗೂ ರೇಟಿಂಗ್ ವ್ಯವಸ್ಥೆಯನ್ನು ಆಳವಡಿಸಲಾಗುವುದು.

ಇನ್ನೊಂದೆಡೆ ಕಾರು ತಯಾರಕರ ಪ್ರಕಾರ ಈ ನಿಯಮ ಜಾರಿಗೆ ಬರುವುದರೊಂದಿಗೆ ಕಾರು ಬೆಲೆಯಲ್ಲಿ ಶೇ. 30ರಷ್ಟು ಹೆಚ್ಚಳವುಂಟಾಗಲಿದೆ. ಅಲ್ಲದೆ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ (ಇಬಿಡಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ) ಮುಂತಾದ ಸುರಕ್ಷಾ ವೈಶಿಷ್ಟ್ಯಗಳನ್ನು ಆಳವಡಿಸಲಾಗುವುದು.

English summary
All vehicles, including basic models should be fitted with at least minimal safety features says Nitin Gadkari, the Road Transport Minister.
Story first published: Friday, January 2, 2015, 12:35 [IST]
Please Wait while comments are loading...

Latest Photos