2016 ಆಟೋ ಎಕ್ಸ್‌ಪೋಗೆ ಜಾಗ್ವಾರ್ ಐಷಾರಾಮಿ ಗಿಫ್ಟ್ ಏನು ಗೊತ್ತೇ?

Written By:

2016 ಆಟೋ ಎಕ್ಸ್ ಪೋಗೆ ಇನ್ನು ಕೇವಲ ಒಂದು ವರ್ಷ ಮಾತ್ರ ಬಾಕಿ ಉಳಿದಿದೆ. ಇದರಂತೆ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್ ಅತಿ ವಿಶೇಷವಾದ ಕೊಡುಗೆಯಲ್ಲಿ ಸಿದ್ಧತೆಯಲ್ಲಿದೆ.

ತಾಜಾ ಮಾಹಿತಿಗಳ ಪ್ರಕಾರ ದೆಹಲಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್‌ಪೋದಲ್ಲಿ ಜಾಗ್ವಾರ್ ತನ್ನ ಅತಿ ದುಬಾರಿ ಎಕ್ಸ್‌ಇ ಸೆಡಾನ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಈಗಾಗಲೇ ಅನಾವರಣಗೊಂಡಿರುವ ಜಾಗ್ವಾರ್ ಎಕ್ಸ್‌ಇ ಪ್ರೀಮಿಯಂ ಕಾರು ಹಲವು ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಅವುಗಳೆಂದರೆ

2.0 ಲೀಟರ್ ಪೆಟ್ರೋಲ್ ಎಂಜಿನ್ - ವಿಭಿನ್ನ ಟ್ಯೂನಿಂಗ್ ಆಯ್ಕೆಗಳಲ್ಲಿ

2.0 ಲೀಟರ್ ಡೀಸೆಲ್ ಎಂಜಿನ್ - ವಿಭಿನ್ನ ಟ್ಯೂನಿಂಗ್ ಆಯ್ಕೆಗಳಲ್ಲಿ

3.0 ಲೀಟರ್ ಸೂಪರ್ ಚಾಲ್ಜ್ಡ್ ವಿ6 ಪೆಟ್ರೋಲ್ ಎಂಜಿನ್

ಪೆಟ್ರೋಲ್ ಮಾದರಿಗಳು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸ್ಟ್ಯಾಂಡರ್ಡ್ ಆಗಿ ಪಡೆಯಲಿದೆ.

6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಐಚ್ಛಿಕವಾಗಿ ಪಡೆಯಲಿದೆ (ಇದು ಭಾರತದಲ್ಲಿ ಲಭ್ಯವಿರುವುದಿಲ್ಲ).

ಸ್ಪರ್ಧಿಗಳು

ಆಡಿ ಎ4, ಬಿಎಂಡಬ್ಲ್ಯು 3 ಸಿರೀಸ್ ಮತ್ತು ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಹೊಸ ಜಾಗ್ವಾರ್ ಮಾದರಿಯು ಸಿರಿವಂತರವನ್ನು ಆಕರ್ಷಿಸಲಿದೆ. ಅಲ್ಲದೆ ಸ್ಥಳೀಯವಾಗಿ ಜೋಡಣೆ ಮಾಡುವ ಮೂಲಕ ಸ್ಪರ್ಧಾತ್ಮಕ ಬೆಲೆಯನ್ನು ಕಾಪಾಡಿಕೊಳ್ಳುವ ಇರಾದೆಯನ್ನು ಸಂಸ್ಥೆ ಹೊಂದಿದೆ.

ಕಾರು ಹೋಲಿಸಿ

ಜಾಗ್ವಾರ್ ಎಕ್ಸ್‌ಇ
ಜಾಗ್ವಾರ್ ಎಕ್ಸ್‌ಇ ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
Jaguar has recently unveiled its XE premium luxury sedan. The British automobile manufacturer was not supposed to launch this vehicle in India prior to 2016. 
Story first published: Tuesday, January 20, 2015, 20:52 [IST]
Please Wait while comments are loading...

Latest Photos