ಬಿಡುಗಡೆ ಮುನ್ನ ದಟ್ಸನ್ ಗೊ ಪ್ಲಸ್ ಬುಕ್ಕಿಂಗ್ ಆರಂಭ

Written By:

ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಭಾಗ್ಯ ಕಾಣಲಿರುವ ದಟ್ಸನ್ ಗೊ ಪ್ಲಸ್ ಲಾಂಚ್‌ಗೂ ಮುಂಚಿತವಾಗಿ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ. ಕಳೆದ ವರ್ಷದ ಗೊ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಿದ್ದ ಸಂಸ್ಥೆಯು ಈಗ ಗೊ ಪ್ಲಸ್ ಎಂಪಿವಿ ಮಾದರಿಯೊಂದಿಗೆ ಮಾರುಕಟ್ಟೆಯಲ್ಲಿ ಮೋಡಿ ಮಾಡುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಈಗ ದಟ್ಸನ್ ಗೊ ಎಂಪಿವಿ ಕಾರನ್ನು ಕೊಳ್ಳಲು ಇಚ್ಛಿಸುವವರು ಜನವರಿ 3ರಿಂದ 14ರ ವರೆಗೆ ಮುಂಗಡವಾಗಿ 11,000 ರು.ಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಸಿಕೊಳ್ಳಬಹುದು ಎಂದು ದಟ್ಸನ್ ಮಾತೃಸಂಸ್ಥೆ ನಿಸ್ಸಾನ್ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದ್ಯಂತ ಸ್ಥಿತಗೊಂಡಿರುವ ನಿಸ್ಸಾನ್ ವಿತರಕ ಜಾಲದಲ್ಲಿ ಬುಕ್ಕಿಂಗ್ ಸ್ವೀಕರಿಸಲಾಗುತ್ತದೆ.

Datsun Go Plus

ನಿಮ್ಮ ಮಾಹಿತಿಗಾಗಿ, ದಟ್ಸನ್ ಗೊ ಪ್ಲಸ್ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಮೊತ್ತ ಮೊದಲ ಸಬ್ ಫೋರ್ ಮೀಟರ್ ಕಾಂಪಾಕ್ಟ್ ಎಂಪಿವಿ ಕಾರಾಗಿದೆ. ಇದು ಅತ್ಯಂತ ಆಕರ್ಷಕ ನೋಟದ ಜೊತೆ ಜೊತೆಗೆ ಪವರ್, ಹೆಚ್ಚು ಸ್ಥಳಾವಕಾಶ, ಗೋಚರತೆ ಹಾಗೂ ಪ್ರಾಯೋಗಿಕತೆಯನ್ನು ಪಡೆದುಕೊಂಡಿದೆ. ಈ ಏಳು ಸೀಟಿನ ಕಾರಿನ ಮೂರನೇ ಸಾಲಿನಲ್ಲಿ ಪ್ರಯಾಣಿಕರಿಗೆ ಅಥವಾ ಹೆಚ್ಚುವರಿ ಲಗ್ಗೇಜ್ ಸಾಗಿಸಬಹುದಾಗಿದೆ.

2015 ಜನವರಿ 15ರಂದು ಹೊಚ್ಚ ಹೊಸ ದಟ್ಸನ್ ಗೊ ಪ್ಲಸ್ ಮಾರುಕಟ್ಟೆ ಪ್ರವೇಶಿಸಲಿದೆ. ಈ ಸಂಬಂಧ ಎಕ್ಸ್‌ಕ್ಲೂಸಿವ್ ವಿಮರ್ಶೆಯನ್ನು ನಾವು ಈಗಗಾಲೇ ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುತ್ತೇವೆ [ದಟ್ಸನ್‌ಗೆ ವರದಾನವಾದಿತೇ ಗೊ ಪ್ಲಸ್ ಎಂಪಿವಿ?]. ದೇಶದ ಮಾರುಕಟ್ಟೆಯಲ್ಲಿ ಇತರ ಎಂಪಿವಿಗಳಿಗೆ ಹೋಲಿಸಿದರೆ ದಟ್ಸನ್ ಗೊ ಪ್ಲಸ್ ಅಗ್ಗದ ಬಹು ಬಳಕೆಯ ವಾಹನ ಎನಿಸಿಕೊಳ್ಳಲಿದೆ

English summary
Datsun today announced the start of pre-booking of its Datsun GO+ Compact Family Wagon in India.
Story first published: Friday, January 2, 2015, 16:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark