ಭಾರತದತ್ತ ಮುಖ ಮಾಡಿದ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರು

Written By:

ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಸಾಧಿಸಿರುವ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನ ಮುಂದಿನ ತಲೆಮಾರಿನ ಆವೃತ್ತಿಯು 2017ನೇ ಸಾಲಿನಲ್ಲಿ ಆಗಮನವಾಗಲಿರುವಂತೆಯೇ ಮಗದೊಂದು ಆಕರ್ಷಕ ಸ್ವಿಫ್ಟ್ ಸ್ಪೋರ್ಟ್ ಕಾರು ಭಾರತದತ್ತ ಮುಖ ಮಾಡಿದೆ. ಕಳೆದೆರಡು ಜನಾಂಗದ ಸ್ವಿಫ್ಟ್ ಮಾದರಿಗಳಲ್ಲಿ ಸ್ಪೋರ್ಟ್ ಆವೃತ್ತಿ ಮಾರಾಟದಲ್ಲಿದ್ದರೂ ಭಾರತಕ್ಕೆ ಇದುವರೆಗೆ ಪ್ರವೇಶ ಮಾಡಿರಲಿಲ್ಲ.

ಭಾರತದತ್ತ ಮುಖ ಮಾಡಿದ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರು

ಕೊನೆಯ ಬಾರಿಗೆ 2014 ಆಟೋ ಎಕ್ಸ್ ಪೋದಲ್ಲಿ ಸ್ವಿಫ್ಟ್ ಸ್ಪೋರ್ಟ್ ಕಾರು ಪ್ರದರ್ಶನಗೊಂಡಿತ್ತು. ಆದರೆ ಇದುವರೆಗೆ ದೇಶದಲ್ಲಿ ಬಿಡುಗಡೆ ಭಾಗ್ಯ ಕಂಡಿರಲಿಲ್ಲ.

ಭಾರತದತ್ತ ಮುಖ ಮಾಡಿದ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರು

2017 ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಚಿತ್ರಗಳು ಆಗಲೇ ಅಂತರ್ಜಾಲದಲ್ಲಿ ಜಾಲಾಡುತ್ತಿದೆ. ಆಕ್ರಮಣಕಾರಿ ಏರ್ ಡ್ಯಾಮ್ ಶೈಲಿ, ಟ್ವಿನ್ ಎಕ್ಸಾಸ್ಟ್ ಕೊಳಪೆ, ಆಕರ್ಷಕ ಸ್ಟೀರಿಂಗ್ ವೀಲ್, ಕೆಂಪು ಪಟ್ಟಿಗಳು ಪ್ರಮುಖವಾಗಿ ಎದ್ದು ಕಾಣಿಸುತ್ತದೆ.

ಭಾರತದತ್ತ ಮುಖ ಮಾಡಿದ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರು

ಬಲ್ಲ ಮೂಲಗಳ ಪ್ರಕಾರ ಹೊಸ ಸ್ವಿಫ್ಟ್ ಸ್ಪೋರ್ಟ್ ಕಾರು 1.4 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 220 ಎನ್ ಎಂ ತಿರುಗುಬಲದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಭಾರತದತ್ತ ಮುಖ ಮಾಡಿದ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರು

ಹೆಸರಲ್ಲೇ ಸೂಚಿಸಿದಂತೆ ನೂತನ ಸ್ವಿಫ್ಟ್ ಸ್ಪೋರ್ಟ್ ಕಾರು ಕೇವಲ ಒಂಬತ್ತು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲು ಸಾಧ್ಯವಾಗಲಿದೆ.

ಭಾರತದತ್ತ ಮುಖ ಮಾಡಿದ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರು

1,000 ಕೆ.ಜಿ ಭಾರದೊಳಗೆ ಗುರುತಿಸಿಕೊಳ್ಳಲಿರುವ ಸ್ವಿಫ್ಟ್ ಸ್ಪೋರ್ಟ್ ಕಾರಿನ ಎಂಜಿನನ್ನು ಮಾರುತಿಯ ಮಾನೇಸರ್ ಘಟಕದಲ್ಲಿ ನಿರ್ಮಿಸಲಾಗುವುದು.

ಭಾರತದತ್ತ ಮುಖ ಮಾಡಿದ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರು

ಇದೇ ಘಟಕದಲ್ಲಿ ಮುಂಬರುವ ಬಲೆನೊ ಆರ್ ಎಸ್ ಆವೃತ್ತಿಗಾಗಿ 1.0 ಲೀಟರ್ ತ್ರಿ ಸಿಲಿಂಡರ್ ಬೂಸ್ಟರ್ ಎಂಜಿನ್ ಸಹ ಅಭಿವೃದ್ಧಿಪಡಿಸಲಾಗುವುದು.

ಭಾರತದತ್ತ ಮುಖ ಮಾಡಿದ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರು

2017 ಮಾರ್ಚ್ ನಲ್ಲಿ ನಡೆಯಲಿರುವ ಜಿನೆವಾ ಮೋಟಾರು ಶೋದಲ್ಲಿ ಹೊಸ ತಲೆಮಾರಿನ ಸ್ವಿಫ್ಟ್ ಜೊತೆಗೆ ನೂತನ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು ಪಾದಾರ್ಪಣೆಗೈಯಲಿದೆ. ಯುರೋಪ್ ಮಾರುಕಟ್ಟೆಯನ್ನು ಮೊದಲು ಕಾಲಿರಿಸಲಿರುವ ಈ ಕಾರುಗಳು ತದಾ ಬಳಿಕದ ಒಂದು ವರ್ಷದ ಅವಧಿಯೊಳಗೆ ಭಾರತಕ್ಕೆ ಪ್ರವೇಶಿಸಲಿದೆ.

ಭಾರತದತ್ತ ಮುಖ ಮಾಡಿದ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರು

2005ನೇ ಇಸವಿಯಲ್ಲಿ ಮೊದಲ ಬಾರಿಗೆ ಭಾರತಕ್ಕೆ ಪ್ರವೇಶಿಸಿರುವ ಮಾರುತಿ ಸ್ವಿಫ್ಟ್ ಇದುವರೆಗೆ ಸೀಮಿತ ಜೊತೆಗೆ ಫೇಸ್ ಲಿಫ್ಟ್ ಆವೃತ್ತಿಗಳನ್ನು ಪಡೆದುಕೊಂಡಿದೆ. ಈ ಸಾಲಿಗೀಗ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು ಸೇರ್ಪಡೆಯಾಗಲಿದೆ.

ಭಾರತದತ್ತ ಮುಖ ಮಾಡಿದ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರು

ನೂತನ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಮತ್ತು ಫಿಯೆಟ್ ಅಬಾರ್ತ್ ಪುಂಟೊ ಮಾದರಿಗಳಿಗೆ ಸೆಡ್ಡು ಒಡ್ಡಲಿದೆ.

English summary
Maruti Suzuki Likely To Launch Swift Sport In India
Story first published: Thursday, October 27, 2016, 15:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark