ಭಾರತಕ್ಕೆ ಬರುತ್ತಾ ಸುಜುಕಿ ಸ್ವಿಫ್ಟ್ ಶಕ್ತಿಶಾಲಿ ಆವೃತ್ತಿ ?

By Nagaraja

ಈಗಿರುವ ಮೂರನೇ ತಲೆಮಾರಿನ ಸುಜುಕಿ ಸ್ವಿಫ್ಟ್ (ಸುಜುಕಿ ವೈಪಿ6), 2010ನೇ ಇಸವಿಯಿಂದಲೇ ಭಾರತದಲ್ಲಿ ಮಾರುತಿ ಸ್ವಿಫ್ಟ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಈಗ ಬಂದಿರುವ ಸುದ್ದಿಯ ಪ್ರಕಾರ ನಾಲ್ಕನೇ ತಲೆಮಾರಿನ ಸುಜುಕಿ ಸ್ವಿಫ್ಟ್ 2017ನೇ ಸಾಲಿನಿಂದ ಮಾರಾಟಕ್ಕೆ ಲಭ್ಯವಾಗಲಿದೆ.

ಅಬ್ಬಬ್ಬಾ, ಮಾರುತಿ ಸ್ವಿಫ್ಟ್ ಮೈಲೇಜ್ 48.2 ಕೀ.ಮೀ. ನಂಬ್ತೀರಾ ? ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿರಿ

ಹಾಗಿದ್ದರೂ 2017 ಮಾರುತಿ ಸ್ವಿಫ್ಟ್ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆಯೇ ಎಂಬುದು ಇನ್ನೂ ಖಚಿತಗೊಂಡಿಲ್ಲ. 2017 ಸುಜುಕಿ ಸ್ವಿಫ್ಟ್ ಯುರೋಪ್ ಆವೃತ್ತಿಯು ನೂತನ ನಿರ್ವಹಣಾ ವೆರಿಯಂಟ್ ಆಗಿರುವ 'ಸ್ಪೋರ್ಟ್' ಪಡೆಯಲಿದೆ.

ಭಾರತಕ್ಕೆ ಬರುತ್ತಾ ಸುಜುಕಿ ಸ್ವಿಫ್ಟ್ ಶಕ್ತಿಶಾಲಿ ಆವೃತ್ತಿ ?

ನೂತನ ಶಕ್ತಿಶಾಲಿ ವೆರಿಯಂಟ್ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಎಂದೆನಿಸಿಕೊಳ್ಳಲಿದ್ದು, 2017 ದ್ವಿತೀಯಾರ್ಧದಲ್ಲಿ ಬ್ರಿಟನ್ ಸೇರಿದಂತೆ ಯುರೋಪ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಭಾರತಕ್ಕೆ ಬರುತ್ತಾ ಸುಜುಕಿ ಸ್ವಿಫ್ಟ್ ಶಕ್ತಿಶಾಲಿ ಆವೃತ್ತಿ ?

2017 ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯಲ್ಲಿ ಹೊಸತಾದ ಕೆ14ಸಿ-ಡಿಐಟಿಸಿ 1.4 ಲೀಟರ್ ಬೂಸ್ಟರ್ ಜೆಟ್ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಬಳಕೆಯಾಗಲಿದೆ ಎಂಬುದೀಗ ಹಾಟ್ ಸುದ್ದಿ.

ಭಾರತಕ್ಕೆ ಬರುತ್ತಾ ಸುಜುಕಿ ಸ್ವಿಫ್ಟ್ ಶಕ್ತಿಶಾಲಿ ಆವೃತ್ತಿ ?

ಇದರ 1.4 ಲೀಟರ್ ಬೂಸ್ಟರ್ ಜೆಟ್ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ 220 ಎನ್ ಎಂ ತಿರುಗುಬಲದಲ್ಲಿ 138.07 ಅಶ್ವಶಕ್ತಿಯನ್ನು (103 ಕೆಡಬ್ಲ್ಯು) ಉತ್ಪಾದಿಸಲಿದೆ.

ಭಾರತಕ್ಕೆ ಬರುತ್ತಾ ಸುಜುಕಿ ಸ್ವಿಫ್ಟ್ ಶಕ್ತಿಶಾಲಿ ಆವೃತ್ತಿ ?

ನೂತನ ಸುಜುಕಿ ಸ್ವಿಫ್ಟ್ ನಲ್ಲಿ ಶಕ್ತಿಶಾಲಿ ಎಂಜಿನ್ ಜೊತೆಗೆ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೋಡಣೆಯಾಗಲಿದೆ. ಅಲ್ಲದೆ ಕ್ರೀಡಾ ವೆರಿಯಂಟ್ ಗೆ ತಕ್ಕಂತೆ ಸ್ಪೋರ್ಟಿ ಬಾಡಿ ಕಿಟ್ ಸಹ ಲಭ್ಯವಾಗಲಿದೆ.

ಭಾರತಕ್ಕೆ ಬರುತ್ತಾ ಸುಜುಕಿ ಸ್ವಿಫ್ಟ್ ಶಕ್ತಿಶಾಲಿ ಆವೃತ್ತಿ ?

ನೂತನ ಸುಜುಕಿ ಸ್ವಿಫ್ಟ್ ಭಾರ ಗಣನೀಯವಾಗಿ ಕಡಿತಗೊಳಿಸಲಾಗಿದ್ದು, ಗರಿಷ್ಠ ಇಂಧನ ಕ್ಷಮತೆಗೆ ಆದ್ಯತೆ ಕೊಡಲಾಗಿದೆ.

ಭಾರತಕ್ಕೆ ಬರುತ್ತಾ ಸುಜುಕಿ ಸ್ವಿಫ್ಟ್ ಶಕ್ತಿಶಾಲಿ ಆವೃತ್ತಿ ?

2016 ಪ್ಯಾರಿಸ್ ಮೋಟಾರ್ ಶೋದಲ್ಲಿ ಪ್ರದರ್ಶನ ಕಾಣಲಿರುವ 2017 ಸುಜುಕಿ ಸ್ವಿಫ್ಟ್, ಸುಜುಕಿ ಬಲೆನೊ ನಿರ್ಮಾಣಗೊಂಡಿರುವ ಅದೇ ನ್ಯೂ ಜನರೇಷನ್ ತಳಹದಿಯಲ್ಲಿ ಅಭಿವೃದ್ಧಿಗೊಳ್ಳಲಿದೆ.

ಭಾರತಕ್ಕೆ ಬರುತ್ತಾ ಸುಜುಕಿ ಸ್ವಿಫ್ಟ್ ಶಕ್ತಿಶಾಲಿ ಆವೃತ್ತಿ ?

ಸ್ಟ್ಯಾಂಡರ್ಡ್ ವೆರಿಯಂಟ್ ಕೆ12ಸಿ 1.2 ಲೀಟರ್ ಡ್ಯುಯಲ್ ಜೆಟ್ ನೈಸರ್ಗಿಕವಾಗಿ ಚೋಷಿತ ಫೋರ್ ಸಿಲಿಂಡರ್ ವೆರಿಯಂಟ್ ಪೆಟ್ರೋಲ್ ಜೊತೆ ಸುಜುಕಿ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನವೂ ಬಳಕೆಯಾಗಲಿದೆ.

ಭಾರತಕ್ಕೆ ಬರುತ್ತಾ ಸುಜುಕಿ ಸ್ವಿಫ್ಟ್ ಶಕ್ತಿಶಾಲಿ ಆವೃತ್ತಿ ?

ಇನ್ನು ಸುಜುಕಿ ಬಲೆನೊದಿಂದ ಆಮದು ಮಾಡಲಾಗುವುದು ಕೆ10ಸಿ ಡಿಐಟಿಸಿ 1.0 ಲೀಟರ್ ಟರ್ಬೊಚಾರ್ಜ್ಡ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆವೃತ್ತಿಯು ಮಗದೊಂದು ಆಕರ್ಷಣೆಯಾಗಲಿದೆ.

ಭಾರತಕ್ಕೆ ಬರುತ್ತಾ ಸುಜುಕಿ ಸ್ವಿಫ್ಟ್ ಶಕ್ತಿಶಾಲಿ ಆವೃತ್ತಿ ?

ಇವೆಲ್ಲದಕ್ಕೂ ಹೊರತಾಗಿ ಭಾರತದಲ್ಲಿ ಸುಜುಕಿ ತನ್ನದೇ ತಳಹದಿಯಲ್ಲಿ ಅಭಿವೃದ್ಧಿಗೊಳಿಸುತ್ತಿರುವ ನೂತನ ಡೀಸೆಲ್ ಎಂಜಿನ್ ಆಯ್ಕೆಯೂ ಲಭ್ಯವಾಗುವ ನಿರೀಕ್ಷೆಯಿದೆ.

ಇವನ್ನೂ ಓದಿ...

ಭಾರತದ ಜನಪ್ರಿಯ ಕಾರು ಸ್ವಿಫ್ಟ್ ಕುರಿತಾಗಿನ 9 ಸತ್ಯಗಳು!

ಇವನ್ನೂ ಓದಿ...

ಡಿಸಿ ಡಿಸೈನ್ ಗರಡಿಯಲ್ಲಿ ಪಳಗಿ ಬಂದ ಮಾರುತಿ ಸ್ವಿಫ್ಟ್‌

Most Read Articles

Kannada
English summary
New Suzuki Swift Sport To Go Turbo In 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X