ಮುಂದಿನ ತಲೆಮಾರಿನ ಆಡಿ ಟಿಟಿ ಕಾರು ಭರ್ಜರಿ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ, ಭಾರತದಲ್ಲಿ ಮುಂದಿನ ತಲೆಮಾರಿನ ಅತಿ ದುಬಾರಿ ಟಿಟಿ ಕೂಪೆ ಕಾರನ್ನು ಬಿಡುಗಡೆ ಮಾಡಿದೆ. ಈ ಹಿಂದೆ 2014 ಜಿನೆವಾ ಮೋಟಾರು ಶೋದಲ್ಲೂ ಆಡಿ ಟಿಟಿ ಭರ್ಜರಿ ಪ್ರದರ್ಶ ಕಂಡಿತ್ತು.

ಆಗಲೇ ಯುರೋಪ್ ಹಾಗೂ ಅಮೆರಿಕ ಮಾರುಕಟ್ಟೆಯನ್ನು ತಲುಪಿರುವ ಮೂರನೇ ತಲೆಮಾರಿನ ಆಡಿ ಟಿಟಿ ಕಾರೀಗ ಭಾರತದತ್ತ ಲಗ್ಗೆಯಿಟ್ಟಿದೆ. ಇದು ಮಾತೃಸಂಸ್ಥೆ ಫೋಕ್ಸ್ ವ್ಯಾಗನ್ ನ ಎಂಕ್ಯೂಬಿ ತಳಹದಿಯಲ್ಲಿ ಅಭಿವೃದ್ದಿಗೊಂಡಿದ್ದು, ಹಿಂದಿನ ಮಾದರಿಗಿಂತಲೂ 50 ಕೆ.ಜಿ ಗಳಷ್ಟು ಕಡಿಮೆ ಭಾರವನ್ನು ಹೊಂದಿದೆ.

ಮುಂದಿನ ತಲೆಮಾರಿನ ಆಡಿ ಟಿಟಿ ಕಾರು ಭರ್ಜರಿ ಬಿಡುಗಡೆ

ಭಾರ ಕಡಿಮೆ ಮಾಡುವ ನಿಟ್ಟಿನಲ್ಲಿ ಆಡಿ ಸ್ಪೇಸ್ ಫ್ರೇಮ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ. ಇದು ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ನ ಎಸ್ ಎಲ್ ಕೆ, ಬಿಎಂಡಬ್ಲ್ಯು ಝಡ್4 ಮತ್ತು ಪೋರ್ಷೆ ಬಾಕ್ಸ್ಟರ್ ಮಾದರಿಗಳಿಗೆ ಪ್ರತಿಸ್ಪರ್ದಿಯಾಗಿರಲಿದೆ.

ಮುಂದಿನ ತಲೆಮಾರಿನ ಆಡಿ ಟಿಟಿ ಕಾರು ಭರ್ಜರಿ ಬಿಡುಗಡೆ

ಹೊರಮೈ ಬಗ್ಗೆ ಚರ್ಚಿಸುವುದಾದ್ದಲ್ಲಿ ಟಿಟಿ ಕ್ಲಾಸಿಕ್ ವಿನ್ಯಾಸ ಕಾಯ್ದುಕೊಳ್ಳುವದರ ಜೊತೆಗೆ ಹೊಸ ತಂತ್ರಗಾರಿಕೆಗೆ ಮೊರೆ ಹೋಗಲಾಗಿದೆ. ಇದರಲ್ಲಿ ಮ್ಯಾಟ್ರಿಕ್ಸ್ ಎಲ್ ಇಡಿ ಲೈಟಿಂಗ್ ಸಿಸ್ಟಂ ಮುಂತಾದ ವ್ಯವಸ್ಥೆಗಳಿರಲಿದೆ. ಇನ್ನು ಒಳಭಾಗದಲ್ಲಿ 12.3 ಇಂಚುಗಳ ಡಿಜಿಟಲ್ ನಿವಿಡಾ ಟೆಗ್ರಾ 30 ಜಿಪಿಯು ನಿಯಂತ್ರಿತ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕಂಡುಬರಲಿದೆ. ಅಂತೆಯೇ ಒಲುಪ್ಸೆನ್ 12 ಸ್ಪೀಡ್ ಹಾಗೂ ಬಹುಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಇದರಲ್ಲಿರಲಿದೆ.

ಮುಂದಿನ ತಲೆಮಾರಿನ ಆಡಿ ಟಿಟಿ ಕಾರು ಭರ್ಜರಿ ಬಿಡುಗಡೆ

ಇನ್ನು 2.0 ಲೀಟರ್ ಟಿಎಫ್ ಎಸ್ ಐ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ಹೊಸ ಆಡಿ ಟಿಟಿ 230 ಅಶ್ವಶಕ್ತಿ (370 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಡ್ಯುಯಲ್ ಕ್ಲಚ್ ಡಿಎಸ್ ಜಿ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಮುಂದಿನ ತಲೆಮಾರಿನ ಆಡಿ ಟಿಟಿ ಕಾರು ಭರ್ಜರಿ ಬಿಡುಗಡೆ

ಪ್ರಸ್ತುತ ಕಾರು ಕೇವಲ 5.6 ಸೆಕೆಂಡುಗಳಲ್ಲೇ ಗಂಟೆಗೆ 243 ಕೀ.ಮೀ. ವೇಗವರ್ಧನೆ ಹಾಗೂ ಗಂಟೆಗೆ ಗರಿಷ್ಠ 243 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಬೆಲೆ ಮಾಹಿತಿ

ಬೆಲೆ ಮಾಹಿತಿ

ನೂತನ ಆಡಿ ಟಿಟಿ ಕೂಪೆ ಕಾರು 60.35 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ಬೆಲೆ) ದುಬಾರಿಯೆನಿಸಲಿದೆ. ಅಂದರೆ ಹಿಂದಿನ ಮಾದರಿಗಿಂತಲೂ 5 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.

ಮುಂದಿನ ತಲೆಮಾರಿನ ಆಡಿ ಟಿಟಿ ಕಾರು ಭರ್ಜರಿ ಬಿಡುಗಡೆ

ಆಡಿ ಟಿಟಿ ಆವೃತ್ತಿಯ ಮೂಲಕ ಹಿಂದಿನಗಿಂತಲೂ ಹೆಚ್ಚು ಸ್ಥಳಾವಕಾಶ, ಆಕ್ರಮಣಕಾರಿ ನೋಟ, ತಂತ್ರಗಾರಿಕೆ ಎಲ್ಲ ವಿಚಾರದಲ್ಲೂ ಸಂಸ್ಥೆಯು ಒಂದು ಹೆಜ್ಜೆ ಮುಂದಿಟ್ಟಿದೆ.

ಮುಂದಿನ ತಲೆಮಾರಿನ ಆಡಿ ಟಿಟಿ ಕಾರು ಭರ್ಜರಿ ಬಿಡುಗಡೆ

ವಿದೇಶಗಳಲ್ಲಿ ಇನ್ನು ಹೆಚ್ಚಿನ ಶಕ್ತಿಶಾಲಿ ಆಡಿ ಟಿಟಿ ಎಸ್ ವರ್ಷನ್ ಮಾರಾಟದಲ್ಲಿದೆ. ಇದು ಬರೋಬ್ಬರಿ 360 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆದರೆ ಇದು ಸದ್ಯಕ್ಕೆ ಭಾರತವನ್ನು ಪ್ರವೇಶಿಸುತ್ತಿಲ್ಲ.

ವಿಶೇಷತೆಗಳು

ವಿಶೇಷತೆಗಳು

18 ಇಂಚುಗಳ 5 ಟ್ವಿನ್ ಸ್ಪೋಕ್ ಅಲಾಯ್ ವೀಲ್ಸ್,

ಎಲ್ ಇಡಿ ಹೆಡ್ ಲ್ಯಾಂಪ್,

ಆಡಿ ವರ್ಚುವಲ್ ಕಾಕ್ ಪಿಟ್,

ಎಂಎಂಐ ಟಚ್,

ಕ್ರೂಸ್ ಕಂಟ್ರೋಲ್ ಜೊತೆ ಸ್ಪೀಡ್ ಲಿಮಿಟರ್ ಫಂಕ್ಷನ್,

 ವಿಶೇಷತೆಗಳು

ವಿಶೇಷತೆಗಳು

ಆಡಿ ಡ್ರೈವ್ ಸೆಲೆಕ್ಟ್,

ಆಡಿ ಹೋಲ್ಡ್ ಅಸಿಸ್ಟ್,

ಡೈನಾಮಿಕ್ ಸ್ಟೀರಿಂಗ್,

ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಜೊತೆ ಗೇರ್ ಶಿಫ್ಟ್ ಪ್ಯಾಡಲ್,

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಫ್ರಂಟ್ ಸ್ಪೋರ್ಟ್ಸ್ ಸೀಟು,

ವಿಶೇಷತೆಗಳು

ವಿಶೇಷತೆಗಳು

ಇಂಟಿರಿಯರ್ ಮಿರರ್, ಆ್ಯಂಟಿ ಗ್ಲೇರ್ ಫಂಕ್ಷನ್,

ಮಿಲನೊ ಲೆಥರ್ ಹೋದಿಕೆ,

ಅಲ್ಯೂಮಿನಿಯಂ ಇನ್ ಲೇಯ್ಸ್,

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಡೆಯ ಮಿರರ್,

ವಿಶೇಷತೆಗಳು

ವಿಶೇಷತೆಗಳು

ಡಿಲಕ್ಸ್ ಎಸಿ ಜೊತೆ ಟರ್ಬೈನ್ ಆಕಾರದ ಎಸಿ ವೆಂಟ್ಸ್,

ಕಂಟ್ರೋಲ್ ನಾಬ್ ನಲ್ಲಿ ತಾಪಮಾನ ಸೂಚಕ,

ಆಡಿ ಸೌಂಡ್ ಸಿಸ್ಟಂ ಜೊತೆ ಬ್ಲೂಟೂತ್ ಕನೆಕ್ಟಿವಿಟಿ, 2 ಎಸ್ ಡಿ ಕಾರ್ಡ್ ರೀಡರ್

Most Read Articles

Kannada
English summary
Audi India has just launched its all new sportscar the TT Coupe. It is the third generation sports Coupe that has been introduced for Indian market.
Story first published: Thursday, April 23, 2015, 14:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X