ಭಾರತೀಯ ವಾಹನ ಪ್ರೇಮಿಗಳಿಗೆ ಹ್ಯುಂಡೈ ಮೋಸ ?

Written By:

ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರು ಇಂಡಿಯಾ ಲಿಟಿಮೆಡ್ ಸಂಸ್ಥೆಯಿಂದ ದೇಶದ ವಾಹನ ಪ್ರೇಮಿಗಳಿಗೆ ಭಾರಿ ನಿರಾಸೆಯ ಸುದ್ದಿಯೊಂದು ಕಾದಿದೆ. ಸಂಪೂರ್ಣ ವಿವರಗಳಿಗಾಗಿ ಲೇಖನದತ್ತ ಕಣ್ಣಾಯಿಸಿರಿ.

ಭಾರತೀಯ ವಾಹನ ಪ್ರೇಮಿಗಳಿಗೆ ಹ್ಯುಂಡೈ ಮೋಸ ?

ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿರುವ ಬಹುನಿರೀಕ್ಷಿತ ಐ30 ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ನಿಕಟ ಭವಿಷ್ಯದಲ್ಲೇ ಭಾರತವನ್ನು ಪ್ರವೇಶಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ಈ ಎಲ್ಲ ವರದಿಗಳನ್ನು ಹ್ಯುಂಡೈ ಅಲ್ಲಗಳೆದಿದೆ.

ಭಾರತೀಯ ವಾಹನ ಪ್ರೇಮಿಗಳಿಗೆ ಹ್ಯುಂಡೈ ಮೋಸ ?

ಹ್ಯುಂಡೈ ಭವಿಷ್ಯದ ಯೋಜನೆಯಲ್ಲಿ ಸಿ ಸೆಗ್ಮೆಂಟ್ ಐ30 ಹ್ಯಾಚ್ ಬ್ಯಾಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯಾವುದೇ ಯೋಜನೆಗಳಿಲ್ಲ. ಇದು ವಾಹನ ಪ್ರೇಮಿಗಳಲ್ಲಿ ನಿರಾಸೆಯನ್ನುಂಟು ಮಾಡಿದೆ.

ಭಾರತೀಯ ವಾಹನ ಪ್ರೇಮಿಗಳಿಗೆ ಹ್ಯುಂಡೈ ಮೋಸ ?

ಸದ್ಯ ಮಾರುಕಟ್ಟೆಯಲ್ಲಿರುವ ಎರಡನೇ ತಲೆಮಾರಿನ ಐ20 ಹಾಗೂ ಐ20 ಆಕ್ಟಿವ್ ಹ್ಯಾಚ್ ಬ್ಯಾಕ್ ಕಾರುಗಳು 10 ಲಕ್ಷ ರು.ಗಳಷ್ಟು ಬೆಲೆ ಪರಿಧಿಯಲ್ಲಿ ಮಾರಾಟವಾಗುತ್ತಿದೆ. ಹಾಗಿರುವಾಗ ಇದಕ್ಕಿಂತಲೂ ಹೆಚ್ಚು ದುಬಾರಿ ಹ್ಯಾಚ್ ಬ್ಯಾಕ್ ಕಾರನ್ನು ಮಾರುಕಟ್ಟೆಗಿಳಿಸುವುದು ಸೂಕ್ತವಲ್ಲ ಎಂಬುದು ಹ್ಯುಂಡೈ ನಿಲುವಾಗಿದೆ.

ಭಾರತೀಯ ವಾಹನ ಪ್ರೇಮಿಗಳಿಗೆ ಹ್ಯುಂಡೈ ಮೋಸ ?

ಭಾರತೀಯ ಗ್ರಾಹಕರು 10 ಲಕ್ಷಕ್ಕಿಂತಲೂ ಮೇಲ್ಪಟ್ಟ ಬೆಲೆ ಪರಿಧಿಯಲ್ಲಿ ಪ್ರೀಮಿಯಂ ಹ್ಯಾಚ್ ಬ್ಯಾಕ್ ಖರೀದಿಸಲು ಹಿಂದೇಟು ಹಾಕಲಿದ್ದಾರೆ. ಇದರ ಬದಲಾಗಿ ಹ್ಯುಂಡೈ ಕ್ರೆಟಾ ಹಾಗೂ ವೆರ್ನಾದಂತಹ ಹೆಚ್ಚು ಸ್ಥಳಾವಕಾಶಯುಕ್ತ ಕಾರುಗಳತ್ತ ಒಲವು ತೋರಲಿದ್ದಾರೆ.

ಭಾರತೀಯ ವಾಹನ ಪ್ರೇಮಿಗಳಿಗೆ ಹ್ಯುಂಡೈ ಮೋಸ ?

ಭಾರತದಲ್ಲಿ ಬೆಲೆ ಪರಿಧಿ ಅತಿ ಮುಖ್ಯ ಘಟಕವೆನಿಸಲಿದೆ. ಅಲ್ಲದೆ ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸಲು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಅಗತ್ಯವೆನಿಸುತ್ತದೆ.

ಭಾರತೀಯ ವಾಹನ ಪ್ರೇಮಿಗಳಿಗೆ ಹ್ಯುಂಡೈ ಮೋಸ ?

ಭಾರತದಲ್ಲೀಗ ಹ್ಯುಂಡೈ ಐ20 ಆಟೋಮ್ಯಾಟಿಕ್ ಕಾರು ಒಂಬತ್ತು ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಒಂದು ವೇಳೆ ಐ30 ಆಗಮಿಸಿದ್ದಲ್ಲಿ ಇದಕ್ಕಿಂತಲೂ ದುಬಾರಿಯೆನಿಸಲಿದೆ.

ಭಾರತೀಯ ವಾಹನ ಪ್ರೇಮಿಗಳಿಗೆ ಹ್ಯುಂಡೈ ಮೋಸ ?

ನಿಸ್ಸಂಶಯವಾಗಿಯೂ ಪ್ರೀಮಿಯಂ ವಾಹನಗಳನ್ನು ಬಿಡುಗಡೆಗೊಳಿಸುವ ಹ್ಯುಂಡೈ ಆಸಕ್ತಿ ತೋರುತ್ತಿದೆ. ಮುಂಬರುವ ಟಕ್ಸನ್ ಇದಕ್ಕೆ ಸ್ಪಷ್ಟ ಉತ್ತರವಾಗಿದೆ. ಆದರೆ ಐ30 ಮಾತ್ರ ಸದ್ಯಕ್ಕೆ ಆಗಮನವಾಗುವ ಯಾವುದೇ ಸಾಧ್ಯತೆಗಳಿಲ್ಲ.

ಭಾರತದಲ್ಲಿ ಹ್ಯುಂಡೈ ಮುಂಬರುವ ಯೋಜನೆಗಳು

ಭಾರತದಲ್ಲಿ ಹ್ಯುಂಡೈ ಮುಂಬರುವ ಯೋಜನೆಗಳು

2016 ಟಕ್ಸನ್,

2017 ಹ್ಯುಂಡೈ ವೆರ್ನಾ,

ಪರಿಷ್ಕೃತ ಗ್ರಾಂಡ್ ಐ10

ಪರಿಷ್ಕೃತ ಎಕ್ಸ್ ಸೆಂಟ್,

ನೂತನ ಕಾಂಪಾಕ್ಟ್ ಎಸ್ ಯುವಿ (ಮಾರುತಿ ವಿಟಾರಾ ಬ್ರಿಝಾಗೆ ಪ್ರತಿಸ್ಪರ್ಧಿ)

ಅತ್ಯಂತ ಶಕ್ತಿಶಾಲಿ ಜೆನಿಸಿಸ್ ಬ್ರಾಂಡ್ ಕಾರು.

 

English summary
Hyundai i30 – The Premium Hatchback Will Not Make It To India

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark