ಇದೇ ಹೊಸ ಪರಂಪರೆ; ದಟ್ಸನ್ ಗೊ ಪ್ಲಸ್ ಕಸರತ್ತು

Written By:

ಈಗಷ್ಟೇ ಭಾರತೀಯ ವಾಹನ ಮಾರುಕಟ್ಟೆಗೆ ಹೊಸತಾದ ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ ಕಾರನ್ನು ದಟ್ಸನ್ ಬಿಡುಗಡೆಗೊಳಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಟಿವಿ ವಾಣಿಜ್ಯ ಜಾಹೀರಾತುವೊಂದನ್ನು ಸಂಸ್ಥೆಯು ಬಿಡುಗಡೆ ಮಾಡಿದ್ದು, ಹೆಚ್ಚಿನ ಕುತೂಹಲ ಸೃಷ್ಟಿಮಾಡಿದೆ. [ಕೆಳಗಡೆ ವೀಡಿಯೋ ವೀಕ್ಷಿಸಿ]

ಹಳೆಯ ಸಂಪ್ರದಾಯಕ್ಕೆ ಹೋಲಿಸಿದಾಗ ಹೊಸ ಪರಂಪರೆಯ ದಟ್ಸನ್ ಗೊ ಪ್ಲಸ್ ಎಲ್ಲ ಹಂತದಲ್ಲೂ ಅತ್ಯುತ್ತಮ ಕಾರು ಎಂಬುದನ್ನು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ ತನ್ನ ಪ್ರತಿಸ್ಪರ್ಧಿಗಳಿಗೆ ತಕ್ಕ ಉತ್ತರ ನೀಡಲಾಗುತ್ತಿದೆ.

Datsun Go Plus

ಈ ಹಿಂದೆ ಬಿಡುಗಡೆಯಾಗಿದ್ದ ದಟ್ಸನ್ ಗೊ ಹ್ಯಾಚ್ ಬ್ಯಾಕ್ ಕಾರಿನ 'ಯಹೀ ಹೇ ನಯಿ ಪರಂಪರಾ' ಜಾಹೀರಾತು ಸಹ ಹೆಚ್ಚು ಮನ್ನಣೆಗೆ ಪಾತ್ರವಾಗಿತ್ತು. ಇದರ ಮುಂದುವರಿದ ಭಾಗವೆಂಬಂತೆ ದಟ್ಸನ್ ಗೊ ಪ್ಲಸ್ ಜಾಹೀರಾತನ್ನು ತಯಾರಿಸಲಾಗಿದೆ.

ಹೊಸ ದಟ್ಸನ್ ಗೊ ಪ್ಲಸ್‌ ಕಾರಿನಲ್ಲಿರುವ 1.2 ಲೀಟರ್ ಎಂಜಿನ್ 67 ಅಶ್ವಶಕ್ತಿ ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ವೀಡಿಯೋ ವೀಕ್ಷಿಸಿ

<iframe width="600" height="450" src="//www.youtube.com/embed/Xh0WFUh7rz8" frameborder="0" allowfullscreen></iframe>
English summary
India's 1st Compact Family Wagon Datsun GO+ TVC
Story first published: Saturday, January 17, 2015, 16:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark