ಫೋಕ್ಸ್‌ವ್ಯಾಗನ್ ಪೊಲೊ ಎಕ್ಸ್‌ಕ್ಯೂಸಿಟ್ ಸೀಮಿತ ಆವೃತ್ತಿ ಮಾರುಕಟ್ಟೆಗೆ

Written By:

ಈಗಷ್ಟೇ ಫೋಕ್ಸ್ ವ್ಯಾಗನ್ ಪೊಲೊ ಮಾರಾಟವನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಿರುವುದು ಭಾರಿ ಗೊಂದಲಕ್ಕೀಡು ಮಾಡಿತ್ತು. ಈ ನಡುವೆ ಜರ್ಮನಿಯ ಐಷಾರಾಮಿ ಸಂಸ್ಥೆಯು ಫೋಕ್ಸ್‌ವ್ಯಾಗನ್ ಪೊಲೊ ಎಕ್ಸ್‌ಕ್ಯೂಸಿಟ್ ಸೀಮಿತ ಆವೃತ್ತಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ.

ಫೋಕ್ಸ್‌ವ್ಯಾಗನ್ ಪೊಲೊ ಎಕ್ಸ್‌ಕ್ಯೂಸಿಟ್ ಸೀಮಿತ ಆವೃತ್ತಿ 2015 ಅಕ್ಟೋಬರ್ 09ರಿಂದಲೇ ಮಾರಾಟಕ್ಕೆ ಲಭ್ಯವಾಗಿದೆ. ಈ ಮೂಲಕ ತನ್ನ ಪ್ರತಿಷ್ಠೆಯನ್ನು ಮರಳಿ ಪಡೆಯುವ ಯತ್ನದಲ್ಲಿದೆ.

To Follow DriveSpark On Facebook, Click The Like Button
ಫೋಕ್ಸ್‌ವ್ಯಾಗನ್ ಪೊಲೊ ಎಕ್ಸ್‌ಕ್ಯೂಸಿಟ್

ಅಮೆರಿಕದಲ್ಲಿ ಫೋಕ್ಸ್ ವ್ಯಾಗನ್ ಮಾಲಿನ್ಯ ಮೋಸ ಪ್ರಕರಣ ಹಚ್ಚ ಹಸಿರಾಗಿರುವಂತೆಯೇ ಈ ಹಬ್ಬದ ಆವೃತ್ತಿಯಲ್ಲಿ ಮಾರಾಟ ಉತ್ತೇಜನ ನೀಡಲುಫೋಕ್ಸ್ ವ್ಯಾಗನ್ ಶ್ರಮಿಸುತ್ತಿದೆ. ಇದರಂಗವಾಗಿ ಪೊಲೊ ಎಕ್ಸ್‌ಕ್ಯೂಸಿಟ್ ಸೀಮಿತ ಆವೃತ್ತಿ ಮಾರುಕಟ್ಟೆ ಪ್ರವೇಶ ಪಡೆದಿದೆ.

ಇದೇ ಸಂದರ್ಭದಲ್ಲಿ 10,000 ರು.ಗಳ ಎಕ್ಸ್ ಚೇಂಜ್ ಬೋನಸ ಸಹ ನೀಡಲಾಗುತ್ತಿದೆ. ಹಾಗೆಯೇ 10,000 ರು.ಗಳ ಲಾಯಲ್ಟಿ ಬೋನಸ್ ಪ್ರಯೋಜನವನ್ನು ಪಡೆಯಬಹುದಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲೂ ಲಭ್ಯವಿರುವ ಫೋಕ್ಸ್‌ವ್ಯಾಗನ್ ಪೊಲೊ ಎಕ್ಸ್‌ಕ್ಯೂಸಿಟ್ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳು ಅನುಕ್ರಮವಾಗಿ 6.57 ಲಕ್ಷ ರು. ಹಾಗೂ 7.92 ಲಕ್ಷ ರು.ಗಳಷ್ಟು (ದೆಹಲಿ ಎಕ್ಸ್ ಶೋ ರೂಂ) ದುಬಾರಿಯೆನಿಸಲಿದೆ.

ಸಾಮಾನ್ಯ ಮಾದರಿಯನ್ನು ಹೋಲಿಸಿದಾಗ ಫೋಕ್ಸ್‌ವ್ಯಾಗನ್ ಪೊಲೊ ಎಕ್ಸ್‌ಕ್ಯೂಸಿಟ್ ಸೀಮಿತ ಆವೃತ್ತಿಯಲ್ಲಿ ಗ್ರಾಂಡ್ ಲುಕ್ ಗಾಗಿ ಹೆಚ್ಚಿನ ಕ್ರೋಮ್ ಸ್ಪರ್ಶವನ್ನು ಕೊಡಲಾಗಿದೆ. ಹಾಗೆಯೇ ಹೊರಗಿನ ರಿಯರ್ ವ್ಯೂ ಮಿರರ್ ನಲ್ಲಿ ಕಾರ್ಬನ್ ಫೈಬರ್ ಫಿನಿಶ್ ಹಾಗೂ ಕಪ್ಪು ವರ್ಣದ ಮೇಲ್ಚಾವಣಿ ಇದರಲ್ಲಿರಲಿದೆ.

ಇನ್ನು ಕಾರಿನ ಭದ್ರತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎನ್‌ಸಿಎಪಿ ಢಿಕ್ಕಿ ಪರೀಕ್ಷೆಯಲ್ಲಿ ನಾಲ್ಕು ತಾರೆ ಸೇರಿದಂತೆ ಸ್ಟಾಂಡರ್ಡ್ ಏರ್ ಬ್ಯಾಗ್, ಎಬಿಎಸ್ ಮುಂತಾದ ಸೌಲಭ್ಯಗಳಿರಲಿದೆ.

English summary
Volkswagen Polo Exquisite Limited Edition Available From 9th October
Story first published: Saturday, October 10, 2015, 10:52 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark