ರೆನೊ ಕಡ್ಜಾರ್ ಎಸ್‌ಯುವಿ ಭಾರತಕ್ಕೆ ಬರುತ್ತಾ?

Written By:

ಪ್ರಸಕ್ತ ಸಾಲಿನ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ರೆನೊ ಕಡ್ಜಾರ್ ಭಾರತದತ್ತವೂ ಮುಖ ಮಾಡುತ್ತಿದೆ. ಬಲ್ಲ ಮೂಲಗಳ ಪ್ರಕಾರ ದೇಶದಲ್ಲಿನ ತನ್ನ ಶ್ರೇಣಿಯ ಮಾದರಿಗಳನ್ನು ವಿಸ್ತರಿಸುವ ಯೋಜನೆಯಲ್ಲಿರುವ ರೆನೊ, ಬಹುನಿರೀಕ್ಷಿತ ಕಡ್ಜಾರ್ ಮಾದರಿಯನ್ನು ಮುಂದಿನ ವರ್ಷ ಅಥವಾ 2017ರಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ.

ಡಸ್ಟರ್ ಗಳಂತಹ ಯಶಸ್ವಿ ಕ್ರೀಡಾ ಬಳಕೆಯ ವಾಹನಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿರುವ ರೆನೊ, ಇತ್ತೀಚೆಗಷ್ಟೇ ಅತಿ ನೂತನ ಕ್ವಿಡ್ ಸಣ್ಣ ಕಾರನ್ನು ಬಿಡುಗಡೆ ಮಾಡಿತ್ತು. ಅಲ್ಲದೆ ಮುಂದಿನ ವರ್ಷಗಳಲ್ಲಿ ನೂತನ ಮಾದರಿಗಳೊಂದಿಗೆ ತನ್ನ ಮಾರಾಟ ಜಾಲವನ್ನು ವಿಸ್ತರಿಸುವ ಯೋಜನೆಯಲ್ಲಿದೆ.

To Follow DriveSpark On Facebook, Click The Like Button
ರೆನೊ ಕಡ್ಜಾರ್ ಎಸ್‌ಯುವಿ ಭಾರತಕ್ಕೆ ಬರುತ್ತಾ?

ಕಡ್ಜಾರ್ ಒಂದು ಕ್ರೀಡಾ ಬಳಕೆಯ ವಾಹನವಾಗಿರಲಿದ್ದು, ಭಾರತದಲ್ಲಿ ಅತಿ ಹೆಚ್ಚಿನ ಯಶಸ್ಸು ಸಾಧಿಸುವ ನಿರೀಕ್ಷೆಯಿದೆ. ಆದರೆ ಇದು ಪ್ರೀಮಿಯಂ ಮಾದರಿಗಳಲ್ಲಿ ಗುರುತಿಸಿಕೊಳ್ಳಲಿದೆ.

ರೆನೊ ಕಡ್ಜಾರ್ ಎಸ್‌ಯುವಿ ಭಾರತಕ್ಕೆ ಬರುತ್ತಾ?

ಈಗಾಗಲೇ ಯುರೋಪ್ ಮಾರುಕಟ್ಟೆಯನ್ನು ಪ್ರವೇಶಿಸಿರುವ ಕಡ್ಜಾರ್ ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಮೈಗೂಡಿಸಿ ಬಂದಿದೆ.

ರೆನೊ ಕಡ್ಜಾರ್ ಎಸ್‌ಯುವಿ ಭಾರತಕ್ಕೆ ಬರುತ್ತಾ?

ರೆನೊ ಕಡ್ಜಾರ್ ಸಹ ಸಿಎಂಎಫ್ ತಳಹದಿಯಲ್ಲಿ ನಿರ್ಮಾಣವಾಗಲಿದ್ದು, ಪೆಟ್ರೋಲ್ ಜೊತೆಗೆ ಡೀಸೆಲ್ ಮಾದರಿಗಳಲ್ಲಿ ಲಭ್ಯವಾಗಲಿದೆ.

ರೆನೊ ಕಡ್ಜಾರ್ ಎಸ್‌ಯುವಿ ಭಾರತಕ್ಕೆ ಬರುತ್ತಾ?

ಇದರ 1.2 ಲೀಟರ್ ಟಿಸಿಇ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಡೈರಕ್ಟ್ ಇಂಜೆಕ್ಷನ್ ಎಂಜಿನ್ 130 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.5 ಹಾಗೂ 1.6 ಲೀಟರ್ ಡಿಸಿಐ ಡೀಸೆಲ್ ಎಂಜಿನ್ ಗಳು ಅನುಕ್ರಮವಾಗಿ 110 ಹಾಗೂ 130 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಆರು ಸ್ಪೀಡ್ ಮ್ಯಾನುವಲ್ ಜೊತೆಗೆ ಎಫಿಷಿಯಂಟ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಸೌಲಭ್ಯವೂ ಇರಲಿದೆ. ಇನ್ನುಳಿದಂತೆ ಆಲ್ ವೀಲ್ ಡ್ರೈವ್ ವ್ಯವಸ್ಥೆಯು ಲಭ್ಯವಾಗಲಿದ್ದು, ವಾಹನ ಪ್ರೇಮಿಗಳಿಗೆ ಅದ್ಭುತ ಚಾಲನಾ ಅನುಭವ ನೀಡಲಿದೆ.

ರೆನೊ ಕಡ್ಜಾರ್ ಎಸ್‌ಯುವಿ ಭಾರತಕ್ಕೆ ಬರುತ್ತಾ?

ಅಂತಿಮವಾಗಿ ಏಳು ಇಂಚುಗಳ ಆರ್ ಲಿಂಕ್ 2 ಇನ್ಪೋಟೈನ್ಮೆಂಟ್ ಸಿಸ್ಟಂ, ವಾಯ್ಸ್ ಆಕ್ಟಿವೇಟಡ್ ನೇವಿಗೇಷನ್, ಹೀಟಡ್ ಸೀಟು, ಕ್ರೂಸ್ ಕಂಟ್ರೋಲ್, ಎಬಿಎಸ್, ಆರು ಏರ್ ಬ್ಯಾಗ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್, ಇಎಸ್‌ಸಿ ಜೊತೆ ಟ್ರಾಕ್ಷನ್ ಮತ್ತು ಅಂಡರ್ ಸ್ಟೀರ್ ಕಂಟ್ರೋಲ್, ಎಬಿಎಸ್, ಇಬಿಎಸ್ ಪ್ರಮುಖ ಆಕರ್ಷಣೆಯಾಗಲಿದೆ.

Read more on ರೆನೊ renault
English summary
Renault Consider Kadjar SUV for India
Story first published: Saturday, October 17, 2015, 16:19 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark