ಕೊನೆಗೂ ಐಕಾನಿಕ್ ಜೀಪ್ ಆಗಮನಕ್ಕೆ ಮುಹೂರ್ತ ಫಿಕ್ಸ್

Written By:

ಅಂತೂ ಇಂತೂ ಕೊನೆಗೂ ಇಟಲಿಯ ಐಕಾನಿಕ್ ಜೀಪ್ ಭಾರತ ಪ್ರವೇಶಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇಟಲಿಯ ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ಸ್ ಅಧೀನತೆಯಲ್ಲಿರುವ ಜೀಪ್ ಬ್ರಾಂಡ್ 2016 ಆಗಸ್ಟ್ 31 ಹಾಗೂ ಸೆಪ್ಟೆಂಬರ್ 01ರಂದು ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಕಳೆದ ಕೆಲವು ವರ್ಷಗಳಿಂದ ಜೀಪ್ ಭಾರತ ಪ್ರವೇಶಕ್ಕೆ ಮೀನಾಮೇಷ ಎದುರಾಗಿತ್ತು. ಈಗ ಎಲ್ಲ ತೊಡಕುಗಳನ್ನು ನಿವಾರಿಸಿಕೊಂಡಿರುವ ಸಂಸ್ಥೆಯು ಅಧಿಕೃತವಾಗಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಬಿಡುಗಡೆ ದಿನಾಂಕವನ್ನು ತಿಳಿಸಿದೆ.

ಕೊನೆಗೂ ಐಕಾನಿಕ್ ಜೀಪ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಮೊದಲ ಹಂತವಾಗಿ ಫಿಯೆಟ್ ಜೀಪ್ ಗ್ರಾಂಡ್ ಚೆರೋಕೀ ಮತ್ತು ವ್ರ್ಯಾಂಗ್ಲರ್ ಮಾದರಿಗಳು ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇವೆರಡು ಕಂಪ್ಲೀಟ್ ಬಿಲ್ಟ್ ಯುನಿಟ್ ಸಿದ್ಧಾಂತದ ಮೂಲಕ ಪ್ರವೇಶ ಪಡೆಯಲಿದೆ.

ಕೊನೆಗೂ ಐಕಾನಿಕ್ ಜೀಪ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಹಾಗಿದ್ದರೂ ಜೀಪ್ ಇಂಡಿಯಾ ಅಧಿಕೃತ ವೆಬ್ ಸೈಟ್ ನಲ್ಲಿ ಗ್ರಾಂಡ್ ಚೆರೋಕೀ ಮತ್ತು ವ್ರ್ಯಾಂಗ್ಲರ್ ಜೊತೆಗೆ ಗ್ರಾಂಡ್ ಚೆರೋಕೀ ಎಸ್ ಆರ್ ಟಿ ಮಾದರಿಗಳ ವಿವರಗಳನ್ನು ಕೊಡಲಾಗಿದೆ. ಈ ಎಲ್ಲದರ ಬಗ್ಗೆ ಬಿಡುಗಡೆ ವೇಳೆಯಲ್ಲಷ್ಟೇ ಮಾಹಿತಿ ದೊರಕಲಿದೆ.

ಕೊನೆಗೂ ಐಕಾನಿಕ್ ಜೀಪ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಐಷಾರಾಮಿ ಕ್ರೀಡಾ ಬಳಕೆಯ ವಾಹನಗಳಾಗಿರುವ ಆಡಿ ಕ್ಯೂ7, ಬಿಎಂಡಬ್ಲ್ಯು ಎಕ್ಸ್5 ಹಾಗೂ ಮರ್ಸಿಡಿಸ್ ಜಿಎಲ್ ಎಸ್ ಮುಂತಾದ ಮಾದರಿಗಳಿಗೆ ಗ್ರಾಂಡ್ ಚೆರೋಕೀ ಪ್ರಿತಿಸ್ಪರ್ಧಿಯಾಗಲಿದೆ.

ಅಂದಾಜು ಬೆಲೆ

ಅಂದಾಜು ಬೆಲೆ

  • ವ್ರ್ಯಾಂಗ್ಲರ್ 25 ಲಕ್ಷ ರು.ಗಳಿಂದ 35 ಲಕ್ಷ ರು.
  • ಗ್ರಾಂಡ್ ಚೆರೋಕೀ 35 ಲಕ್ಷ ರು.ಗಳಿಂದ 45 ಲಕ್ಷ ರು.
  • ಗ್ರಾಂಡ್ ಚೆರೋಕೀ ಎಸ್ ಆರ್ ಟಿ 75 ಲಕ್ಷ ರು.ಗಳಿಂದ
ಕೊನೆಗೂ ಐಕಾನಿಕ್ ಜೀಪ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಇದಕ್ಕೂ ಮೊದಲು ವರ್ಷಾರಂಭದಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಜೀಪ್ ಮಾದರಿಗಳು ಭರ್ಜರಿ ಪ್ರದರ್ಶನ ಕಂಡಿದ್ದವು.

ಜೀಪ್ ಚೆರೋಕೀ ಎಂಜಿನ್ ತಾಂತ್ರಿಕತೆಗಳು

ಜೀಪ್ ಚೆರೋಕೀ ಎಂಜಿನ್ ತಾಂತ್ರಿಕತೆಗಳು

6.4 ಲೀಟರ್ ಎಚ್‌ಇಎಂಐ ವಿ8,

475 ಅಶ್ವಶಕ್ತಿ (6000 ಆರ್‌ಪಿಎಂ) 637 ಎನ್‌ಎಂ ತಿರುಗುಬಲ (4300 ಆರ್‌ಪಿಎಂ)

4.8 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.

ಗರಿಷ್ಠ ವೇಗ ಗಂಟೆಗೆ 257 ಕೀ.ಮೀ.

ಗೇರ್ ಬಾಕ್ಸ್: 8 ಸ್ಪೀಡ್ ಆಟೋಮ್ಯಾಟಿಕ್.

Read more on ಜೀಪ್ jeep
English summary
Jeep Launch In India Confirmed For August 31st
Story first published: Saturday, August 6, 2016, 13:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark