ಹೆದ್ದಾರಿಗಳ ಅಕ್ಕ ಪಕ್ಕ ಮದ್ಯದಂಗಡಿಗಳಿಗೆ ನಿಷೇಧ

Written By:

ದೇಶದ ಎಲ್ಲ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ಎಪ್ರಿಲ್ 01ರಿಂದ ಮುಚ್ಚುಗಡೆಗೊಳಿಸುವಂತೆಯೇ ದೇಶ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ಹೆದ್ದಾರಿಗಳ ಅಕ್ಕ ಪಕ್ಕ ಮದ್ಯದಂಗಡಿಗಳಿಗೆ ನಿಷೇಧ

500 ಮೀಟರ್ ಅಂತರದಲ್ಲಿರುವ ಎಲ್ಲ ಮದ್ಯದಂಗಡಿಗಳನ್ನು ಎಪ್ರಿಲ್ 01ರಿಂದ ಮುಚ್ಚುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಹೆದ್ದಾರಿಗಳ ಅಕ್ಕ ಪಕ್ಕ ಮದ್ಯದಂಗಡಿಗಳಿಗೆ ನಿಷೇಧ

ಅಷ್ಟೇ ಅಲ್ಲದೆ ಎಪ್ರಿಲ್ 01ರಿಂದ ಈ ವ್ಯಾಪ್ತಿಯೊಳಗೆ ಬರುವ ಮದ್ಯದಂಗಡಿಗಳ ಪರವಾನಿಗೆ ನವೀಕರಣ ಮಾಡದಂತೆಯೂ ಸೂಚಿಸಲಾಗಿದೆ.

ಹೆದ್ದಾರಿಗಳ ಅಕ್ಕ ಪಕ್ಕ ಮದ್ಯದಂಗಡಿಗಳಿಗೆ ನಿಷೇಧ

ಸರ್ಕಾರೇತರ ಸಂಸ್ಥೆ ಅರೈವ್ ಸೇಫ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೆರೆಗೆ ಸುಪ್ರೀಂ ಇಂತಹದೊಂದು ಆದೇಶವನ್ನು ಹೊರಡಿಸಿದೆ.

ಹೆದ್ದಾರಿಗಳ ಅಕ್ಕ ಪಕ್ಕ ಮದ್ಯದಂಗಡಿಗಳಿಗೆ ನಿಷೇಧ

ದೇಶದಲ್ಲಿ ವರ್ಷಂಪ್ರತಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದಾರೆ. ಇದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಹೆದ್ದಾರಿಗಳ ಅಕ್ಕ ಪಕ್ಕ ಮದ್ಯದಂಗಡಿಗಳಿಗೆ ನಿಷೇಧ

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ 2015ನೇ ಸಾಲಿನಲ್ಲಿ ದೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ಅಪಘಾತಗಳು ಘಟಿಸಿದ್ದು, 1.46 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.

ಹೆದ್ದಾರಿಗಳ ಅಕ್ಕ ಪಕ್ಕ ಮದ್ಯದಂಗಡಿಗಳಿಗೆ ನಿಷೇಧ

ವರದಿಯನ್ನು ಮತ್ತಷ್ಟು ಆಳವಾಗಿ ಪಠಿಸಿದಾಗ ದೇಶದ ರಸ್ತೆಗಳಲ್ಲಿ ದೈನಂದಿನ 1374 ಅಪಘಾತಗಳು ನಡೆಯುತ್ತಿದ್ದು, 400 ಮಂದಿ ಸಾವನ್ನಪ್ಪುತ್ತಿದ್ದಾರೆ.

ಹೆದ್ದಾರಿಗಳ ಅಕ್ಕ ಪಕ್ಕ ಮದ್ಯದಂಗಡಿಗಳಿಗೆ ನಿಷೇಧ

ಇದನ್ನು ಮತ್ತಷ್ಟು ಸ್ಪಷ್ಟವಾಗಿ ವಿಂಗಡಿಸಿದಾಗ ಪ್ರತಿ ತಾಸಿಗೆ 57ರಷ್ಟು ಅಪಘಾತಗಳು ಘಟಿಸುತ್ತಿದ್ದು, 17 ಮಂದಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.

Read more on ಅಪಘಾತ accident
English summary
No Liquor Shops On National And State Highways: Supreme Court
Story first published: Monday, December 19, 2016, 16:37 [IST]
Please Wait while comments are loading...

Latest Photos