ಟೊಯಾಟಾ ನಾವೀನ್ಯತೆಯನ್ನುಂಟು ಮಾಡುವ ಸಂಸ್ಥೆಯೇ?

By Nagaraja

ಇಡೀ ವಾಹನ ಜಗತ್ತಿನಲ್ಲಿ ಅತಿ ಹೆಚ್ಚು ನಾವೀನ್ಯತೆಯನ್ನುಂಟು ಮಾಡುವ ಸಂಸ್ಥೆ ಯಾವುದು? ಜಗತ್ತಿನ ಪ್ರಮುಖ ವಾಹನ ಸಂಸ್ಥೆಗಳ ನಡುವೆ ಹೊಸ ಹೊಸ ಸಂಶೋಧನೆಗಾಗಿ ನಿಕಟ ಪೈಪೋಟಿಗಳು ನಡೆಯುತ್ತಿರುವಾಗ ಸಾಮಾನ್ಯ ಕಾರು ಪ್ರೇಮಿಯೊಬ್ಬರಿಗೆ ಈ ಬಗ್ಗೆ ಬೇರ್ಪಡಿಸಿ ಹೇಳುವುದು ಕಷ್ಟಕರವಾಗಬಹುದು.

ಆದರೆ ಫಾಸ್ಟ್ ಕಂಪನಿ ಮ್ಯಾಗಜೀನ್ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದೆ. ಅಲ್ಲದೆ ಜಗತ್ತಿನಲ್ಲಿ ಅತಿ ಹೆಚ್ಚು ನಾವೀನ್ಯತೆಗೆ ಕಾರಣವಾಗಿರುವ ವಾಹನ ಸಂಸ್ಥೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

Toyota mirai

ಅದುವೇ ಜಪಾನ್ ಮೂಲದ ಟೊಯೊಟಾ ಸಂಸ್ಥೆ. ಟೊಯೊಟಾದ ಹೊಸತನದೊಂದಿಗೆ ಕೂಡಿರುವ ಮಿರಾಯ್, ಜಗತ್ತಿನ 50 ನಾವೀನ್ಯತೆಯ ಸಂಸ್ಥೆಗಳ ಪೈಕಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳಲು ನೆರವಾಗಿದೆ.

ಪರಿಸರ ಸ್ನೇಹಿ ವಾಹನಗಳನ್ನು ಉತ್ಪಾದಿಸುವುದರಲ್ಲಿ ಟೊಯೊಟಾ ಒಂದು ಹೆಜ್ಜೆ ಮುಂದಿದೆ ಎಂಬುದನ್ನು ಫಾಸ್ಟ್ ನಿಯತಕಾಲಿಕ ಉಲ್ಲೇಖಿಸಿದೆ. ಅಂದ ಹಾಗೆ ಟೊಯೊಟಾ ಮಿರಾಯ್ ಪ್ರಪಂಚದ ಮೊದಲ ಹೈಡ್ರೋಜನ್ ಫ್ಲೂಯಲ್ ಸೆಲ್ ನಿಯಂತ್ರಿತ ವಾಹನವಾಗಿದೆ.

ಈಗಾಗಲೇ ಜಪಾನ್ ಮಾರುಕಟ್ಟೆಯನ್ನು ತಲುಪಿರುವ ಮಿರಾಯ್ ಪ್ರಸಕ್ತ ಸಾಲಿನಲ್ಲೇ ಅಮೆರಿಕವನ್ನು ತಲುಪಲಿದೆ. ಈ ನಾಲ್ಕು ಬಾಗಿಲುಗಳ ಮಧ್ಯಮ ಗಾತ್ರದ ಸೆಡಾನ್ ಕಾರು ಅತ್ಯುತ್ತಮ ನಿರ್ವಹಣೆಯನ್ನು ಕಾಯ್ದುಕೊಂಡಿದೆ.

ಕೇವಲ ಐದು ನಿಮಿಷಗಳಲ್ಲೇ ಇಂಧನ ಮರು ತುಂಬುವಿಕೆ ಮಾಡಬಹುದಾದ ಟೊಯೊಟಾ ಮಿರಾಯ್ ಗರಿಷ್ಠ 300 ಕೀ.ಮೀ. ವ್ಯಾಪಿಯ ವರೆಗೂ ಚಲಿಸಬಹುದಾಗಿದೆ.

Most Read Articles

Kannada
English summary
Toyota Mirai, the hydrogen fuel celled vehicle from Toyota has helped the company be recognized as one of the 50 Most Innovative Companies of 2015 by Fast Company magazine.
Story first published: Tuesday, February 10, 2015, 12:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X