ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

2017ನೇ ಸಾಲಿನ ಭಾರತದ ವರ್ಷದ ಕಾರು ಪ್ರಶಸ್ತಿಗೆ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಭಾಜನವಾಗಿದೆ.

By Nagaraja

ಸ್ಪರ್ಧಾಕಣದಲ್ಲಿ ಹ್ಯುಂಡೈ ಟಕ್ಸನ್ ಹಾಗೂ ಟೊಯೊಟಾ ಇನ್ನಾವಾಗಳಂತಹ ಪ್ರಭಾವಶಾಲಿ ಕಾರುಗಳನ್ನು ಹಿಂದಿಕ್ಕಿರುವ ನೆಚ್ಚಿನ ಮಾರುತಿ ಸುಜುಕಿ ವಿಟಾರಾ ಬ್ರಿಝಾ, 2017 ಭಾರತದ ವರ್ಷದ ಕಾರು (Indian Car of the Year) ಪ್ರಶಸ್ತಿಗೆ ಭಾಜನವಾಗಿದೆ.

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

ದೇಶದ 15 ನುರಿತ ಆಟೋಮೊಬೈಲ್ ತಜ್ಞರ ಬಳಗವು ಭಾರತದ ವರ್ಷದ ಕಾರು ಪ್ರಶಸ್ತಿಯನ್ನು ಆಯ್ಕೆ ಮಾಡಿದೆ. ನಿಸ್ಸಂಶಯವಾಗಿಯೂ ವಿಟಾರಾ ಬ್ರಿಝಾ ಶ್ರೇಷ್ಠ ಪ್ರದರ್ಶನ ಹೊರ ಹಾಕುವಲ್ಲಿ ಯಶಸ್ವಿಯಾಗಿದೆ.

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

ಇದು 12ನೇ ಬಾರಿಗೆ ಭಾರತದ ವರ್ಷದ ಕಾರು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇಲ್ಲಿ ಪ್ರಮುಖವಾಗಿಯೂ ಕಾರಿನ ಬೆಲೆ, ಇಂಧನ ಕ್ಷಮತೆ, ವಿನ್ಯಾಸ, ಆರಾಮದಾಯಕತೆ, ಸುರಕ್ಷತೆ, ವೈಶಿಷ್ಟ್ಯತೆ, ನಿರ್ವಹಣೆ, ಪ್ರಾಯೋಗಿಕ ಅಂಶ, ತಾಂತ್ರಿಕವಾಗಿ ಹೊಸತನ, ಹಣಕ್ಕೆ ತಕ್ಕ ಮೌಲ್ಯ ಮತ್ತು ಭಾರತೀಯ ರಸ್ತೆಗೆ ಎಷ್ಟು ಹೊಂದಿಕೆಯಾಗಲಿದೆಯೆಂಬ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ.

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

2016 ಮಾರ್ಚ್ 08ರಂದು ಬಿಡುಗಡೆಯಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಕಾರನ್ನು ಸಿವಿ ರಾಮನ್ ನೇತೃತ್ವದಲ್ಲಿ ಭಾರತದಲ್ಲಿರುವ ಮಾರುತಿ ಸಂಶೋಧನಾ ಹಾಗೂ ಅಭಿವೃದ್ಧಿ ಘಟಕದಲ್ಲಿ ವಿನ್ಯಾಸಗೊಳಿಸಲಾಗಿತ್ತು.

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

ಬಿಡುಗಡೆಯಾದ ಎಂಟು ತಿಂಗಳ ಕಿರು ಅವಧಿಯಲ್ಲೇ ಮಾರುತಿ ವಿಟಾರ ಬ್ರಿಝಾ 1.72 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಗಿಟ್ಟಿಸಿಕೊಂಡಿದೆ. ಇದು ವಿಟಾರಾ ಬ್ರಿಝಾ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

ದೇಶದಲ್ಲಿ ಇದುವರೆಗೆ 70,000ಕ್ಕೂ ವಿಟಾರಾ ಬ್ರಿಝಾವನ್ನು ಮಾರಾಟ ಮಾಡಲಾಗಿದೆ. ಪ್ರಸ್ತುತ ನಿರ್ದಿಷ್ಟ ಅವಧಿಗೆ ಕಾಯುವಿಕೆ ಅವಧಿ ಏಳು ತಿಂಗಳುಗಳ ವರೆಗೆ ವರ್ಧಿಸಿದೆ.

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

ಇನ್ನೊಂದೆಡೆ ವಿಟಾರಾ ಬ್ರಿಝಾ ನಿರ್ಮಾಣ ಸಾಮರ್ಥ್ಯವನ್ನು 10,000 ಯುನಿಟ್ ಗಳಿಗೆ ಏರಿಸಿದರೂ ಸಹ ಗಣನೀಯ ಬೇಡಿಕೆಯನ್ನು ಈಡೇರಿಸಲು ಮಾರುತಿ ತಡಕಾಡುತ್ತಿದೆ.

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

ಉಪಯುಕ್ತ ವಾಹನ ವಿಭಾಗದಲ್ಲಿ ಕ್ರಾಂತಿಕಾರಿ ಅಲೆಯೆಬ್ಬಿಸಿರುವ ವಿಟಾರಾ ಬ್ರಿಝಾ ನೆರವಿನೊಂದಿಗೆ ಮಾರುತಿ ಸುಜುಕಿ 2016 ಎಪ್ರಿಲ್ ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ 1,09,967 ಯುನಿಟ್ ಗಳ ಮಾರಾಟವನ್ನು ಕಂಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದಾಗ ಶೇಕಡಾ 139ರಷ್ಟು ಏರಿಕೆ ಕಂಡಿದೆ. ಕಳೆದ ಸಾಲಿನಲ್ಲಿ 46,068 ಯುನಿಟ್ ಗಳಷ್ಟು ಮಾರಾಟವನ್ನು ದಾಖಲಿಸಿತ್ತು.

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

ಭಾರತದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ವಿಟಾರಾ ಬ್ರಿಝಾ 7.19 ಲಕ್ಷ ರು.ಗಳಿಂದ 9.88 ಲಕ್ಷ ರುಪಾಯಿಗಳ ವರೆಗೆ ದುಬಾರಿಯೆನಿಸುತ್ತದೆ.

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

ಇದರಲ್ಲಿರುವ 200 ಡಿಡಿಐಎಸ್ ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 88.5 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿದೆ.

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

ನೂತನ ವಿಟಾರಾ ಬ್ರಿಝಾ ಇಂಧನ ಕ್ಷಮತೆಯಲ್ಲೂ ಯಾವುದೇ ರಾಜಿಗೆ ತಯಾರಾಗಿಲ್ಲ. ಇದು ಪ್ರತಿ ಲೀಟರ್ ಗೆ 24.3 ಕೀ.ಮೀ. ಮೈಲೇಜ್ ಕಾಪಾಡಿಕೊಂಡಿದೆ.

ಹೊರಮೈ

ಹೊರಮೈ

ಶಕ್ತಿಯುತ ಫ್ರಂಟ್ ಗ್ರಿಲ್, ಕ್ರೋಮ್ ಫಿನಿಶ್,

ಸಿಗ್ನೇಚರ್ 'ಬಲ್ ಹಾರ್ನ್' ಎಲ್ ಇಡಿ ಲೈಟ್ ಗೈಡ್,

ಪ್ರೊಜೆಕ್ಟರ್ ಹೆಡ್ ಲ್ಯಾಂಪ್

ತೇಲುವಂತಹ ಮೇಲ್ಚಾವಣಿ, ಕಾಂಟ್ರಾಸ್ಟ್ ಬಣ್ಣ,

ಒಳಮೈ

ಒಳಮೈ

ಕ್ರೂಸ್ ಕಂಟ್ರೋಲ್ ಜೊತೆ ಬ್ಲೂಟೂತ್ ಹ್ಯಾಂಡ್ಸ್ ಫ್ರೀ ಕಂಟ್ರೋಲ್,

ರೈನ್ ಸೆನ್ಸಿಂಗ್ ಆಟೋ ವೈಪರ್,

ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಪಲ್ ಕಾರ್ ಪ್ಲೇ,

ಪುಶ್ ಸ್ಟ್ಯಾರ್ಟ್ ಜೊತೆ ಸ್ಮಾರ್ಟ್ ಕೀಲೆಸ್ ಎಂಟ್ರಿ,

ಆಟೋ ಹೆಡ್ ಲೈಟ್,

ಒಳಮೈ

ಒಳಮೈ

ಹಿಂದುಗಡೆ 60:40 ವಿಭಜಿತ ಸೀಟು,

ಹೆಚ್ಚು ಸ್ಥಳಾವಕಾಶ, ಆರಾಮ, ಅನುಕೂಲತೆ,

ರೈನ್ ಸೆನ್ಸಿಂಗ್ ಆಟೋ ವೈಪರ್,

ನಿಯೋನ್ ಗೇಮ್ಆನ್ - ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ ಮೂಡ್ ಲೈಟ್ಸ್.

ಬಣ್ಣಗಳು

ಬಣ್ಣಗಳು

ಬ್ಲೇಜಿಂಗ್ ರೆಡ್ ಜೊತೆ ಮಿಡ್ ನೈಟ್ ಬ್ಲ್ಯಾಕ್

ಫಿಯರಿ ಯಲ್ಲೋ ಜೊತೆ ಪಿಯರ್ಲ್ ಆರ್ಕಟಿಕ್ ವೈಟ್

ಸೆರೂಲಿಯನ್ ಬ್ಲೂ ಜೊತೆ ಪಿಯರ್ಲ್ ಆರ್ಕಟಿಕ್ ವೈಟ್

ಫಿಯರಿ ಯಲ್ಲೋ,

ಪಿಯರ್ಲ್ ಆರ್ಕಟಿಕ್ ವೈಟ್,

ಬ್ಲೇಜಿಂಗ್ ರೆಡ್,

ಪ್ರೀಮಿಯಂ ಸಿಲ್ವರ್,

ಸೆರೂಲಿಯನ್ ಬ್ಲೂ,

ಗ್ರಾನೈಟ್ ಗ್ರೇ.

ಸುರಕ್ಷತೆ

ಸುರಕ್ಷತೆ

ಸುಜುಕಿ ಟೆಕ್ಟ್ - ಟೋಟಲ್ ಎಫೆಕ್ಟಿವ್ ಕಂಟ್ರೋಲ್ ಟೆಕ್ನಾಲಜಿ,

ಫ್ರಂಟ್ ಸೀಟು ಬೆಲ್ಟ್ ಜೊತೆ ಪ್ರಿ ಟೆನ್ಷನರ್ ಮತ್ತು ಫೋರ್ಸ್ ಲಿಮಿಟರ್,

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,

ಡ್ಯುಯಲ್ ಏರ್ ಬ್ಯಾಗ್,

ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್

ಉಪಯುಕ್ತತೆ

ಉಪಯುಕ್ತತೆ

ಚಾಲಕ ಬದಿಯ ಪಾಕೆಟ್ ಮತ್ತು ಟಿಕೆಟ್ ಹೋಲ್ಡರ್,

ಇಲ್ಯೂಮಿನೇಟಡ್ ಗ್ಲೋವ್ ಬಾಕ್ಸ್ ಜೊತೆ ಕಾರ್ಡ್ ಹೋಲ್ಡರ್,

ಡೋರ್ ಬಾಟಲಿ ಹೋಲ್ಡರ್,

ಫ್ಲೋರ್ ಕನ್ಸಾಲ್ ಜೊತೆ ಕಪ್ ಹೋಲ್ಡರ್,

ಉಪಯುಕ್ತತೆ

ಉಪಯುಕ್ತತೆ

ಫ್ರಂಟ್ ಸ್ಲೈಡಿಂಗ್ ಸೆಂಟರ್ ಆರ್ಮ್ ರೆಸ್ಟ್,

ಸೀಟು ಹಿಂದುಗಡೆ ಪಾಕೆಟ್ ಮತ್ತು ಕುಕ್ಕೆ,

ಕೋಟು ಹ್ಯಾಂಗರ್,

ರಿಯರ್ ಆರ್ಮ್ ರೆಸ್ಟ್.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 3995

ಅಗಲ: 1790

ಎತ್ತರ: 1640

ಚಕ್ರಾಂತರ: 2500

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

ಢಿಕ್ಕಿ ಜಾಗ: 328 ಲೀಟರ್

ಇಂಧನ ಟ್ಯಾಂಕ್ ಸಾಮರ್ಥ್ಯ: 48 ಲೀಟರ್

ಟರ್ನಿಂಗ್ ರೇಡಿಯಸ್: 5.2 ಮೀಟರ್

ಆಸನ ಸಾಮರ್ಥ್ಯ: ಐದು ಪ್ರಯಾಣಿಕರಿಗೆ

ಭಾರ: 1680 ಕೆ.ಜಿ

ಬ್ರೇಕ್

ಬ್ರೇಕ್

ಮುಂಭಾಗ: ವೆಂಟಿಲೇಟಡ್ ಡಿಸ್ಕ್

ಹಿಂಭಾಗ: ಡ್ರಮ್

ಸಸ್ಪೆನ್ಷನ್

ಸಸ್ಪೆನ್ಷನ್

ಮುಂಭಾಗ: ಮೆಕ್ ಫೆರ್ಸನ್ ಸ್ಟ್ರಟ್ ಜೊತೆ ಕಾಯಿಲ್ ಸ್ಪ್ರಿಂಗ್

ಹಿಂಭಾಗ: ಟಾರ್ಸಿಯನ್ ಬೀಮ್ ಜೊತೆ ಕಾಯಿಲ್ ಸ್ಪ್ರಿಂಗ್

ಚಕ್ರಗಳು

ಚಕ್ರಗಳು

205/60 R16 (ಸ್ಟೀಲ್ ಚಕ್ರ)

215/60 R16 (ಅಲಾಯ್ ಚಕ್ರ)

ವೆರಿಯಂಟ್

ವೆರಿಯಂಟ್

ಎಲ್ ಡಿಐ

ಎಲ್ ಡಿಐ (ಐಚ್ಛಿಕ)

ವಿಡಿಐ

ವಿಡಿಐ (ಐಚ್ಛಿಕ)

ಝಡ್ ಡಿಐ

ಝಡ್ ಡಿಐ ಪ್ಲಸ್

ವಿಟಾರಾ ಬ್ರಿಝಾ ಭಾರತದ ವರ್ಷದ ಕಾರು; ಕಾರಣಗಳೇನು?

ಇವೆಲ್ಲದರ ಜೊತೆಗೆ ಗ್ರಾಹಕರ ವಿಶಿಷ್ಟ ಅನುಭವಕ್ಕಾಗಿ 'ಐಕ್ರಿಯೇಟ್' ಎಂಬ ವಿಶೇಷ ವೈಯಕ್ತೀಕರಣ ಪ್ಯಾಕೇಜನ್ನು ವಿಟಾರಾ ಬ್ರಿಝಾ ಕಾರಿನಲ್ಲಿ ಒದಗಿಸಲಾಗುತ್ತಿದೆ.

Most Read Articles

Kannada
English summary
Maruti Suzuki Vitara Brezza Is The Indian Car Of The Year (ICOTY) 2017
Story first published: Thursday, December 22, 2016, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X