ಇನ್ನು ಮುಂದೆ ಬಲೆನೊದಲ್ಲಿ ಸಂಚರಿಸುವಾಗ ಮಗುವಿನ ಬಗ್ಗೆ ಗಾಬರಿ ಬೇಡ!

Written By:

ಕಾರಿನಲ್ಲಿ ಸಂಚರಿಸುವಾಗ ನಿಮ್ಮ ಮಗುವಿನ ಸುರಕ್ಷತೆಯ ಬಗ್ಗೆ ಗಾಬರಿಯಾಗುವೀರಾ? ಹಾಗಿದ್ದರೆ ಇನ್ನು ಅಂತಹ ಯಾವ ಕೊರಗೂ ಬೇಡ. ಯಾಕೆಂದರೆ ದೇಶದ ಅತ್ಯಂತ ಜನಪ್ರಿಯ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಮಾರುತಿ ಬಲೆನೊದಲ್ಲಿ ಇನ್ನು ಮುಂದೆ ಐಸೊಫಿಕ್ಸ್ (ISOFIX) ಚೈಲ್ಡ್ ಸೇಫ್ಟಿ ಮೌಂಟ್ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

To Follow DriveSpark On Facebook, Click The Like Button
ಇನ್ನು ಮುಂದೆ ಬಲೆನೊದಲ್ಲಿ ಸಂಚರಿಸುವಾಗ ಮಗುವಿನ ಬಗ್ಗೆ ಗಾಬರಿ ಬೇಡ!

ಇವೆಲ್ಲದರೊಂದಿಗೆ ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಮತ್ತಷ್ಟು ಸುರಕ್ಷಿತವೆನಿಸಿದೆ. ಐಸೊಫಿಕ್ಸ್ ಮೌಂಟ್ ಗಳನ್ನು ಹಿಂಭಾಗದ ಸೀಟುಗಳಿಗೆ ಸುಲಭವಾಗಿ ಜೋಡಿಸಬಹುದಾಗಿದೆ.

ಇನ್ನು ಮುಂದೆ ಬಲೆನೊದಲ್ಲಿ ಸಂಚರಿಸುವಾಗ ಮಗುವಿನ ಬಗ್ಗೆ ಗಾಬರಿ ಬೇಡ!

ಇದಕ್ಕೂ ಮೊದಲು ಮಧ್ಯಮ ಗಾತ್ರದ ಸೆಡಾನ್ ಕಾರಾಗಿರುವ ಸಿಯಾಝ್ ನಲ್ಲೂ ಐಸೊಫಿಕ್ಸ್ ಮೌಂಟ್ ಗಳನ್ನು ಮಾರುತಿ ನೀಡಲಾರಂಭಿಸಿತ್ತು. ತನ್ಮೂಲಕ ಮಗುವಿನ ರಕ್ಷಣೆಯಲ್ಲೂ ಹೆಚ್ಚಿನ ಗಮನ ಕೇಂದ್ರಿಕರಿಸಿತ್ತು.

ಇನ್ನು ಮುಂದೆ ಬಲೆನೊದಲ್ಲಿ ಸಂಚರಿಸುವಾಗ ಮಗುವಿನ ಬಗ್ಗೆ ಗಾಬರಿ ಬೇಡ!

ಅಪಘಾತ ಮುಂತಾದ ಸಂದರ್ಭಗಳಲ್ಲಿ ಐಸೊಫಿಕ್ಸ್ ಮೌಂಟ್ ಗಳು ಮಗುವಿನ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಮಾರುತಿ ತನ್ನ ಆಧುನಿಕ ಕಾರುಗಳಲ್ಲಿ ಇಂತಹದೊಂದು ಸುರಕ್ಷಾ ವೈಶಿಷ್ಟ್ಯ ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ.

ಇನ್ನು ಮುಂದೆ ಬಲೆನೊದಲ್ಲಿ ಸಂಚರಿಸುವಾಗ ಮಗುವಿನ ಬಗ್ಗೆ ಗಾಬರಿ ಬೇಡ!

ಮಾರುತಿ ಬಲೆನೊ ಇನ್ನಿತರ ಸುರಕ್ಷಾ ವೈಶಿಷ್ಟ್ಯಗಳ ಬಗ್ಗೆ ಕಣ್ಣಾಯಿಸಿದರೆ ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಫ್ರಂಟ್ ಸೀಟು ಬೆಲ್ಟ್ ಜೊತೆ ಪ್ರಿ-ಟೆನ್ಷನರ್ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಇನ್ನು ಮುಂದೆ ಬಲೆನೊದಲ್ಲಿ ಸಂಚರಿಸುವಾಗ ಮಗುವಿನ ಬಗ್ಗೆ ಗಾಬರಿ ಬೇಡ!

ಅಂದ ಹಾಗೆ ಮಾರುತಿ ಸುಜುಕಿ ಬಲೆನೊ 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿಂದ ನಿಯಂತ್ರಿಸ್ಪಡುತ್ತದೆ. ಇದು ಅನುಕ್ರಮವಾಗಿ 84 (114 ಎನ್ ಎಂ ತಿರುಗುಬಲ) ಹಾಗೂ 74 ಅಶ್ವಶಕ್ತಿ (190 ಎನ್ ಎಂ ತಿರುಗುಬಲ) ಉತ್ಪಾದಿಸುವಷ್ಟು ಸಮರ್ಥವಾಗಿರುತ್ತದೆ.

ಇನ್ನು ಮುಂದೆ ಬಲೆನೊದಲ್ಲಿ ಸಂಚರಿಸುವಾಗ ಮಗುವಿನ ಬಗ್ಗೆ ಗಾಬರಿ ಬೇಡ!

ಏತನ್ಮಧ್ಯೆ ಬಲೆನೊ ಶಕ್ತಿಶಾಲಿ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಮಾರುತಿ ಹೊಂದಿದೆ. ಇದು 2017 ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಇನ್ನು ಮುಂದೆ ಬಲೆನೊದಲ್ಲಿ ಸಂಚರಿಸುವಾಗ ಮಗುವಿನ ಬಗ್ಗೆ ಗಾಬರಿ ಬೇಡ!

ಬಲೆನೊ ಶಕ್ತಿಶಾಲಿ ಆರ್ ಎಸ್ ಆವೃತ್ತಿಯಲ್ಲಿ ಎಲ್ಲರೂ ಕಾತರದಿಂದ ಕಾದು ಕುಳಿತಿರುವ 1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಆಳವಡಿಕೆಯಾಗಲಿದ್ದು, 170 ಎನ್ ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರಲಿದೆ.

English summary
Maruti Suzuki Baleno Now Comes With Important Child Safety Feature As Standard
Story first published: Wednesday, December 28, 2016, 17:24 [IST]
Please Wait while comments are loading...

Latest Photos